
ಗುಳೇದಗುಡ್ಡ,ಜ28: ಮಕ್ಕಳು ಯಾವುದೇ ಒತ್ತಡ ವಿಲ್ಲದೇ ನಗುನಗುತ್ತ ಕಲಿಯಬೇಕು. ಪ್ರತಿಯೊಂದು ಮಗು ಓದಿನಲ್ಲೇ ನೈಪುಣ್ಯತೆ ಇರಬೇಕೆಂದಿಲ್ಲ, ಆದರೆ ಯಾವುದಾದರೊಂದು ಕಲೆ, ಕ್ರೀಡೆಯಲ್ಲಿಯಾದರೂ ವಿಶೇಷತೆ ಹಾಗೂ ಕ್ರೀಯಾಶೀಲತೆ ಹೊಂದಿರಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಮೀನಾ ಚಂದಾವರಕರ ಹೇಳಿದರು.
ಅವರು ಸಮೀಪದ ತೋಗುಣಶಿ ಕ್ರಾಸ್ ಹತ್ತಿರದ ಬಿವಿವಿಎಸ್ ಸಂಘದ ಬಸವೇಶ್ವರ ಇಂಟನ್ರ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ವಾರ್ಷಿಕ ಸ್ನೇಹಮ್ಮೇಳ ಕಲಾಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದೊಂದಿಗೆ ಇಂದು ಕೌಶಲ್ಯವೂ ಅಗತ್ಯವಾಗಿದ್ದು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಅಗತ್ಯ. ಮಕ್ಕಳು ಕೌಶಲ್ಯದ ಕಡೆಗೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಷ್ಟೆ ಪಾಲಕರು ಜವಾಬ್ದಾರಿ ಹೊಂದಿದ್ದಾರೆ ಎಂದರು.
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆಯ ಅತಿಯಾದ ಅವಲಂಬನೆಯು ಮಕ್ಕಳ ಮನೋವಿಕಾಸಕ್ಕೆ ಅಡ್ಡಿಯಾಗುತ್ತದೆ. ಹಿಂದೆ ಗುರುಕುಲದಲ್ಲಿ 64 ಕಲೆಗಳನ್ನು ಕಲಿಸುತ್ತಿದ್ದರು. ಆದರೆ ಇಂದು ಮಗುವಿಗೆ ಕೇವಲ ಪಠ್ಯ ಪುಸ್ತಕಕ್ಕೆ ಸಿಮೀತ ಮಾಡಲಾಗುತ್ತಿದೆ ಹೀಗಾಗಬಾರದು. ಮಕ್ಕಳಿಗೆ ಓದಿನಷ್ಟೇ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಅಗತ್ಯವಿದೆ ಎಂದರು.
ಬಾಗಲಕೋಟೆಯ ಬಿಪ್ಸ್ ಸ್ಕೂಲ್‍ನ ಪ್ರಾಚಾರ್ಯ ಸುರೇಶ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಪ್ರಾಚಾರ್ಯ ರಾಜಶೇಖರ ಬಿಂಗೊಳ್ಳಿ ವೇದಿಕೆಯ ಮೇಲಿದ್ದರು. ಬಳಿಕ ಮಕ್ಕಳಿಂದ ಸಾಂಸ್ಕøತಿ ಕಾರ್ಯಕ್ರಮ ನಡೆಯಿತು.
























