ನವದೆಹಲಿ,ಅ.೬: ವಿಚಾರಣೆ ನಡೆಯುತ್ತಿರುವ ವೇಳೆ ಒಬ್ಬ ವಕೀಲರು ತಮ್ಮ ಪಾದರಕ್ಷೆಯನ್ನು ತೆಗೆದು ಭಾರತ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್ ಗವಾಯಿ ಅವರ ಕಡೆಗೆ ಎಸೆಯಲು ಯತ್ನಿಸಿದ ಘಟನೆ ನಡೆದಿದೆ.
ಇಂದಿನ ವಿಚಾರಣೆ ಪ್ರಕರಣಗಳ ಕುರಿತು ಮುಖ್ಯನ್ಯಾಯಮೂರ್ತಿ,ರ್ತಿ ಭೂಷಣ್ ಆರ್ ಗವಾಯಿ ಅವರು ಮಾಹಿತಿ ಪಡೆಯುತ್ತಿದ್ದ ವೇಳೆ ಆ ವಕೀಲರು ಡಯಾಸ್ ಹತ್ತಿರ ಬಂದರು. ತಕ್ಷಣವೇ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶ ಮಾಡಿ ಅವರನ್ನು ನ್ಯಾಯಾಲಯದಿಂದ ಹೊರಗೆ ಎಸ್ಕಾಟ್ ಮಾಡಿ ಹೊರಗೆ ಕರೆದೊಯ್ಯುವಾಗ, ಆ ವಕೀಲರು “ಸನಾತನ ಕಾ ಅಪಮಾನ ಸಹಿಸಲ್ಲ ಎಂದು ಕೂಗಾಡುತ್ತಿರುವುದು ಕಂಡು ಬಂತು,
ಈ ಕುರಿತಂತೆ ಗೊಂದಲಕ್ಕೆ ಸಹಜವಾಗಿ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ, “ಎಲ್ಲರೂ ಕೇಸುಗಳನ್ನು ಮುಂದುವರಿಸಿ. ನಾವು ಇಂತಹ ವಿಷಯಗಳಿಂದ ಬೇಸರಗೊಳ್ಳುವುದಿಲ್ಲ. ಈ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದರು.
ಘಟನೆಯಲ್ಲಿ ಭಾಗಿಯಾದ ವಕೀಲರ ಹೆಸರು ರಾಕೇಶ್ ಕಿಶೋರೆ ಎಂದು ತಿಳಿದುಬಂದಿದೆ.ಈ ಘಟನೆ ಹಿಂದೆ ಬಂದ ವಿವಾದದ ಹಿನ್ನಲೆಯಲ್ಲಿ ನಡೆದಿದೆ. ಕಳೆದ ತಿಂಗಳು, ಸಿಜೆಐ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ರಾಕೇಶ್ ದಲಾಲ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿತ್ತು. ದಲಾಲ್ ಜವರಿ ದೇವಾಲಯದಲ್ಲಿರುವ ಏಳು ಅಡಿ ಎತ್ತರದ, ತಲೆ ಕಡಿಯಲ್ಪಟ್ಟ ವಿಷ್ಣುವಿನ ಪ್ರತಿಮೆಯನ್ನು ಮರುಸ್ಥಾಪಿಸಲು ನಿರ್ದೇಶನ ನೀಡುವಂತೆ ವಾದಿಸಿದ್ದರು. ಅವರು ಆ ಪ್ರತಿಮೆ ಮುಘಲ್ ದಾಳಿಗಳ ವೇಳೆ ಹಾನಿಯಾಗಿದೆ ಮತ್ತು ಅಧಿಕಾರಿಗಳು ಅದನ್ನು ಮರುಸ್ಥಾಪಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು.



























