ಸಿದ್ದೇಶ್ವರ ಸಂಕ್ರಮಣ ಜಾತ್ರೆ: ನಂದಿ ಧ್ವಜಗಳ ಉತ್ಸವ

ವಿಜಯಪುರ, ಜ. 16: ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ವಿಜಯಪುರ ನಗರ ಶಾಸಕರು, ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ಅವರು ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ನಗರ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಮೆರವಣಿಗೆ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರಮನ್ ಬಸಯ್ಯಾ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ, ಎಂ.ಎಂ. ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ವಿಜಯಪುರ ನಗರದ ಮಹಾಪೌರ ಎಮ್.ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಎಸ್. ಎಂ. ಪಾಟೀಲ, ಅಮೃತ ತೋಸ್ನಿವಾಲ್, ಪಾಂಡುಸಾಹುಕಾರ ದೊಡಮನಿ, ಎಸ್.ಎಚ್. ನಾಡಗೌಡ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಎನ್.ಎಂ. ಗೋಲಾಯಿ, ಮಲಕಪ್ಪಣ್ಣ ಗಾಣಿಗೇರ, ವಿಜಯಕುಮಾರ ಡೋಣಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ನಾಗಪ್ಪ ಗುಗ್ಗರಿ, ಮಾದೇವ ಜಂಗಮಶೆಟ್ಟಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಅನೀಲ ಸಬರದ, ಸುರೇಶ ಇಟ್ಟಗಿ, ಡಾ. ಸುನೀಲ ಉಕುಮನಾಳ, ರಾಹುಲ್ ಜಾಧವ, ವಿಠ್ಠಲ ಹೊಸಪೇಟಿ, ಕಿರಣ ಪಾಟೀಲ, ರಾಜು ಕುರಿಯವರ, ಬಸವರಾಜ ಕೋರಿ, ಶಿವಾನಂದ ಪಾಟೀಲ, ಚಿಮ್ಮಲಗಿ ಶ್ರೀಶೈಲ ದೇವರ, ಉಮೇಶ ಕೋರಿ, ಪ್ರಶಾಂತ ಚೌಧರಿ, ವೀರೇಶ ವಾಲಿ, ಡಾ. ಸೋಮಶೇಖರ ವಾಲಿ, ಸಾಹೇಬಗೌಡ ಬಸರಕೋಡ, ಬಸವರಾಜ ಹಳೆಮನಿ, ಮುತ್ತಪ್ಪ ಹಳ್ಳಿ, ಎಂ. ಎಸ್. ರುದ್ರಗೌಡರ, ಲಕ್ಷ್ಮಣ ಜಾಧವ, ಬಸವರಾಜ ಬಿರಾದಾರ, ಪ್ರದೀಪ ಚಲವಾದಿ, ಕಲ್ಲಪ್ಪ ಬಗಲಿ, ಎಸ್. ಎಸ್. ಮನಹಳ್ಳಿ, ವೈಜನಾಥ ಬೋಗಶೆಟ್ಟಿ, ಜಿ. ಎಂ. ಜಿರಾಳೆ, ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು.
ಗುರು ಎಸ್. ಗಚ್ಚಿನಮಠ ಇವರಿಂದ ಸರ್ವ ಭಕ್ತಾಧಿಗಳಿಗೆ ಪ್ರಸಾದ ಸೇವೆ ನೆರವೇರಿತು. ಶ್ರೀ ಸಿದ್ಧೇಶ್ವರ ಸಂಸ್ಥೆವತಿಯಿಂದ ಅವರ ಕುಟುಂಬದವರಿಗೆ ಸನ್ಮಾನಿಸಲಾಯಿತು.
ರಾತ್ರಿ 8 ಗಂಟೆಗೆ ಮಲ್ಲಿಕಾರ್ಜುನ ತೇಲಿ ಇವರಿಂದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಅನ್ನಪ್ರಸಾದ ನೆರವೇರಿಸಿದರು. ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾಂಕೇತಿಕವಾಗಿ ಮದ್ದು ಸುಡುವ ಕಾರ್ಯಕ್ರಮ ಜರುಗಿತು. ನಂತರ
ರಸಮಂಜರಿ ಕಾರ್ಯಕ್ರಮ ಜರುಗಿದವು.
ಗೊಂದಳಿ ಪದ ಡಾ. ವೆಂಕಪ್ಪ ಸುಗತೆಕರ ಬಾಗಲಕೋಟ, ನೃತ್ಯ ರೂಪಕ ಕು. ದಿವ್ಯಾ ದಿಶಾ ಹಾಗೂ ಸಂಗಡಿಗರು, ಸಂಗೀತ ಮತ್ತು ಹಾಸ್ಯ ರಸಮಂಜರಿ, ವಿರೇಶ ವಾಲಿ ಹಾಗೂ ಸಂಗಡಿಗರು, ಸುನೀಲ ಗುಜಗೊಂಡ, ಸರಿಗಮಪ ಕಲಾವಿದರು ಹಾಗೂ ಮೋಬೈಲ್ ಮಲ್ಲಣ್ಣ, ರಸಮಂಜರಿ ಮೇಘಾ, ಮೇಲೊಡಿಸ್, ವಿಜಯಪುರ ಮಹೆಶ ಶಿವಶರಣ, ಸಂಗ್ಯಾ ಬಾಳ್ಯಾ ಬಯಲಾಟ ಶ್ರೀ ಮಲ್ಲಿಕಾರ್ಜುನ ಬಯಲಾಟ ಸಂಘ, ತೆಲಸಂಗ ರಮೇಶ ಸಿ. ಹಳಮನಿ ಹಾಗೂ ಸಂಗಡಿಗರಿಂದ ನಡೆಯಿತು.