ಕೋಲಾರ,ಜೂ.೧೩- ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮನಸ್ಥಿತಿಯ ಶೂನ್ಯ ಕಾಂಗ್ರೇಸ್ ಪಕ್ಷದ ೨ ವರ್ಷದ ಶೂನ್ಯ ಸಾಧನೆಯಾಗಿದೆ, ರಾಜ್ಯದ ೭.೫ ಕೋಟಿ ಜನತೆಯನ್ನು ಪ್ರತಿನಿಧಿಸುವಂತ ಜವಾಬ್ದಾರಿಯುತ ಮುಖ್ಯ ಮಂತ್ರಿಯಗಳು ಬಾಯಿಗೆ ಬಂದಂತೆ ಹೇಳಿಕೆಗಳು ನೀಡುವಂತಿಲ್ಲ ಎಂದು ರಾಜ್ಯದ ಮಾಜಿ ಉಪಮುಖ್ಯ ಮಂತ್ರಿ ಡಾ, ಅಶ್ವಥ್ ನಾರಾಯಣ್ ಸ್ವಷ್ಟ ಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ,ಕರ್ನಾಟಕವು ಮಹಾರಾಷ್ಟ್ರಕ್ಕಿಂತ ಕಡಿಮೆ ಇದ್ದರೂ ರಾಷ್ಟ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಮುಖ್ಯ ಮಂತ್ರಿಗಳ ವೈಯುಕ್ತಿಕ ಅಭಿಪ್ರಾಯಗಳು ಅವರ ಪಕ್ಷದೊಳಗೆ ಇರಲಿ ರಾಜ್ಯದ ಜನತೆಗೆ ಸಾರ್ವಜನಿಕವಾಗಿ ನೀಡುವಂತ ಹೇಳಿಕೆಗಳಲ್ಲಿ ವಸ್ತುಸ್ಥಿತಿಯಂತಿರಬೇಕು. ಮನಸೋಚ್ಚೆ ನೀಡುವಂತ ಹೇಳಿಕೆಗಳನ್ನು ಬಿಜೆಪಿ ಖಂಡಿಸಲಿದೆ ಎಂದರು,
ಜಾತಿ ಗಣತಿಗೆ ಸಂಬಂಧಿಸಿದಂತೆ ಈ ಮೊದಲು ವಿರೋಧಿಸುತ್ತಿದ್ದ ಕಾಂಗ್ರೇಸ್ ಪಕ್ಷಕ್ಕೆ ಈಗಾ ಜ್ಞಾನೋದಯವಾಗಿದೆ. ಕೇಂದ್ರ ಸರ್ಕಾರದ ಜಾತಿ-ಜನಗಣತಿಗಳ ಮರು ಸಮೀಕ್ಷೆಯ ಆದೇಶವನ್ನು ಸಮ್ಮತಿಸಿದೆ ಎಂದ ಅವರು ಜಾತಿ ಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವೂದೇ ಅವಕಾಶ ಇಲ್ಲವಾದರೂ ರಾಜಕೀಯ ದುರುದ್ದೇಶದಿಂದ ಜಾತಿಗಣತಿ ಮಾಡಲು ಮುಂದಾಗುವ ಮೂಲಕ ಕಾಂಗ್ರೇಸ್ ಪಕ್ಷದ ಪ್ರಜ್ಞೆಯನ್ನು ಶೂನ್ಯ ಎಂದು ನಿರೂಪಿಸಿದೆ ಎಂದ ಅವರು ಭಾರತ ಸರ್ಕಾರವು ೨೦ ಸಾವಿರ ಕೋಟಿ ರೂ ವೆಚ್ಚದಲ್ಲಿ ಜಾತಿ, ಜನ, ಶಿಕ್ಷಣ. ಸಾಮಾಜಿಕ ಅರ್ಥಿಕ ಗಣತಿಯ ಸಮೇಕ್ಷೆಗಳನ್ನು ನಡೆಸಲು ಮುಂದಾಗಿದೆ. ಈ ಹಿಂದೆ ರಾಜ್ಯ ಸರ್ಕಾರವು ೧೫೦ ಕೋಟಿ ವೆಚ್ಚದಲ್ಲಿ ಮಾಡಿದ ಸಮೀಕ್ಷೆ ಗಣನೆ ಇಲ್ಲದೆ ನಷ್ಟವಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲನ ಹಗರಣದಲ್ಲಿ ೧೮೭ ಕೋಟಿಯಲ್ಲಿ ೮೭ ಕೋಟಿ ರೂ ಲೆಕ್ಕಾ ಸಿಕ್ಕಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿರುವುದು ಶ್ಲಾಘನೀಯ ಸಂಗತಿಯಾಗಿದೆಯೆಂದು ವ್ಯಂಗವಾಡಿದ ಅವರು ಈ ಪ್ರಕರಣವು ಸರ್ಕಾರಿ ನೌಕರ ಚಂದ್ರಶೇಖರ್ ಎಂಬುವರ ಆತ್ಮಹತ್ಯೆ ಪ್ರಕರಣದಲ್ಲಿನ ಡೆತ್ ನೋಟ್‌ನಿಂದ ಬಹಿರಂಗವಾಯಿತು ಇಲ್ಲದಿದ್ದರೆ ಇದನ್ನು ಮುಚ್ಚಿ ಹಾಕುತ್ತಿದ್ದರು. ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಅರ್ಥಿಕ ಖಾತೆ ಹೊಂದಿದ್ದರೂ ಸಹ ನೇರವಾಗಿ ಖಾಸಗಿಯವರ ಖಾತೆಗಳಿಗೆ ಹೇಗೆ ವರ್ಗಾವಣೆ ಅಗಿದೆ. ಇದೇ ರೀತಿ ಮುಡಾ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದು ಈ ಎರಡು ಹಗರಣಗಳ ನೈತಿಕ ಹೊಣೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರೆ ಹೊತ್ತು ರಾಜಿನಾಮೆ ನೀಡ ಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ಆರ್.ಸಿ.ಬಿ. ವಿಜಯೋತ್ಸವವನ್ನು ಅವೈಜ್ಷಾನಿಕವಾಗಿ ಆಯೋಜಿಸಿ ೧೧ ಮಂದಿ ಕಾಲು ತುಳಿತಕ್ಕೆ ಬಲಿಯಾಗಿರುವ ಪ್ರಕರಣ ತೀರ ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿರುವುದು ಸಮಂಜಸವಲ್ಲ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮೂರು ಮಂದಿಯು ತಮ್ಮ ಸ್ಥಾನಗಳಿಗೆ ರಾಜಿನಾಮೆಯನ್ನು ನೀಡ ಬೇಕಾಗಿತ್ತು. ಅದರೆ ನಾಚಿಕೆಯಿಲ್ಲದೆ ಮುಂದುವರೆಯುತ್ತಿದ್ದಾರೆ ಜನಪ್ರತಿನಿಧಿಗಳ ಲೋಪವನ್ನು ಅಧಿಕಾರಿಗಳ ಮೇಲೆ ಹೊರೆಸಿರುವುದು ಎಷ್ಟು ಮಾತ್ರ ಸಮಂಜಸ ಎಂಬುವುದನ್ನು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ ಎಂದರು.