
ಕಲಬುರಗಿ:ಮೇ.31: ಥಗ್ ಲೈಪ್ ಚಲನಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭದಲ್ಲಿ ತಮಿಳು ನಟ ಕಮಲ್ ಹಾಸನ್ ಕನ್ನಡ ಹುಟ್ಟಿದ್ದು ತಮಿಳುನಿಂದ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವುದಲ್ಲದೆ ಕನ್ನಡಿಗರ ಹಾಗೂ ತಮಿಳು ಮಧ್ಯೆ ವಿಷಬೀಜ ಬಿತ್ತುವುದೊರಂದಿಗೆ ಕನ್ನಡಿಗರಿಗೆ ಅಪಮಾನ ಮಾಡಿರುತ್ತಾರೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ಪ್ರತಿ ಭಾರಿ ತಮಿಳು ಹೊಸ ಚಲನಚಿತ್ರ ಬಿಡುಗಡೆ ಸಂಧರ್ಭದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಮಾಡುತ್ತಲೆ ಬಂದಿದ್ದಾರೆ. ಈ ಹೇಳಿಕೆಗಳು ನಿರಂತರವಾಗಿ ನೀಡಿ ಹೋಗುತ್ತಾರೆ. ನಂತರ ಇಲ್ಲಿ ಕನ್ನಡಿಗರು ಮತ್ತು ತಮಿಳು ಮಧ್ಯೆ ಶಾಂತಿ, ಸುವ್ಯವಸ್ಥೆ ಹದಗೆಡುವಂತೆ ಮಾಡಿದ್ದಾರೆ. ಆದ್ದರಿಂದ ಇಂತಹ ಹೇಳಿಕೆ ನೀಡಿರುವ ಈ ನಟನ ಚಿತ್ರ ನಮ್ಮ ಕಲಬುರಗಿ ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳಲ್ಲಿ ಥಗ್ ಲೈಪ್ ಚಿತ್ರ ಒಂದೆ ಅಲ್ಲದೆ ಇನ್ನುಳಿದ ಕಮಲ್ ಹಾಸನ್ ನಟರ ಚಲನಚಿತ್ರಗಳನ್ನು ಬಿಡುಗಡೆಗೆ ನಿಷೇಧ ಮಾಡಬೇಕು.ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.