ಹುಣಸಗಿ ಸೇರಿ ಆರು ಜನ ಹಿರಿಯ ಪತ್ರಕರ್ತರಿಗೆ “ಸತ್ಯಕಾಮ ಸಮ್ಮಾನ್”

ಕಲಬುರಗಿ,ಜೂ.28-ಹಿರಿಯ ಪತ್ರಕರ್ತ ದಿ.ಪಿ.ಎಂ.ಮಣ್ಣೂರ ಅವರ 77ನೇ ಹುಟ್ಟುಹಬ್ಬದ ಅಂಗವಾಗಿ “ಸತ್ಯಕಾಮ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.1 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಗುಲಬರ್ಗಾ ಸಂಜೆವಾಣಿ ಪ್ರಧಾನ ವರದಿಗಾರ ಚಂದ್ರಕಾಂತ ಹುಣಸಗಿ, ಹಿರಿಯ ಪತ್ರಕರ್ತರಾದ ಶಂಕರ್ ಕೋಡ್ಲಾ, ಅಜೀಜುಲ್ಲಾ ಸರಮಸ್ತ್, ರಾಮಕೃಷ್ಣ ಬಡಶೇಷಿ, ಹಣಮಂತರಾವ ಭೈರಾಮಡಗಿ, ವಿಜಯಪುರದ ಪ್ರದೀಪ ಕುಲಕರ್ಣಿ ಅವರಿಗೆ “ಸತ್ಯಕಾಮ ಸಮ್ಮಾನ್” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮಕ್ತಂಪುರ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸುವರು. ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಡಾ.ಲಿಂಗರಾಜ ಅಪ್ಪ ಸಮಾರಂಭ ಉದ್ಘಾಟಿಸುವರು. ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ಎಸ್.ನಾಯ್ಕೋಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ.ಎಂ.ಮಣ್ಣೂರ ಅಧ್ಯಕ್ಷತೆ ವಹಿಸುವರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಹಿರಿಯ ಪತ್ರಕರ್ತ ದೇವೇಂದ್ರಪ್ಪ ಕಪನೂರ, ಹಿರಿಯ ವೈದ್ಯ ಡಾ.ಎಸ್.ಎಸ್.ಗುಬ್ಬಿ, ಮಾಧ್ಯಮ ಮಾನ್ಯತೆ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಅತಿಥಿಗಳಾಗಿ ಆಗಮಿಸುವರು.