Home ಜಿಲ್ಲೆ ಕಲಬುರಗಿ ಮಹಿಳೆಯರಿಂದ ಸಮಾಜಮುಖಿ ಆಚರಣೆ: ಚಿತ್ತಾಪುರದಲ್ಲಿ ಕಳೆಗಟ್ಟಿದ ಗಣೇಶೋತ್ಸವ

ಮಹಿಳೆಯರಿಂದ ಸಮಾಜಮುಖಿ ಆಚರಣೆ: ಚಿತ್ತಾಪುರದಲ್ಲಿ ಕಳೆಗಟ್ಟಿದ ಗಣೇಶೋತ್ಸವ

ಚಿತ್ತಾಪುರ :ಸಮೀಪದ ಸಂತೋಷ್ ನಗರದ ಮಹಾಕಾಳ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ಗಣೇಶೋತ್ಸವದ ಧಾರ್ಮಿಕ ಸಭೆಯು ಗುರುವಾರ ಸಂಜೆ ಅತ್ಯಂತ ವಿಜೃಂಭಣೆಯಿAದ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನರಸಪ್ಪ ಚಿನ್ನಾಕಟ್ಟಿ, “ಶ್ರೀ ಗಜಾನನನು ಜ್ಞಾನ ಮತ್ತು ಬುದ್ಧಿಯ ಸಂಕೇತ. ಮಹಿಳೆಯರೆಲ್ಲರೂ ಒಂದಾಗಿ ಸೇರಿ ಕೂರಿಸುವ ಈ ವಿಶೇಷ ಗಣೇಶೋತ್ಸವ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಕೂಡಿದೆ. ಇಲ್ಲಿ ಸರ್ವ ಜನಾಂಗದವರು ಯಾವುದೇ ಭೇದ-ಭಾವವಿಲ್ಲದೆ ಒಗ್ಗೂಡಿ ಹಬ್ಬ ಆಚರಿಸುತ್ತಿರುವುದು ಇಡೀ ಸಮಾಜಕ್ಕೇ ಮಾದರಿಯಾಗಿದೆ” ಎಂದು ಬಣ್ಣಿಸಿದರು.
ಪುರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಕಲ್ಲಕ ಮಾತನಾಡಿ, “ದೇಶದ ಸ್ವಾತಂತ್ರ‍್ಯ ಸಂಗ್ರಾಮದ ಸಮಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಮೂಲಕ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದರು. ಅದೇ ಮಾದರಿಯಲ್ಲಿ ಇಂದು ಮಹಿಳಾ ಮಂಡಳಿಯು ಸಮಾಜವನ್ನು ಒಂದಗೂಡಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ” ಎಂದರು.
ಉತ್ಸವದ ಅಂಗವಾಗಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ವಿವಿಧ ದೇಶೀ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ತದನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.
ಸಭೆಯಲ್ಲಿ ಬಸವರಾಜ್ ಮುಡಬೂಳಕರ್, ಸಾಬಣ್ಣ ತಳವಾರ್, ಮಂಜುನಾಥ್ ಕೊಹಿನೂರ್, ಶರಣಯ್ಯ ಸ್ವಾಮಿ, ವಿಶ್ವನಾಥ್ ಕೊಹಿನೂರ್, ಶಶಾಂಕ್, ಭುವನ್, ಮಲ್ಲು ನಂದಿಕೋಲ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಂಡಳಿಯ ಅಧ್ಯಕ್ಷೆ ಆಶಾಬಾಯಿ ಗುತ್ತೇದಾರ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀದೇವಿ ತಳವಾರ್, ಕ್ಯಾದಾಬಾಯಿ ಬುರ್ಲಿ, ಬಂಡೆಮ್ಮ ಹಿರೇಮಠ್, ನೀಲಮ್ಮ ಕೊಯ್ನೂರ್, ಬಸ್ಸಮ್ಮ ಹಡಪದ್, ಪೂಜಾ ತಳವಾರ್, ಸುಜಾತಾ ಬುರ್ಲಿ ಹಾಗೂ ಮಂಡಳಿಯ ಪದಾಧಿಕಾರಿಗಳು, ಸದಸ್ಯೆಯರು ಮತ್ತು ಬಡಾವಣೆಯ ನೂರಾರು ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.