Home ಜಿಲ್ಲೆ ಕಲಬುರಗಿ ಸಾರ್ವಜನಿಕ ಶಿಕ್ಷಣ ಉಳಿವಿಗೆ ಒಗ್ಗಟ್ಟಿನ ಹೋರಾಟ ಒಂದೇ ದಾರಿ

ಸಾರ್ವಜನಿಕ ಶಿಕ್ಷಣ ಉಳಿವಿಗೆ ಒಗ್ಗಟ್ಟಿನ ಹೋರಾಟ ಒಂದೇ ದಾರಿ

ಕಾಳಗಿ :ಫೆ.6:ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ರಾಜ್ಯದಾದ್ಯಂತ 40,000 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ, ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ, ನಮ್ಮೂರ ಶಾಲೆ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಕಾಳಗಿ ತಾಲೂಕು ಮಟ್ಟದ ಪ್ರತಿರೋಧ ಸಮಾವೇಶವನ್ನು ಹೊಸ ಬಸ್ ನಿಲ್ದಾಣ ಮುಂದುಗಡೆ ನಡೆಸಲಾಯಿತು.

ಈ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಂIUಖಿUಅ ಕಾರ್ಮಿಕರ ಸಂಘಟನೆಯ ಮುಖಂಡರಾದ ಕಾ. ಎಸ್.ಎಮ್ ಶರ್ಮಾ ಅವರು ಮಾತನಾಡುತ್ತಾ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರಂತರವಾಗಿ ಸಾರ್ವಜನಿಕ ಕಿತ್ತುಕೊಳ್ಳುತ್ತಿದೆ, ಬಡತನ ತಾಂಡವ ಆಡುತ್ತಿದೆ, ಸರ್ಕಾರಿ ಶಾಲೆಗಳ ಪರಿಸ್ಥಿತಿ ಕೆಟ್ಟು ಹೋಗಿ ಗುಣಮಟ್ಟ ಬಿದ್ದಿದೆ. ಸರ್ಕಾರಗಳು ರೈತ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಸರ್ಕಾರಿ ಶಾಲೆಗಳನ್ನು ಬಲಪಡಿಸುವುದನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿರುವುದು ಹಾಗೂ ಕಾಪೆರ್Çರೇಟ್ ಕಂಪನಿಗಳಿಂದ ಇದಕ್ಕೆ ಸಾಲ ಪಡೆಯುತ್ತಿರುವುದು ಇದಕ್ಕೆ ಎಲ್ಲಾ ಸರ್ಕಾರಗಳು ಸಹ ಮತವಾಗಿ ನಿಂತುಕೊಂಡಿರುವುದು ಈ ವ್ಯವಸ್ಥೆಯ ಕ್ರೂರ ರೂಪವಾಗಿದೆ. ಇಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಲು ಜನಗಳ ಒಗ್ಗಟ್ಟಿನ ಹೋರಾಟ ಒಂದೇ ದಾರಿ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಂIಆSಔ ರಾಜ್ಯ ಉಪಾಧ್ಯಕ್ಷರಾದ ಹಣಮಂತ್ ಎಸ್.ಹೆಚ್ ಮಾತನಾಡುತ್ತಾ, ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣವನ್ನು ಬಲಪಡಿಸಬೇಕಾದಂತಹ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಇರುವಂತಹ (ಏಏಖಆಃ) ನಿಧಿಯನ್ನು ಇಲ್ಲಿನ ಶಾಲೆಗಳನ್ನು ಮುಚ್ಚಲು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನಾವು ಬಿಜೆಪಿಗಿಂತ ಭಿನ್ನ ಎಂಬ ಮಾತಿನೊಂದಿಗೆ ರಾಜ್ಯದಲ್ಲಿ ಎನ್‍ಎಪಿಯನ್ನು ರದ್ದು ಮಾಡುವುದರ ಮೂಲಕ ಅಧಿಕಾರಕ್ಕೆ ಬಂದು, ಇವಾಗ ಆ ಎನ್ ಎಪಿಯ ಭಾಗವಾಗಿರುವ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಶಾಲಾ ಸಂಕಿರಣಗಳನ್ನು ರಚಿಸುವುದು, ಇದರೊಂದಿಗೆ ಬೇರೆ ಶಾಲೆಗಳನ್ನು ವಿಲೀನ ಮಾಡುವುದು ಎಲ್ಲವನ್ನು ಹೆಸರು ಬದಲಾವಣೆಗಳೊಂದಿಗೆ ಅಕ್ಷರಶಃ ಜಾರಿಗೆ ತರುತ್ತಿದೆ. ಸರ್ಕಾರವು ಪ್ರತಿ ಹಳ್ಳಿಗೆ ಬಸ್ ಬಿಡುತ್ತೇವೆ ಎಂದು ರೈಲು ಬಿಡುತ್ತಿದ್ದಾರೆ. ಆದರೆ ಈಗಾಗಲೇ ಎಷ್ಟೋ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಾಸ್ತವತೆ ಹೀಗಿರುವಾಗ, 1-5 ಕೀ.ಮಿ ದೂರದ ಶಾಲೆಯನ್ನು ತಲುಪಲಾಗದೆ ಬಡ ಮಕ್ಕಳು ಶಿಕ್ಷಣದಿಂದ ಸಂಪೂರ್ಣವಾಗಿ ದೂರವಾಗುತ್ತಾರೆ. ಈ ಯೋಜನೆಗೆ ಏಷಿಯನ್ ಡೆವಲಪೈಂಟ್ ಬ್ಯಾಂಕಿನಿಂದ ಈಗಾಗಲೇ 2,000 ಕೋಟಿ ಸಾಲ ಪಡೆದಿರುವ ಮತ್ತು 10,000 ಕೋಟಿ ಸಾಲ ಪಡೆಯಲಿರುವ ಸರ್ಕಾರವು ಕಾಪೆರ್Çರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೋರ್ವ ಭಾಷಣಕಾರರಾಗಿ ಂIಆSಔ ರಾಜ್ಯ ಉಪಾಧ್ಯಕ್ಷರಾದ, ಚಂದ್ರಕಲಾ ಮಾತನಾಡುತ್ತಾ, ರಾಜ್ಯದಲ್ಲಿ ಜನಗಳ ಪ್ರತಿರೋಧದ ನಡುವೆಯೂ ಕೂಡ ಮಾನ್ಯ ಮುಖ್ಯಮಂತ್ರಿಗಳು ಕಲಬುರಗಿ ಜಿಲ್ಲೆಯಲ್ಲಿ 300 ಕೆಪಿಎಸ್ ಶಾಲೆಗಳಿಗೆ ಶಂಕುಸ್ಥಾಪನೆ ಮಾಡಿರುವುದು ಜನಗಳಿಗೆ ಬಗೆಯುತ್ತಿರುವ ದ್ರೋಹವಾಗಿದೆ. ಮಾತಿಗೆ ಒಮ್ಮೊಮ್ಮೆ ನಾವು ಬಡವರ ಪರ, ಹಿಂದುಳಿದ ವರ್ಗದ ಪರ , ಸಮಾಜವಾದಿಗಳು ಎಂದು ಮಾತನಾಡುತ್ತಾರೆ ಬಡವರಿಂದ ಶಿಕ್ಷಣ ಕಿತ್ತುಕೊಳ್ಳುವುದು ಬಡವರ ಪರ ನಾ? ಎಂದು ಪ್ರಶ್ನಿಸಿದರು. ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಉಚಿತ ಸಾರಿಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಪಾಲಕರು ಮತ್ತು ಎಸ್ ಡಿ ಎಮ್ ಸಿ(Sಆಒಅ) ಯವರ ಮೇಲೆ ಸಾರಿಗೆ ವ್ಯವಸ್ಥೆಯ ಹೊರೆ ಹೊರೆಸಲಾಗುತ್ತಿದೆ. ಪ್ರತಿಯೊಂದು ಶಾಲೆಯು ತನ್ನ ಆದಾಯದ ಮೂಲವನ್ನು ತಾವೇ ಹುಡುಕಿಕೊಳ್ಳಬೇಕು ಎಂದು ಹೇಳಿರುವುದು ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣದ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯದ ಬಡ ರೈತ-ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಸಂಪೂರ್ಣವಾಗಿ ಕಸೆದುಕೊಳ್ಳುವ ಈ ನೀತಿ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿದರು. ಜಿಲ್ಲಾ ಅಧ್ಯಕ್ಷರಾದ ತುಳಜರಾಮ ಎನ್ ಕೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೋಡ್ಡಮನಿ, ಗೋವಿಂದ ಯಳವರ, ನಾಗರಾಜ ರಾವೂರ ಖಜಾಂಚಿ ಸ್ಪೂರ್ತಿ ಗುರುಜಲ್ಕರ್, ಸದಸ್ಯರಾದ , ದೇವರಾಜ್ ರಾಜೋಳ್ಕರ, ರಾಹುಲ ಜಾದವ್, ಬಾಬು ಪವರ್, ಯುವರಾಜ್ ರಾಠೋಡ ಸೇರಿದಂತೆ ಅನೇಕರಿದ್ದರು.