ಜಿಲ್ಲಾಮಟ್ಟದ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆ ಗಳಲ್ಲಿ ರಜತ ಮತ್ತು ಕಂಚಿನ ಪದಕ

ಕಲ್ಬುರ್ಗಿ:ಜ.23: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಲ್ಬುರ್ಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ಹಾಗೂ ಜಿಲ್ಲಾಡಳಿತ ಕಲ್ಬುರ್ಗಿ ಸಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಅಫ್ಜಲ್ ಪುರ್ ಪ್ರಾಚಾರ್ಯರಾದ ಡಾ. ಪ್ರಭುದೇವ್ ಎಂ ಎಸ್ 400 ಮೀಟರ್ ಅಥ್ಲೆಟಿಕ್ಸ್ ಓಟದಲ್ಲಿ (50 ವಯಸ್ಸು ಮೇಲ್ಪಟ್ಟ ವರ್ಗದಲ್ಲಿ) ರಜತ ಪದಕವನ್ನು ಹಾಗೂ ಯಾಂತ್ರಿಕ ವಿಭಾಗದ ಶ್ರೀ ಪ್ರಕಾಶ್ ರಾಥೋಡ್ ಕಂಚಿನ ಪದಕವನ್ನು 100 ಮೀಟರ್ ಓಟದಲ್ಲಿ ಓಟದಲ್ಲಿ (40 ವಯಸ್ಸು ಮೇಲ್ಪಟ್ಟ ವರ್ಗದಲ್ಲಿ) ಪಡೆದು ಸಂಸ್ಥೆಯ ಗೌರವ ಹೆಚ್ಚಿಸಿದ್ದಕ್ಕಾಗಿ ಪ್ರಾಚಾರ್ಯರು ಸಂಸ್ಥೆ ಮತ್ತು ಇಲಾಖೆ ವತಿಯಿಂದ ಹರ್ಷ ವ್ಯಕ್ತಪಡಿಸಿದ್ದಾರೆ.