Home ಜಿಲ್ಲೆ ಬೋಧಿಸತ್ವ ಗೌತಮಬುದ್ಧ ಸಂಸ್ಥೆಯಿAದ ೧೨ ಜೋಡಿಗಳ ಸರಳ ವಿವಾಹ

ಬೋಧಿಸತ್ವ ಗೌತಮಬುದ್ಧ ಸಂಸ್ಥೆಯಿAದ ೧೨ ಜೋಡಿಗಳ ಸರಳ ವಿವಾಹ

ಸಂಜೆ ವಾಣಿ ವಾರ್ತೆ,
ಜಮಖಂಡಿ ಮೆ. ೭:ದುಂದುವೆಚ್ಚದ ಮದುವೆಗಳು ಬಡವರಿಗೆ ಆರ್ಥಿಕ ಹೊರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳ ಆರ್ಥಿಕ ಪ್ರಗತಿಗೆ ಪೂರಕವಾಗಿವೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವ ಭವನದಲ್ಲಿ ಬೋಧಿಸತ್ವ ಗೌತಮಬುದ್ಧ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮೂಹಿಕ ವಿವಾಹಗಳ ಮೂಲಕ ಬಡವರಿಗೆ ನೆರವಾಗುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಘನತೆಗೆ ಯಾವುದೇ ಕುಂದು ಬರುವುದಿಲ್ಲ. ವಿವಾಹಕ್ಕೆ ಖರ್ಚಾಗುವ ಹಣವನ್ನು ದಂಪತಿಗಳು ತಮ್ಮ ಆರ್ಥಿಕ ಏಳಿಗೆಗೆ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಪರಶುರಾಮ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ಇದೇ ದಿನದಂದು ಸಾಮೂಹಿಕ ವಿವಾಹವನ್ನು ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇರ್ಲಿಯ ಜ್ಞಾನಜ್ಯೋತಿ ಬಂತೇಜಿ ಹಾಗೂ ಬಾಗಲಕೋಟೆಯ ಧಮ್ಮಪಾಲ ಬಂತೇಜಿ ಅವರು ೧೨ ಜೋಡಿಗಳಿಗೆ ವಿವಾಹ ನೆರವೇರಿಸಿದರು. ಮರೇಗುದ್ದಿಯ ವಿಜಯ ಮಹಾಂತೇಶ್ವರ ಸ್ವಾಮೀಜಿ ಹಾಗೂ ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಏಗಪ್ಪ ಸವದಿ, ಎ.ಪಿ. ಕುಲಕರ್ಣಿ, ರವಿ ಯಡಹಳ್ಳಿ, ಡಾ. ಎ.ಆರ್. ಬೆಳಗಲಿ, ಶಶಿಕಾಂತ ದೊಡ್ಡಮನಿ, ಅಶೋಕ ನಾರಾಯಣಿ ಮಾತನಾಡಿದರು.
ಮುತ್ತಣ್ಣ ಹಿಪ್ಪರಗಿ, ಅಲ್ತಾಫ ಸಗರ, ನಾಗಪ್ಪ ಸನದಿ, ರವಿ ಬಬಲೇಶ್ವರ, ಬಸವರಾಜ ಹಳ್ಳದಮನಿ, ಅಬ್ದುಲ ಜಮಾದಾರ, ಯಾಸೀನ ಲೋದಿ, ರವಿ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಬಸವರಾಜ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.