Home ಜಿಲ್ಲೆ ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕೆ ಅಸ್ತು: ಕ್ಷಿಪ್ರ ಕಾರ್ಯ

ನಗರದಲ್ಲಿ ಸುಗಮ ಸಂಚಾರಕ್ಕೆ ಅಸ್ತು: ಕ್ಷಿಪ್ರ ಕಾರ್ಯ

ಕಲಬುರಗಿ:ಫೆ.7: ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ಪೆÇಲೀಸ್ ಠಾಣೆ-1ರ ಅಧಿಕಾರಿ ಹಾಗೂ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದು ನಗರದ ವಿವಿಧ ಸ್ಥಳದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅಸ್ತು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಪೆÇಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ, ಡಿಸಿಪಿ ಪ್ರವೀಣ ನಾಯಕ, ಎಸಿಪಿ ಸುದಾ ಆದಿ ಅವರ ಮಾರ್ಗದರ್ಶನದಲ್ಲಿ, ಸಂಚಾರಿ ಪೆÇಲೀಸ್ ಠಾಣೆ-1ರ ಪಿಐ ಶಕೀಲ್ ಅಂಗಡಿ ಅವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಫೀಲ್ಡಿಗಿಳಿದು ನಗರದ ಸುವರ್ ಮಾರ್ಕೆಟ್ ನಲ್ಲಿ ಬಂಡಿ ವ್ಯಾಪಾರಿಗಳು ರಸ್ತೆ ಮಧ್ಯೆ ಬಂದು ವ್ಯಾಪಾರ ಮಾಡದಂತೆ ಮಾರ್ಕೆಟ್ ನಲ್ಲಿ ಸುಗಮ ಸಂಚಾರ ಇರುವಂತೆ ಕ್ರಮಕೈಗೊಂಡಿದ್ದಾರೆ.
ಅಲ್ಲದೆ ನಗರದ ರೈಲ್ವೆ ನಿಲ್ದಾಣದಿಂದ ತಿಮ್ಮಾಪುರ ಸರ್ಕಲ್ ವರೆಗೆ ವಾಹನಗಳನ್ನು ಸಮ ಮತ್ತು ಬೆಸ ಸಂಖ್ಯೆಯಲ್ಲಿ ಪಾಕಿರ್ಂಗ್ ಮಾಡಿಸಿದ್ದು ಅಲ್ಲದೆ ನಗರದ ಏಷಿಯನ್ ಮಾಲ್ ಹತ್ತಿರ ಯಾವುದೇ ವಾಹನಗಳು ರಸ್ತೆ ಮೇಲೆ ನಿಲುಗಡೆ ಮಾಡದಂತೆ ನೋಡಿಕೊಳ್ಳಲಾಗಿದ್ದು ನಗರದ ವಿವಿಧೆಡೆಯಲ್ಲಿ ಸಂಚಾರಿ ಪೆÇಲೀಸರು ಕಾರ್ಯಾಚರಣೆಯನ್ನು ನಡೆಸಿದ್ದು, ಹಂತ ಹಂತವಾಗಿ ಪಾಕಿರ್ಂಗ್, ಹೆಲ್ಮೆಟ್, ಸಂಚಾರಿ ನಿಯಮ ಪಾಲನೆ ಸೇರಿದಂತೆ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಪೆÇಲೀಸ್ ಅಧಿಕಾರಿ ಅವರು ಮಾಹಿತಿ ನೀಡಿದ್ದಾರೆ. ಪೆÇಲೀಸರ ಈ ಸುಗಮ ಸಂಚಾರದ ಕ್ರಮಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಸಂಚಾರಿ ಪೆÇಲೀಸರು ಮನವಿ ಮಾಡಿದ್ದಾರೆ.