
ಕಲಬುರಗಿ:ಫೆ.13:ಖ್ಯಾತ ಗಾಯಕಿ ಅನನ್ಯಾ ಪ್ರಕಾಶ ಹಾಗು ಸಾಧು ಕೋಕಿಲ ಅವರ ಸಹೋದರಿ ಉಷಾ ಕೋಕಿಲ ಅವರು ಕಲಬುರಗಿಯ ಅಜಾದಪುರದಲ್ಲಿರುವ ಶ್ರೀ ಮಾಧವ ಗೋಶಾಲೆಗೆ ಭೇಟಿ ನೀಡಿದರು. ಶ್ರೀ ಮಾಧವ ಗೋಶಾಲೆ ಕಳೆದ 9 ವರ್ಷಗಳಿಂದ ನಿರಾಶ್ರಿತ, ರೋಗಗ್ರಸ್ತ, ವಯಸ್ಸಾದ ಗೋವುಗಳ ಸೇವೆಯಲ್ಲಿ ತೊಡಗಿಕೊಂಡಿದೆ. ಇದೆ ಸಂದರ್ಭದಲ್ಲಿ ಅನನ್ಯಾ ಪ್ರಕಾಶ ಹಾಗು ಉಷಾ ಕೋಕಿಲ ಅವರು ಗೋಪೂಜೆ ಸಲ್ಲಿಸಿ ಗೋವುಗಳಿಗೆ ಗೋಗ್ರಾಸ ಅರ್ಪಿಸಿದರು. ಈ ಒಂದು ಕಾರ್ಯಕ್ರಮ ಆನಂದ ಅಭಿಯಾನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಯಿತು. ಆನಂದ ಅಭಿಯಾನ ಚಾರಿಟೇಬಲ್ ಟ್ರಸ್ಟ್ ಅನೇಕ ವರ್ಷಗಳಿಂದ ಸಮಾಜದಲ್ಲಿ ರಾಷ್ಟ್ರಭಕ್ತಿವೈ ಜಾಗೃತಿಯನ್ನು ಮೂಡಿಸುತ್ತ ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆಗಳನ್ನು ಕೇಂದ್ರವಾಗಿಟ್ಟುಕೊಂಡು ಅನೇಖ ಮುಖಗಳಲ್ಲಿ ನಿಸ್ವಾರ್ಥ ಭಾವದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಬೀದಿ ನಾಯಿಗಳ ಆಹಾರ ಪೂರೈಸುವುದು ಇವರ ಮುಖ್ಯ ಸೇವಾ ಕಾರ್ಯವಾಗಿದೆ. ಅನನ್ಯಾ ಪ್ರಕಾಶ ಹಾಗು ಉಷಾ ಕೋಕಿಲ ಅವರು ಗೋಶಾಲೆ ವತಿಯಿಂದ ನಡೆಯುತ್ತಿರುವ ಗೋಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆನಂದ ಅಭಿಯಾನ ಚಾರಿಟೇಬಲ್ ಟ್ರಸ್ಟನ ಸೌರಭ್ ಜೇವರ್ಗಿಕರ, ಪ್ರೀತಿ, ರೋನಕ್, ಅದ್ವೈತ, ಗೋಶಾಲೆಯ ಚೇತನ್ ಪಾಟೀಲ್ ಹಾಗು ಇತರರು ಉಪಸ್ಥಿತರಿದ್ದರು.



























