ಸಂಜೆವಾಣಿ ವಾರ್ತೆ,
ವಿಜಯಪುರ, ಅ.೧೭: ಬಿ.ಎಲ್.ಡಿ.ಇ ಅಸೋಸಿಯೇಷನ್ನ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ತಂಡ ಮನೋಭಾವ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಿ.ಎಲ್.ಡಿ.ಇ ಸಂಸ್ಥೆಯ ಎಂಜಿನಿಯರಿAಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಸಾದ್ ಕುಮಾರ್ ಇ. ಮುನಗಾಳ ಆಗಮಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ. ಕಾಮತಿ, ಪರೀಕ್ಷಾ ನಿಯಂತ್ರಕ ಹಾಗೂ ಬಿಕಾಂ ಸಂಯೋಜಕಿ ಡಾ. ಭಾರತಿ ಮಠ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸಚಿನ್ ಮಗಾರಿ ಹಾಗೂ ಕ್ರೀಡಾ ಕಾರ್ಯದರ್ಶಿಗಳಾದ ಪ್ರಸಾದ್ ಪಾಟೀಲ ಮತ್ತು ರಾಧಿಕಾ ಕೆ. ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆ ಹಾಗೂ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ವಿಜೇತರು:
ಬಾಲಕರ ವಿಭಾಗ: ಪ್ರಥಮ ಸ್ಥಾನ ದರ್ಶನ್, ದ್ವಿತೀಯ ಸ್ಥಾನ ಶ್ರೀರಾಜ್ ಹಾಗೂ ತೃತೀಯ ಸ್ಥಾನ ನೀಲಾದ್ರಿ ಪಡೆದರು.
ಬಾಲಕಿಯರ ವಿಭಾಗ: ಪ್ರಥಮ ಸ್ಥಾನ ಸಮೃದ್ಧಿ ಉಪ್ಪಿನ್, ದ್ವಿತೀಯ ಸ್ಥಾನ ಭಾಗ್ಯಶ್ರೀ ಹಾಗೂ ತೃತೀಯ ಸ್ಥಾನ ವರುಣಿ ಪಡೆದರು.
ವಿಜೇತರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ದೈಹಿಕ ಕ್ಷಮತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಫೂರ್ತಿ ಹೆಚ್ಚಿಸುವಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.



















