ಯುವಕರಿಗೆ ಬೆದರಿಸಿ ಚಿನ್ನಾಭರಣ ದೋಚಿದ್ದ ಆರು ಜನರ ಬಂಧನ

ಕಾಳಗಿ,ಸೆ.21-ಕಾಳಗಿ-ಕೋಡ್ಲಿ ಮಧ್ಯದ ಮುಖ್ಯ ರಸ್ತೆಯಲ್ಲಿ ಪೊಲೀಸ್‍ರಂತೆ ನಟಿಸಿ ಗಮನ ಬೇರೆಡೆ ಸೆಳೆದು ಯುವಕನಿಂದ ಚಿನ್ನಾಭರಣ ದೋಚಿದ್ದ ಮತ್ತು ಮಹಿಳೆಗೆ ಫೋನ್‍ನಲ್ಲಿ ಅಶ್ಲೀಲ ಸಂದೇಶ ಕಳಹಿಸಿದ್ದೀಯ ಎಂದು ಹೆದರಿಸಿ ಯುವಕನಿಂದ ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬೀದರ್ ನಗರದ ಇರಾನಿ ಗಲ್ಲಿಯ ಮಹ್ಮದ ಅಲಿ ತಂದೆ ಮಹ್ಮದ ಜಾವೀದ ಜಾಫರಿ, ಗುಲಾಂ ಅಬ್ಬಾಸ ಎಂಬುವವರನ್ನು ಬಂಧಿಸಿ 36 ಸಾವಿರ ರೂ.ಮೌಲ್ಯದ 5 ಗ್ರಾಂ ಬಂಗಾರ, 180000 ರೂ.ಮೌಲ್ಯದ 20 ಗ್ರಾಂ ಕೊರಳಲ್ಲಿದ್ದ ಬಂಗಾರದ ಚೈನ್ ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಂಗಲಗಿಯ ಮಹ್ಮದ್ ಮುಸ್ತಫಾ, ಕಲಬುರಗಿಯ ಮಹ್ಮದ್ ಹಾರೀಶ್, ನಿಜಾಮೋದ್ದಿನ್ ಪಟೇಲ್, ಸೈಯದ್ ಇಬ್ರಾಹಿಂ ಎಂಬುವವರನ್ನು ಬಂಧಿಸಿ 25 ಗ್ರಾಂ ಬಂಗಾರದ ಆಭರಣ, ಒಂದು ಸ್ಕಾರ್ಪಿಯೋ ಜೀಪ್ ಜೀಪ್, ನಗದು ಹಣ 11000/- ರೂ ಜಪ್ತಿ ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇವರು ಕಾಳಗಿ-ಕೋಡ್ಲಿ ಮದ್ಯದ ಮುಖ್ಯ ರಸ್ತೆಯ ಮೇಲೆ ಸಚಿನ್ ರಾಠೋಡ ಎಂಬುವವರಿಗೆ ತಡೆದು ತಾವು ಪೆÇಲೀಸರಂತೆ ನಟನೆ ಮಾಡಿ, ಗಮನವನ್ನು ಬೇರೆಡೆಗೆ ಸೆಳೆದು ಆತಮ ಮೈ ಮೇಲೆ ಇದ್ದ 21 ಗ್ರಾಂ ಬಂಗಾರದ ಆಭರಣ ಒಂದು ಪೇಪರ್ ಕವರನಲ್ಲಿ ಹಾಕಿದಂತೆ ಮಾಡಿ, ಕಲ್ಲು ಇರುವ ಪೇಪರ್ ಕವರ್ ನೀಡಿ ಬಂಗಾರ ಆಭರಣ ತೆಗದುಕೊಂಡು ಹೋಗಿದ್ದರು. ಹಾಗೆ 19.08.2025 ರಂದು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಕೆಲವರು ಕೊಡದೂರ ಗ್ರಾಮದ ಯುವಕನಿಗೆ ಮಹಿಳೆಯ ಜೊತೆ ಫೆÇೀನಿನಲ್ಲಿ ಸಂಪರ್ಕ ಇದೆ ಎಂದು ಹೆದರಿಸಿ ಅಪಹರಣ ಮಾಡಿಕೊಂಡು ಹೋಗಿ ಚಾಕುವಿನಿಂದ ಕೊಲೆ ಮಾಡುವುದಾಗಿ ಹೆದರಿಸಿ 25 ಗ್ರಾಂ ಬಂಗಾರದ ಆಭರಣ ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಕಾಳಗಿ ಪೆÇಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಈ ಎರಡೂ ಪ್ರಕರಣದಲ್ಲಿನ ಆರೋಪಿಗಳ ಪತ್ತೆಗೆ ಅಪರ ಪೆÇಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಶಹಾಬಾದ ಡಿ.ಎಸ್.ಪಿ ಶಹಾಬಾದ ಶಂಕರಗೌಡ ಪಾಟೀಲ, ಸಿಪಿಐ ಜಗದೇವಪ್ಪ ಪಾಳಾ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ತಿಮಯ್ಯ ಬಿ. ಕೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಮಂಜುನಾಥ, ಚಂದ್ರಕಾಂತ, ಸಂಗಮೇಶ, ಮೌನೇಶ, ಅಂಬರೀಷ , ಮಾರುತಿ, ಮಂಜುನಾಥ, ಶಿವರಾಜ, ರವರ ಎರಡು ಪ್ರತ್ಯೇಕ ತಂಡ ರಚನೆ ಮಾಡಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಈ ಎರಡೂ ಪ್ರಕರಣಗಳಲ್ಲಿನ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.