Home ಜಿಲ್ಲೆ ಗುರುದೇವಾಶ್ರಮದ ರಜತ ಮಹೋತ್ಸವ ೧೯ ರಿಂದ

ಗುರುದೇವಾಶ್ರಮದ ರಜತ ಮಹೋತ್ಸವ ೧೯ ರಿಂದ

ಬೀದರ್: ಫೆ.೧೭:ಇಲ್ಲಿಯ ಸಿದ್ಧಾರೂಢ ಮಠದ ಮುಂಭಾಗದ ಜಾಬಶೆಟ್ಟಿ ಲೇಔಟ್‌ನಲ್ಲಿ ಇರುವ ಗುರುದೇವಾಶ್ರಮದಲ್ಲಿ ಫೆ. ೧೯ ರಿಂದ ೨೧ ರ ವರೆಗೆ ಆಶ್ರಮದ ರಜತ ಮಹೋತ್ಸವ, ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಅವರ ೯೦ನೇ ಜಯಂತಿ ಮಹೋತ್ಸವ ಹಾಗೂ ೧೦೮ ಮನೆಗಳಲ್ಲಿ ಸುವಿಚಾರ ಚಿಂತನ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ.
ಮೂರೂ ದಿನ ಬೆಳಿಗ್ಗೆ ೬.೩೦ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ ೮.೩೦ ರಿಂದ ೧೦ ರ ವರೆಗೆ ಸ್ತೋತ್ರ ಮತ್ತು ಭಜನೆ, ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ರ ವರೆಗೆ ಪ್ರವಚನ, ಸಂಜೆ ೫.೩೦ ರಿಂದ ೭ ರ ವರೆಗೆ ಸ್ತೋತ್ರ ಮತ್ತು ಭಜನೆ, ಸಂಜೆ ೭ ರಿಂದ ರಾತ್ರಿ ೯.೩೦ ರ ವರೆಗೆ ಪ್ರವಚನ ಜರುಗಲಿದೆ. ಭಕ್ತಿ ಸಂಗೀತ ಮನ ತಣಿಸಲಿದೆ.
೧೯ ರಂದು ಬೆಳಿಗ್ಗೆ ೧೦ಕ್ಕೆ ನಡೆಯುವ ಸಮಾರಂಭದಲ್ಲಿ ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಪ್ರಣವ ಧ್ವಜಾರೋಹಣ ಮಾಡುವರು. ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಮಹೋತ್ಸವವನ್ನು ಉದ್ಘಾಟಿಸುವರು. ಬಳಿಕ ಪೂಜ್ಯರು ಶಿವಸಿದ್ಧ ಭಜನಾಮೃತ ಗ್ರಂಥವನ್ನು ಬಿಡುಗಡೆಗೊಳಿಸುವರು.
ಅಂದು ಬೆಳಿಗ್ಗೆ ಮಾನವ ಜನ್ಮ ದೊಡ್ಡದು ಹಾಗೂ ಸಂಜೆ ಹಿತವಾವುದು ಇಹ ಪರದೊಳು ಪ್ರವಚನ ಜರುಗಲಿದೆ. ಡಾ. ಶಿವಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ, ಡಾ. ಶಿವಕುಮಾರ ಸ್ವಾಮೀಜಿ ಪಾವನ ಸಾನಿಧ್ಯ, ಸಹಜಾನಂದ ಸ್ವಾಮೀಜಿ, ವಿದ್ಯಾನಂದ ಭಾರತಿ ಸ್ವಾಮೀಜಿ ನೇತೃತ್ವ ಹಾಗೂ ಮುಚಳಂಬದ ಪ್ರಣವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ವಿವಿಧ ಮಠಾಧೀಶರು ಸಮ್ಮುಖ ವಹಿಸುವರು.
೨೦ ರಂದು ಬೆಳಿಗ್ಗೆ ಯೋಗಕ್ಷೇಮಂ ವಹಾಮ್ಯಹಂ ಹಾಗೂ ಸಂಜೆ ಪರತರ ಮುಕುತಿಗುಪಾಯವಿದು ನಿಜ ಶಿವಮಂತ್ರ ಪ್ರವಚನ ನಡೆಯಲಿದೆ. ಡಾ. ಶಿವಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ, ಡಾ. ಶಿವಕುಮಾರ ಸ್ವಾಮೀಜಿ ಪಾವನ ಸಾನಿಧ್ಯ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ ಅಧ್ಯಕ್ಷತೆ, ಪ್ರಣವಾನಂದ ಸ್ವಾಮೀಜಿ, ಮಿಟ್ಟಿಮಲ್ಕಾಪುರದ ನಿಜಾನಂದ ಸ್ವಾಮೀಜಿ, ಕಲಬುರಗಿಯ ಮಾತೆ ಲಕ್ಷ್ಮಿದೇವಿ ಹಾಗೂ ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ವಿವಿಧ ಮಠಾಧೀಶರು ಸಮ್ಮುಖ ವಹಿಸುವರು.
ಅಂದು ಸಂಜೆ ೪.೩೦ ರಿಂದ ೫.೩೦ ರ ವರೆಗೆ ಸಿದ್ಧಾರೂಢ ಚರಿತಾಮೃತ ೫೬ ಜನರಿಂದ ಏಕಕಾಲಕ್ಕೆ ಅಖಂಡ ಪಾರಾಯಣ, ರಾತ್ರಿ ೧೦ಕ್ಕೆ ಸಿದ್ಧಕಥಾಮೃತ ಮತ್ತು ಸಚ್ಚಿದಾನಂದ ಸ್ವಾಮೀಜಿ ತೊಟ್ಟಿಲೋತ್ಸವ ನಡೆಯಲಿದೆ.
೨೧ ರಂದು ಬೆಳಿಗ್ಗೆ ಗುರು ಚರಣಾಂಬುಜ ನಿರ್ಭರ ಭಕ್ತ ಪ್ರವಚನ ಜರುಗಲಿದೆ. ಡಾ. ಶಿವಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ, ಡಾ. ಶಿವಕುಮಾರ ಸ್ವಾಮೀಜಿ ಪಾವನ ಸಾನಿಧ್ಯ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ ಅಧ್ಯಕ್ಷತೆ, ಯೋಗಿರಾಜ ಕಾಶಿನಾಥ ಬಾಬಾ ಮಹಾರಾಜ, ಸಹಜಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ನಿಜಾನಂದ ಸ್ವಾಮೀಜಿ, ಮಾತೆ ಲಕ್ಷ್ಮಿದೇವಿ ನಿಜಗುಣದೇವ ಸ್ವಾಮೀಜಿ ನೇತೃತ್ವ ವಹಿಸುವರು. ವಿವಿಧ ಮಠಾಧೀಶರು ಸಮ್ಮುಖ ವಹಿಸುವರು.
ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಗಣೇಶಾನಂದ ಮಹಾರಾಜ ಹಾಗೂ ಮಾತೆ ಸಿದ್ಧೇಶ್ವರಿ ಕೋರಿದ್ದಾರೆ.