Home ಜಿಲ್ಲೆ ಸಿದ್ದಲಿಂಗಶ್ರೀ ಹೆಸರು ದೇಶವಿದೇಶಗಳಲ್ಲಿಯೂ ಪಸರಿಸಿದೆ:ಕೂಚಬಾಳ

ಸಿದ್ದಲಿಂಗಶ್ರೀ ಹೆಸರು ದೇಶವಿದೇಶಗಳಲ್ಲಿಯೂ ಪಸರಿಸಿದೆ:ಕೂಚಬಾಳ

ತಾಳಿಕೋಟೆ:ಜೂ.9: ತಾಳಿಕೋಟೆಯ ಶ್ರೀಖಾಸ್ಗತೇಶ್ವರ ಮಠವು ಸುಮಾರು 15 ತಲೆಮಾರಿನ ಶ್ರೀಗಳಿಂದ ಸಾಗಿಬಂದಿದ್ದರೂ ಈಗ ಪೀಠಾಧಿಪತಿಗಳಾದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು 16ನೇ ಪೀಠಾಧಿಪತಿಗಳಾಗಿ ಕೇವಲ 24ನೇ ವಯಸ್ಸಿನಲ್ಲಿ ತಾಳಿಕೋಟೆ ಪಟ್ಟಣದ ಅಲ್ಲದೇ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸಿ ಭಕ್ತರಿಗೆ ಪುರಾಣ ಪ್ರವಚನದ ಮೂಲಕ ಜ್ಞಾನ ಮೂಡಿಸುವ ಕಾರ್ಯಕ್ಕೆ ಮುಂದಾಗಿರುವದನ್ನು ನೋಡಿದರೆ ಇವರೊಬ್ಬ ಮಹಾಯೋಗಿ ಸಂತರ ಸ್ಥಾನವನ್ನು ಅಲಂಕರಿಸಲಿದ್ದಾರೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷರಾದ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಸೋಮವಾರರಂದು ಶ್ರೀ ಸಿದ್ದಲಿಂಗ ದೇವರ ಪ್ರೀಮೇರ್ ಲೀಗ್ ಕ್ರೀಕೇಟ್ ಬಳಗ ಹಾಗೂ ಸಿದ್ದಲಿಂಗ ದೇವರ ಅಭಿಮಾನಿಬಳಗದ ವತಿಯಿಂದ ಶ್ರೀ ಸಿದ್ದಲಿಂಗ ದೇವರ 25ನೇ ಜನ್ಮದಿನೋತ್ಸವ ಅಂಗವಾಗಿ ಏರ್ಪಡಿಸಲಾದ ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನ ಅಲಂಕರಿಸಿ ಮಾತನಾಡುತ್ತಿದ್ದ ಅವರು ಪೌರ ಕಾರ್ಮಿಕರು ನಗರ ಮತ್ತು ಗ್ರಾಮಗಳ ನೈರ್ಮಲ್ಯ ಮತ್ತು ಸ್ವಚ್ಚತೆಯನ್ನು ಕಾಪಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾ ಸಾಗಿಬಂದಿದ್ದಾರೆ ಪುರಸಭೆ ಇಲಾಖೆಯ ಸಿಬ್ಬಂದಿಯಾಗಿದ್ದರೂ ಇವರು ಬೀದಿಗಳನ್ನು ಗೂಡಿಸುವದು ಕಸ ವಿಲೇವಾರಿ ಮಾಡುವದು ಮತ್ತು ಚರಂಡಿಗಳನ್ನು ಸ್ವಚ್ಚಗೊಳಿಸುವದು ಅವರ ಮುಖ್ಯ ದಿನದ ಕರ್ತವ್ಯವಾಗಿದ್ದರೂ ಆ ಕಾರ್ಯವೆಸಗುತ್ತಾ ತಾಳಿಕೋಟೆ ಪಟ್ಟಣದಲ್ಲಿ ಸಾಗಿಬಂದಿದ್ದ ಪೌರ ಕಾರ್ಮಿಕರನ್ನು ಗುರುತಿಸಿ ಶ್ರೀಗಳ ಅಪೇಕ್ಷೆಯಂತೆ ಮಹಿಳೆಯರ ಮತ್ತು ಪುರುಷ ಕಾರ್ಮಿಕರನ್ನು ಇಂದು ಕರೆಯಿಸಿ ಅವರಿಗೆ ಸನ್ಮಾನಿಸಿ ಗೌರವಿಸಿರುವದು ಸಂತಸ ತಂದಿದೆ ಎಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಬಡತನದ ಬೆಸೆಯಲ್ಲಿ ಸಾಗಿಬಂದಿದ್ದ ಪೌರ ಕಾರ್ಮಿಕರ ಬಗ್ಗೆ ಹೆಚ್ಚಿಗೆ ಅವರ ಕುರಿತು ಅರೀತವರೇ ಕಡಿಮೆ ಕಾಣುತ್ತಲಿದ್ದಾರೆ ಯಾಕೆಂದರೆ ಅವರು ಮಾಡುತ್ತಿರುವ ಸೇವಾ ಮನೋಭಾವನೆಯನ್ನು ಗುರುತಿಸುತ್ತಿರುವದು ಕಡಿಮೆಯಾಗಿ ಕಂಡುಬರುತ್ತಲಿದೆ ಅಂತಹದನ್ನು ಗುರುತಿಸಿದ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗಶ್ರೀಗಳ ಅಪೇಕ್ಷೆಯಂತೆ ಇಂದು ಅಭಿಮಾನಿ ಬಳಗವು ಏಚ್ಚೆತ್ತುಕೊಂಡು ಸುಮಾರು 70ಕ್ಕೂ ಮೇಲ್ಪಟ್ಟು ಪೌರಕಾರ್ಮಿಕರಿಗೆ ಬಟ್ಟೆಬರಿಗಳನ್ನು ವಿತರಿಸಿ ಸನ್ಮಾನಿಸಿ ಗೌರವಿಸಿರುವದು ಸಂತಸ ತಂದಿದೆ ಎಂದರು. ಪೌರ ಕಾರ್ಮಿಕರ ಕುರಿತು ಅವರ ಸೇವಾ ಮನೋಭಾವ ಕುರಿತು ನನಗೆ ಗೊತ್ತಿದೆ ನಮ್ಮ ತಂದೆಯವರೂ ಕೂಡಾ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರ ಸೇವೆಯನ್ನು ಬಲ್ಲವನಾಗಿದ್ದೇನೆ ಬಹಳೇ ಬಡತನದ ಬಗೆಯಿಂದ ಸಾಗಿಬಂದ ಇಂತಹ ಕಾರ್ಮಿಕರನ್ನು ಗುರುತಿಸಿ ಗೌರವಿಸುವ ಕಾರ್ಯಗಳನ್ನು ಎಲ್ಲರೂ ಮಾಡಿ ಅವರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದ ಘೋರ್ಪಡೆ ಅವರು ಪೌರ ಕಾರ್ಮಿಕರಿಂದಲೇ ನಗರದ ಪಟ್ಟಣದ ಸೌಂದರ್ಯಕರಣ ಕಾರ್ಯವಾಗುತ್ತದೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕೆಂದರು.
ಇದೇ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಲ್ಲ ಪೌರ ಕಾರ್ಮಿಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಮಯದಲ್ಲಿ ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಜೈಸಿಂಗ್ ಮೂಲಿಮನಿ, ರಮೇಶ ಸಾಲಂಕಿ, ಸಂಗಮೇಶ ಬಳಿಗಾರ, ರಾಘವೇಂದ್ರ ಮಾನೆ, ಡಾ.ಎ.ಎ.ನಾಲಬಂದ, ಬಸವರಾಜ ಕಟ್ಟಿಮನಿ, ಮಂಜು ಬಡಿಗೇರ, ಎಂ.ಆರ್.ಕತ್ತಿ, ನಾಗರಾಜ ಬಳಿಗಾರ, ವಿರೇಶ ಸಾಸನೂರ, ಮಹೇಶ ಅಂಬಿಗೇರ, ಆಕಾಶ ಮನಗೂಳಿ, ಭವಾನಿ ಅಂಬಿಗೇರ, ನವೀನ್ ಇಜೇರಿ, ಮಡು ಅಂಬಿಗೇರ, ರೋಹಿತ್ ಚಲವಾದಿ, ರಾಜು ಮೂಕೀಹಾಳ, ಅರುಣ ಪತ್ತಾರ, ಕುಮಾರಿ ಶ್ವೇತಾ ಯರಗಲ್ಲ, ಕಿರಣ ಕತ್ತಿ, ಪುರಸಭೆ ಅಧಿಕಾರಿಗಳಾದ ಶರಣಗೌಡ ಪೊಲೀಸ್‍ಪಾಟೀಲ, ಸಂದೀಪ ವಠಾರ, ಸಿದ್ದಲಿಂಗ ಚೊಂಡಿಪಾಟೀಲ, ಶ್ರೀಪಾದ ಜೋಶಿ, ಫೀರೋಜ ಮುಲ್ಲಾ, ರಂಗನಾಥ ಅಜಮನಿ, ಸಿದ್ದಪ್ಪ ಕೊಳ್ಳಿ, ಮೊದಲಾದವರು ಉಪಸ್ಥಿತರಿದ್ದರು.