Home ಜಿಲ್ಲೆ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ, ಕೆ.ಎಸ್.ಸಿ.ಎಸ್.ಟಿ. ಹಾಗೂ ಸಮಾಧಾನ ಕೌನ್ಸೆಲಿಂಗ್ ಸೆಂಟರ್‍ಗಳೊಂದಿಗೆ ಎರಡು ಮಹತ್ವದ ಒಡಂಬಡಿಕೆಗಳಿಗೆ ಸಹಿ

ಶರಣಬಸವ ವಿಶ್ವವಿದ್ಯಾಲಯ, ಕೆ.ಎಸ್.ಸಿ.ಎಸ್.ಟಿ. ಹಾಗೂ ಸಮಾಧಾನ ಕೌನ್ಸೆಲಿಂಗ್ ಸೆಂಟರ್‍ಗಳೊಂದಿಗೆ ಎರಡು ಮಹತ್ವದ ಒಡಂಬಡಿಕೆಗಳಿಗೆ ಸಹಿ

ಕಲಬುರಗಿ: ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಶ್ರೇಷ್ಠತೆಯನ್ನು ಹೆಚ್ಚಿಸುವುದರ ಜೊತೆಗೆ, ವಿಶ್ವವಿದ್ಯಾಲಯ ಮತ್ತು ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ಹೊಸ ಪ್ರಮಾಣಪತ್ರ ಕೋರ್ಸ್ ಆರಂಭಿಸುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯವು ಎರಡು ಮಹತ್ವದ ತಿಳಿವಳಿಕೆ ಒಡಂಬಡಿಕೆಗಳಿಗೆ ಸಹಿ ಹಾಕಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ) ಯೊಂದಿಗೆ ಮಾಡಿಕೊಂಡ ಒಡಂಬಡಿಕೆಗೆ ಕೆಎಸ್‍ಸಿಎಸ್‍ಟಿಯ ಕಾರ್ಯದರ್ಶಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪೆÇ್ರಫೆಸರ್ ಆಗಿರುವ ಪೆÇ್ರ. ಅಶೋಕ ಎಂ. ರಾಯಚೂರ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ಸರಳ ಸಮಾರಂಭದಲ್ಲಿ ಸಹಿ ಹಾಕಿದರು.
ಇನ್ನೊಂದೆಡೆ, ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್‍ನ ಪರವಾಗಿ ಖ್ಯಾತ ಮನೋವಿಜ್ಞಾನಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ. ಸಿ. ಆರ್. ಚಂದ್ರಶೇಖರ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ಮತ್ತೊಂದು ಸರಳ ಸಮಾರಂಭದಲ್ಲಿ ತಿಳಿವಳಿಕೆ ಒಡಂಬಡಿಕೆಗೆ ಸಹಿ ಹಾಕಿದರು.
ಕೆಎಸ್‍ಸಿಎಸ್‍ಟಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆಯನ್ವಯ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ ಆಸ್ತಿ ಹಕ್ಕು ಘಟಕ ಸ್ಥಾಪಿಸಲಾಗುವುದು. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಎಸ್‍ಸಿಎಸ್‍ಟಿ ತಾಂತ್ರಿಕ ನೆರವು ನೀಡಲಿದ್ದು, ಜಂಟಿ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಆಯೋಜಿಸಲು ಸಹಕರಿಸಲಿದೆ. ಅಲ್ಲದೆ, ವಿಶ್ವವಿದ್ಯಾಲಯದಲ್ಲಿ ಸಮಗ್ರ ಐಪಿಆರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅಗತ್ಯ ನೆರವು ನೀಡಲಿದೆ.
ವಿಶ್ವವಿದ್ಯಾಲಯ ಮತ್ತು ಕೆಎಸ್‍ಸಿಎಸ್‍ಟಿ ಎರಡೂ ಸಂಸ್ಥೆಗಳು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ರಕ್ಷಿಸುವ, ಉತ್ತೇಜಿಸುವ ಹಾಗೂ ಮತ್ತಷ್ಟು ವಿಸ್ತರಿಸುವ ಕ್ರಮಗಳನ್ನು ಕೈಗೊಳ್ಳಲಿವೆ. ಇದರಿಂದ ಹೊಸ ಬೌದ್ಧಿಕ ಆಸ್ತಿಗಳ ಸೃಷ್ಟಿಗೆ ಉತ್ತೇಜನ ದೊರೆಯಲಿದ್ದು, ಈ ನಿಟ್ಟಿನಲ್ಲಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.
ವಿಶ್ವವಿದ್ಯಾಲಯದ ಬೌದ್ಧಿಕ ಆಸ್ತಿ ಹಕ್ಕುಗಳ ನೋಂದಣಿಗೆ ಸಂಬಂಧಿಸಿದಂತೆ ಕೆಎಸ್‍ಸಿಎಸ್‍ಟಿ ತಾಂತ್ರಿಕ ನೆರವು ನೀಡಲಿದೆ. ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳಬಹುದಾದ ಸಂಭಾವ್ಯ ಬೌದ್ಧಿಕ ಆಸ್ತಿ ಹಾಗೂ ನವೀನ ಆವಿμÁ್ಕರಗಳನ್ನು ಗುರುತಿಸುವಲ್ಲಿ ಕೆಎಸ್‍ಸಿಎಸ್‍ಟಿ ಸಹಕರಿಸಲಿದೆ. ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಐಪಿಆರ್‍ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡಲಿದೆ.
ಪ್ರಸ್ತಾವಿತ ಘಟಕವು ವಿಶ್ವವಿದ್ಯಾಲಯ ಹಾಗೂ ಕೆಎಸ್‍ಸಿಎಸ್‍ಟಿ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ಹೊಂದಿರಲಿದೆ. ಈ ಘಟಕವು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿ, ಕಾಲಕಾಲಕ್ಕೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಿದೆ. ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳಲ್ಲಿ ನಡೆಯುವ ನವೀನ ಆವಿμÁ್ಕರಗಳನ್ನು ಗುರುತಿಸಿ, ಅವುಗಳನ್ನು ಬೌದ್ಧಿಕ ಆಸ್ತಿಯಾಗಿ ನೋಂದಾಯಿಸುವ ಹಾಗೂ ವಾಣಿಜ್ಯೀಕರಣಗೊಳಿಸುವ ಪ್ರಕ್ರಿಯೆಗೆ ಈ ಘಟಕ ಮಾರ್ಗದರ್ಶನ ನೀಡಲಿದೆ.
ಇದೇ ವೇಳೆ, ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆಯನ್ವಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 50 ಗಂಟೆಗಳ ಅವಧಿಯ ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್ ಆರಂಭಿಸಲಾಗುವುದು.
ಖ್ಯಾತ ಮನೋವೈದ್ಯರು, ಮನೋವಿಜ್ಞಾನಿಗಳು, ಥೆರಪಿಸ್ಟ್‍ಗಳು ಹಾಗೂ ಪ್ರಮಾಣೀಕೃತ ಕೌನ್ಸೆಲರ್‍ಗಳ ಜಾಲವನ್ನು ಹೊಂದಿರುವ ಸಮಾಧಾನ ಕೌನ್ಸೆಲಿಂಗ್ ಸೆಂಟರ್, ಸಮುದಾಯ ಹಾಗೂ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ಹಾಗೂ ತಗ್ಗಿಸಲು ಸಮರ್ಥರಾಗಿರುವ ತರಬೇತಿಪಡಿಸಿದ ಕೌನ್ಸೆಲರ್‍ಗಳ ತಂಡವನ್ನು ರೂಪಿಸುವಲ್ಲಿ ಸಹಕರಿಸಲಿದೆ. ಇಂತಹ ಕೌನ್ಸೆಲರ್‍ಗಳು ಶಾಲೆಗಳು, ಕಾಲೇಜುಗಳು ಹಾಗೂ ಸಮಾಜದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ತರಬೇತಿ ಪಡೆಯಲಿದ್ದಾರೆ.
ಈ ಪ್ರಮಾಣಪತ್ರ ಕೋರ್ಸ್ ಅನ್ನು ಹೈಬ್ರಿಡ್/ಫಿಜಿಟಲ್ ಮಾದರಿಯಲ್ಲಿ ನಡೆಸಲಾಗುವುದು. ನೇರ ಸಂವಾದಾತ್ಮಕ ಹಾಗೂ ಮೇಲ್ವಿಚಾರಣೆಯ ಆನ್‍ಲೈನ್ ತರಗತಿಗಳು, ಡಿಜಿಟಲ್ ಕಲಿಕಾ ಘಟಕಗಳು ಹಾಗೂ ಸಮಗ್ರ ಪ್ರಾಯೋಗಿಕ ಮತ್ತು ಭೌತಿಕ ಕಾರ್ಯಾಗಾರಗಳ ಸಮನ್ವಯದೊಂದಿಗೆ ಕೋರ್ಸ್‍ನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು.
ಕೋರ್ಸ್‍ಗೆ ಸೇರ್ಪಡೆಯಾಗಲು ಕನಿಷ್ಠ 20 ವರ್ಷ ವಯಸ್ಸು ಹಾಗೂ ಕನಿಷ್ಠ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರಬೇಕು. ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಪರಿಣಾಮಕಾರಿ ತರಬೇತಿಗಾಗಿ ವಿಶೇಷ ಹಾಗೂ ಸಮಗ್ರ ಪಠ್ಯಕ್ರಮವನ್ನು ರೂಪಿಸಲಿದೆ. ಕೇಂದ್ರದ ವಿಷಯ ತಜ್ಞರು ತರಗತಿಗಳನ್ನು ನಡೆಸಲಿದ್ದಾರೆ.
ಎರಡೂ ತಿಳಿವಳಿಕೆ ಒಡಂಬಡಿಕೆಗಳ ಸಹಿ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಡೀನ್ ಡಾ. ಶಿವಕುಮಾರ ಜವಳಿಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.