Home ಜಿಲ್ಲೆ ಕಲಬುರಗಿ ಕಿವುಡರ ಮಾನವ ಹಕ್ಕುಗಳ ರಕ್ಷಣೆಗೆ ಸಂಕೇತ ಭಾಷೆ ಅಗತ್ಯ

ಕಿವುಡರ ಮಾನವ ಹಕ್ಕುಗಳ ರಕ್ಷಣೆಗೆ ಸಂಕೇತ ಭಾಷೆ ಅಗತ್ಯ

ಕಲಬುರಗಿ : ಸಂಕೇತ ಭಾಷೆಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು, ಕಿವುಡ ಜನರ ಮಾನವ ಹಕ್ಕುಗಳನ್ನು ರಕ್ಷಿಸುವುದು ಮತ್ತು ಬೆಂಬಲಿಸುವುದು, ಜಗತ್ತಿನಾದ್ಯಂತ ಕಿವುಡ ಜನರ ಭಾಷಾ ಗುರುತು ಮತ್ತು ಸಾಂಸ್ಕøತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಸಲುವಾಗಿ ಸಂಕೇತ ಭಾಷೆಗಳು ಅಗತ್ಯವಾಗಿವೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ಸಮೀಪವಿರುವ ‘ಸನಲೈಟ್ ಟ್ಯುಟೋರಿಯಲ್ಸ್ ‘ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು.
2018ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ‘ಸೆಪ್ಟೆಂಬರ್- 23’ ಅನ್ನು “ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ”ವನ್ನಾಗಿ ಘೋಷಿಸಿತು. ಇದು ವಿಶ್ವ ಕಿವುಡರ ಒಕ್ಕೂಟ ಸ್ಥಾಪನೆಯಾದ ದಿನವೂ ಆಗಿದೆ. ಕಿವುಡರ ಬಗ್ಗೆ ಕೀಳರಿಮೆ ಬೇಡ. ಅವರಿಗೆ ಕೂಡಾ ಅವಕಾಶಗಳನ್ನು ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಅಸ್ಲಾಂ ಶೇಕ್, ಮೊಹ್ಮದ್ ಸೈಯದ್ ಹಮೀದ್, ಶಿವಯೋಗೆಪ್ಪಾ ಎಸ್. ಬಿರಾದಾರ ಸೇರಿದಂತೆ ಇನ್ನಿತರರಿದ್ದರು.