ಹುಮನಾಬಾದ:ಸೆ.24: ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತರಾದ ಯುವರಾಜ್ ಎಸ್.ಐಹೊಳ್ಳೆರವರಿಗೆ ದಿನಾಂಕ:22-9-2025 ರಂದು ರಾತ್ರಿ 8:14 ಸಮಯದಂದು ಫೆÇೀನ್ ಮಾಡಿ ಬೆದರಿಕೆ ಹಾಕಿರುತ್ತಾರೆ ಎಂದು ತಹಸೀಲ್ದಾರರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಯುವರಾಜ್ ರವರಿಗೆ ನೀವೇನು ನೇತಾ ಇಲ್ಲ ನಮ್ಮನ್ನು ಕೇಳೋದಕ್ಕೆ ನೀವ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವಜ್ಞಾನಿ ಭೋಧೊ ಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದೇ ಸಮಾಜಕ್ಕೆ ಸಂವಿಧಾನ ಬರೆದಿರುವ ಹಾಗೆ ಮಾತನಾಡುತ್ತಿದ್ದಾರೆ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾಗಿ ಸುಗಂಧಾ ಇವರು ಬಸವೇಶ್ವ ವೃತ್ತದ ಹತ್ತಿರ ನೀರು ನಿಂತ್ರೆ ನಿನಗೇನು ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಯುರಾಜ್ ತಿಳಿಸಿದ್ದಾರೆ. ಇವರೇ ಜಾತಿ ಮಾಡಿದರೆ ಇನ್ನೂ ಓದು ಬಾರದೆ ಇರುವ ಪ್ರಜೆಗಳು ಹೇಗೆ ಮಾತನಾಡಬೇಕು ಹೇಳಿ ಎಂದರೆ ಪಿಡಿಓ ಸುಗಂಧರವರು ರೆಡಿ ಇದ್ರೆ ಬನ್ನಿ ಎಂದು ನನ್ನನ್ನು ಆವಾಜ್ ಹಾಕಿದ್ದಾರೆ , ಸುಮ್ಮನ್ನೆ ಕುಳಿತ್ತಿನಿ ಅಂತ ಜಾಸ್ತಿ ಮಾಡುತ್ತಿದ್ದಿ ಏನ್ ಮಾಡುವುದು ಇದೆ ಮಾಡಿ ತೋರುಸ್ತಿನಿ ಎಂದು ಬೆದರಿಕೆ ಹಾಕಿದ್ದಾರೆ. ನಿನ್ನ ವಾಡ್ರ್ನಲ್ಲಿ ಇರುವ ಅಂಬೇಡ್ಕರ್ ಮೂರ್ತಿ ಮೊದಲು ನೋಡ್ಕೋ ಎಂದು ಸಿಟ್ಟಿನಿಂದ ಹೆಳಿದ್ದಾರೆ ಎಂದು ಯುರಾಜ್ ಮಾತನಾಡಿ ತಿಳಿಸಿದರು. ಒಂದು ವೇಳೆ ನನಗೆ ಏನಾದರೂ ಜೀವಕ್ಕೆ ಅಪಾಯವಾದರೆ ನೇರಹೋಣೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಗಂಧ ಅವರೇ ಕಾರಣವಾಗುತ್ತಾರೆ ಎಂದು ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹುಮನಾಬಾದ ತಾಲ್ಲೂಕಾ ಪಂಚಾಯತ್ ಎದುರುಗಡೆ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಸಮಾಜ ಸೇವಕ ಯುರಾಜ್ ಐಹೋಳ್ಳಿ ತಾ.ಪಂ. ಕಾರ್ಯನಿರ್ವಹಕಾಧಿಕಾರಿ ದೀಪಿಕಾ ನಾಯ್ಕರವರಿಗೆ ಮನವಿ ಪತ್ರ ನೀಡಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಆಶ್ರಯ ಟ್ರಸ್ಟ್ (ರಿ) ಉಪಾಧ್ಯಕ್ಷ ಅರವಿಂದ ಜೋಗಿರೆ, ಭೀಮ ಆರ್ಮಿ ಅಧ್ಯಕ್ಷ ಅನೀಲ ದೊಡ್ಡಿ, ಗುರು ಪಾಟೀಲ ಸಿಂಧನಕೇರಾ, ಸಾಮಾಜ ಕಾರ್ಯಕರ್ತ ಮಲ್ಲೇಶ್ ಮಿತ್ರ, ಹುಮನಾಬಾದ ಡಿಎಂಎಸ್‍ಎಸ್ ಉಪಾಧ್ಯಕ್ಷ ಪ್ರವೀಣಕುಮಾರ ಹೊಂಬಾಳೆ, ಭೀಮ ಆರ್ಮಿ ಭಾರತ್ ಏಕ್ತಾ ಮಿಷನ್ ಅಲ್ಪ ಸಂಖ್ಯಾತರ ಅಧ್ಯಕ್ಷ ಎಂ.ಡಿ.ಬಾಬಾ, ಶೇಕ್ ಅಮಾನ್ ಸುಲ್ತಾನಿ ಮೈನೋದ್ದಿನ್ ನಂದಗಾಂವ್‍ವಾಲೆ, ಅಮರ ಸಿಂಧನಕೇರಾ, ಗುಂಡಪ್ಪಾ ಆರ್ಬಳ್ಳಿ, ಸಂದೀಪ ನಿಶಾನ್ದಾರ್ ಹುಮನಾಬಾದ, ಆಕಾಶ್ ಗಂದಿಗೆ ಸಿಂಧನಕೇರಾ ಉಪಸ್ಥಿತರಿದ್ದರು.

























