
ಕಲಬುರಗಿ:ಜ.12:ನಮ್ಮತನ, ಹೃದಯ ಶ್ರೀಮಂತಿಕೆ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊಡುವ, ನಮ್ಮದೇಶದ ಮೂಲ ಸಂಸ್ಕøತಿ, ಪರಂಪರೆಯಾದಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ. ಜಾನಪದದಿಂದದೂರ ಸರಿದರೆ ಸಮಾಜಕ್ಕೆಆಪತ್ತಿದೆ. ಸಂಗೀತದಿಂದ ಮಾನಸಿಕ ನೆಮ್ಮದಿ ಸಾಧ್ಯವಿದ್ದು, ಇದುಜಾತಿ, ಧರ್ಮ, ವರ್ಗ, ಪ್ರದೇಶರಹಿತವಾಗಿದೆಎಂದುಹಾಲಪ್ಪಯ್ಯ ವಿರಕ್ತ ಮಠದ ಪೂಜ್ಯ ಪಂಚಾಕ್ಷರಿ ಸ್ವಾಮೀಜಿಅಭಿಮತಪಟ್ಟರು.
ಸೇಡಂಪಟ್ಟಣದ ಮಾತೃಛಾಯಾ ಪದವಿ ಪೂರ್ವಕಾಲೇಜುಎದುರುಗಡೆಯ ಭೋವಿ ಕಾಂಪೆಕ್ಸ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಸ್ಟಾರ್ ಮೆಲೋಡಿಸ್’ನ ಉದ್ಘಾಟನೆ ಮತ್ತುಕನ್ನಡಜಾನಪದ ಪರಿಷತ್‍ತಾಲೂಕಾ ಘಟಕದ ವತಿಯಿಂದಜರುಗಿದಜಾನಪದಗೀತಗಾಯನ ಮತ್ತುಕಲಾವಿದರಿಗೆಗೌರವ ಸತ್ಕಾರಕಾರ್ಯಕ್ರಮವ್ನನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಶೋಭಾದೇವಿ ಚಕ್ಕಿ ಮಾತನಾಡಿ, ನಮ್ಮ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ. ನಮ್ಮ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿಕೀರ್ತಿಯನ್ನುತರುವಂತಾಗಬೇಕು. ಜಾನಪದಕ್ಕೆ ವಯಸ್ಸಿನ ಮಿತಿಯಿಲ್ಲ. ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿಜರುಗಬೇಕು. ಇಂದಿನ ಯುವಜನತೆಗೆಜನಪದ ಸಾಹಿತ್ಯ, ಪರಂಪರೆಯನ್ನು ಮುಟ್ಟಿಸುವ ಕೆಲಸವಾಗಬೇಕು. ಜನಪದ ಉಳಿದರೆ ಮಾತ್ರದೇಶದ ಸಂಸ್ಕøತಿ, ಪರಂಪರೆ ಉಳಿಯಲು ಸಾಧ್ಯವಿದೆಎಂಬುದನ್ನು ಮರೆಯುವಂತಿಲ್ಲಎಂದುಜಾನಪದ ಗೀತೆಗಳನ್ನು ಹಾಡುವ ಮೂಲಕ ತಿಳಿಸಿದರು.
ಕಜಾಪಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ತಾಲೂಕಾಧ್ಯಕ್ಷ ಶಿವರಾವ ಭೋವಿ, ಸಂಗೀತ ಶಿಕ್ಷಕಿ ಸಾವಿತ್ರಿಬಾಯಿಕುಲಕರ್ಣಿ ಮಾತನಾಡಿದರು. ಕಜಾಪಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ್, ಅವಿನಾಶ ಭೋವಿ, ಡಾ.ಎಂ.ಜಿ.ದೇಶಪಾಂಡೆ, ಗಂಗಾಧರಕುಲಕರ್ಣಿ, ವಲ್ಲಭ ಜೋಶಿ, ಡಾ.ಪ್ರತೀಕ್ಷಾಎಸ್.ಭೋವಿ, ಅಚಿಜನಾದೇವಿ, ಮಾರುತಿ ಹುಳಗೋಳಕರ್, ನಾಗರಾಜ ಮಾಲಿಪಾಟೀಲ್, ಭೀಮಾಶಂಕರ ವಿಶ್ವಕರ್ಮ, ಶಿವಶರಣಪ್ಪ ಜಮಾದಾರ, ಸಂತೋಷ ತೊಟ್ನಳ್ಳಿ, ಶಿವಯೋಗಿ ಸಕ್ಪಾಲ್, ಗೊಲ್ಲಪ್ಪ ಜೋಶಿ, ಗಂಗಾಧರಕುಲಕರ್ಣಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

























