
ಕೃಷಿಯಲ್ಲಿ ಅಕ್ಷಯ್ ಪ್ರಥಮ, ನರ್ಸಿಂಗ್‌ನಲ್ಲಿ ಹರೀಶ್ ರಾಜ್‌ಗೆ ಪ್ರಥಮ ಸ್ಥಾನ
ಬೆಂಗಳೂರು, ಮೇ ೨೪- ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಇಂದು ಪ್ರಕಟಿಸಲಾಗಿದೆ.
ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್‌ಇ ಶಾಲೆಯ ಭವೇಶ್ ಜಯಂತಿ ಅವರು ಶೇ. ೯೯.೦೬ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾರೆ. ಕೃಷಿಯಲ್ಲಿ ಅಕ್ಷಯ್ ಎಂ ಹೆಗೆಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಅದೇ ರೀತಿ, ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿಯ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ ಶೇ. ೯೮.೮೩ ರಷ್ಟು ಗಳಿಸುವ ಮೂಲಕ ಎರಡನೇ ರ್‍ಯಾಂಕ್ ಗಳಿಸಿದ್ದಾರೆ.
ಚೈತನ್ಯ ಟೆಕ್ನೋ ಸ್ಕೂಲ್, ಮುನೇನಕೊಳಲ
ಮರತಹಳ್ಳಿ ಬೆಂಗಳೂರಿನ ದಿನೇಶ್ ಗೊಂತಿ ಅರುಣಾಚಲಂ ಸಿಬಿಎಸ್‌ಸಿ ಕರ್ನಾಟಕ ಶೇ. ೯೮.೬೭ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.
ನಗರದಲ್ಲಿಂದು ಮಲ್ಲೇಶ್ವರಂನ ೧೮ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಫಲಿತಾಂಶ ಪ್ರಕಟಿಸಿ, ಸಿಇಟಿ ಪರೀಕ್ಷೆಗೆ ೩.೩೦ ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ ೩.೧೧ ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.
ಈ ಬಾರಿ ಪರೀಕ್ಷಾ ಅಕ್ರಮ ತಡೆಯಲು ಈ ಭಾರಿ ಫೇಸ್ ರೆಗ್ನನೇಷನ್ ಬಳಕೆ ಮಾಡಲಾಗಿತ್ತು. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗಿದೆ. ಇನ್ನು ಭೌತಶಾಸ್ತ್ರ ವಿಷಯದಲ್ಲಿ ಒಂದು ಗ್ರೆಸ್ ಮಾರ್ಕ್ ಅಂಕ ಕೊಡಲಾಗಿದೆ ಎಂದು ಉಲ್ಲೇಖಿಸಿದರು.
ರಸಾಯನಶಾಸ್ತ್ರದಲ್ಲಿ ಎರಡು ಹಾಗೂ ಜೀವಶಾಸ್ತ್ರದಲ್ಲಿ ಒಂದು ಸರಿ ಉತ್ತರ ಕೊಡಲಾಗಿದೆ. ಇದೇ ಮೊದಲ ಭಾರಿಗೆ ಓಎಂಆರ್ ಶೀಟ್‌ನ್ನು ವೆಬ್ ಸೈಟ್‌ಗೆ ಅಪ್ಲೋಡ್ ಮಾಡಲಾಗಿತ್ತು ಎಂದೂ ಅವರು ಹೇಳಿದರು.
ಏ.೧೬ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ, ಏ.೧೭ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು ೭೭೫ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ದ್ವಿತೀಯ ಪಿಯು ಪರೀಕ್ಷೆ-೧ ಮತ್ತು ಪರೀಕ್ಷೆ-೨, ಸಿಬಿಎಸ್‌ಇ, ಐಸಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಪಡೆದ ಅಂಕಗಳ ಕೂಡುವಿಕೆ ಕಾರ್ಯವನ್ನು ಕೆಇಎ ಪೂರ್ಣಗೊಳಿಸಿದೆ.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ. ೧೫ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ ಹೆಚ್ಚಿನವರು ಕೇರಳದ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳ ಪಿಯು ಫಲಿತಾಂಶವನ್ನು ಕೇರಳ ಪದವಿಪೂರ್ವ ಶಿಕ್ಷಣ ಇಲಾಖೆ ಮೇ ೨೧ರಂದು ಪ್ರಕಟಿಸಿದೆ. ಮೇ ೨೩ರಂದು ಸಿಇಟಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಒಂದು ದಿನ ಮುಂದೂಡಲಾಗಿತ್ತು.
ಫಲಿತಾಂಶ ಲಭ್ಯ..!
ಮಧ್ಯಾಹ್ನ ೨ ಗಂಟೆ ನಂತರ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (hಣಣಠಿs://ಛಿeಣoಟಿಟiಟಿe.ಏಚಿಡಿಟಿಚಿಣಚಿಞಚಿ.gov.iಟಿ/ ugಛಿeಣಡಿಚಿಟಿಞ೨೦೨೫/ ಛಿheಛಿಞಡಿesuಟಣ.ಚಿsಠಿx ಹಾಗೂ hಣಣಠಿs://ಞಚಿಡಿಡಿesuಟಣs.ಟಿiಛಿ.iಟಿ) ಫಲಿತಾಂಶದ ವಿವರಗಳು ಲಭ್ಯವಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.
ಎಂಜಿನಿಯರಿಂಗ್
೧. ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
೨. ಸಾತ್ವಿಕ್ ಬಿರಾದರ್- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಉತ್ತರಹಳ್ಳಿ
೩. ದಿನೇಶ್ ಅರುಣಾಚಲಂ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
ಕೃಷಿ
೧. ಅಕ್ಷಯ್ ಹೆಗ್ಡೆ – ಆಳ್ವಾಸ್ ಕಾಲೇಜ್ ಮುಡುಬಿದ್ರೆ.
೨. ಶಶಿ ಪಂಡಿತ್ – ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು.
೩. ಸುಚಿತ್ ಪಿ. ಪ್ರಸಾದ್ – ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು.
ಪಶುಸಂಗೋಪನೆ
೧. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
೨. ಆತ್ರೇಯ – ಓPS. ಎಚ್‌ಎಸ್‌ಆರ್ ಲೇಔಟ್
೩. ಸಫಲ್.ಎಸ್. ಶೆಟ್ಟಿ – ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು.
ಫಾರ್ಮ-ಡಿ
೧. ಆತ್ರೇಯ – ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್‌ಎಸ್‌ಆರ್ ಲೇಔಟ್
೨. ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
೩. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
ನರ್ಸಿಂಗ್
೧. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
೨. ಆತ್ರೇಯ – ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್‌ಎಸ್‌ಆರ್ ಲೇಔಟ್
೩. ಸಫಲ್.ಎಸ್. ಶೆಟ್ಟಿ – ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು
ಬಿ- ಫಾರ್ಮ್
೧. ಆತ್ರೇಯ – ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್‌ಎಸ್‌ಆರ್ ಲೇಔಟ್
೨. ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
೩. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ