ಕೋಲಾರ,ಆ,೧೭- ನಗರದ ಕಿಲಾರಿಪೇಟೆಯ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ೬೫ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಗಳಿಂದ ನಡೆದಿದ್ದು, ಶನಿವಾರ ಸ್ವಾಮಿಯ ಕಲ್ಯಾಣೋತ್ಸವವನ್ನು ಗೋಪಾಲಕರ ತವರು ಎಂದೇ ಖ್ಯಾತವಾಗಿರುವ ಕೋಲಾರದ ಕಿಲಾರಿಪೇಟೆಯಲ್ಲಿ ಸಾಂಪ್ರದಾಯಿಕವಾಗಿ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನಡೆಯಿತು. ಸಮಾಜಸೇವಕ ಮುಕ್ಕಡ್ ವೆಂಕಟೇಶ್-ಚೆಲುವಮ್ಮ, ಕಿಶೋರ್-ಶಿವರಂಜನಿ, ಮುರಳಿಕೃಷ್ಣ-ತಿಲಕವತಿ, ಸುದರ್ಶನ್ ಕೃಷ್ಣ,ಜಟಾಯು ನಾಗರಾಜ್ ಪುತ್ರ ಶ್ರೀನಿವಾಸ್ ದಂಪತಿಗಳು ಕಲ್ಯಾಣೋತ್ಸವ ನಡೆಸಿಕೊಟ್ಟಿದ್ದು, ಇವರೇ ಈ ಬಾರಿಯೂ ಪೂಜಾ ಕಾರ್ಯಕ್ರಮಗಳು ಮತ್ತು ಅನ್ನದಾಸೋಹದ ನೇತೃತ್ವ ವಹಿಸಿದ್ದರು.
ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ, ಇಡೀ ದೇವಾಲಯಕ್ಕೆ ಪುಷ್ಪಾಲಂಕಾರ ಮಾಡಿದ್ದು, ಭಾರಿ ಪ್ರಮಾಣದಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದು, ಶ್ರದ್ಧಾಭಕ್ತಿಯ ವೈಭವದ ಪೂಜೆಗೆ ಮಾತ್ರ ಅಡ್ಡಿ ಇರಲಿಲ್ಲ.ಸ್ವಾಮಿಗೆ ಅಲಂಕಾರ ಮುಗಿಯುತ್ತಿದ್ದಂತೆ ನಗರದ ವಿವಿಧ ಬಡಾವಣೆಗಳ ನೂರಾರು ಮಂದಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದು, ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಮೂರು ದಿನಗಳಿಂದ ಮುತ್ತೈದೆಯರಿಗೆ ಬಳೆ ತೊಡಿಸುವುದು, ದೀಪೋತ್ಸವ ಸೇವೆ ಸೇರಿದಂತೆ ವಿವಿಧ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಕಿಲಾರಿಪೇಟೆ ಭಕ್ತಾಧಿಗಳು ಶನಿವಾರ ದೇವಾಲಯದ ಆವರಣದಲ್ಲಿ ಕಲ್ಯಾಣೋತ್ಸವವನ್ನು ನಡೆಸಿದರು.
ದೇವಾಲಯದ ಹೊರಭಾಗದಲ್ಲಿ ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮಂಗಳವಾದ್ಯ, ಮೇಳದೊಂದಿಗೆ ಕಲ್ಯಾಣೋತ್ಸವ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ರುಕ್ಮಿಣಿ ಸತ್ಯಭಾಮ ಶ್ರೀವೇಣುಗೋಪಾಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಕಲ್ಯೋಣೋತ್ಸವದ ನಂತರ ನೆರೆದಿದ್ದ ನೂರಾರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಾಯಿತು, ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿದ್ದು,.ಪ್ರಧಾನ ಅರ್ಚಕರಾದ ರಘುದೀಕ್ಷಿತ್ ಮತ್ತಿತರರು ಕಲ್ಯಾಣೋತ್ಸವ ನಡೆಸಿಕೊಟ್ಟರು.
ಪೂಜಾ ಕಾರ್ಯಕ್ರಮದಲ್ಲಿ ಮೇಸ್ತ್ರಿನಾರಾಯಣಸ್ವಾಮಿ, ಕಾಂಗ್ರೆಸ್ ಜಯದೇವ್, ಪತ್ರಕರ್ತ ಕೆ.ಎಸ್.ಗಣೇಶ್, ಮುಖಂಡರಾದ ಚೌಡಪ್ಪ, ಮುನಿಸ್ವಾಮಪ್ಪ, ಪುರುಷೋತ್ತಮ್, ಮುನಿವೆಂಕಟಸ್ವಾಮಿ, ವಿಶ್ವನಾಥ್, ರಾಮದಾಸ್,ಮಣಿ, ಮುನಿವೆಂಕಟಯಾದವ್, ಅಡಿಕೆ ನಾರಾಯಣಸ್ವಾಮಿ, ಅಶ್ವಥ್ಥಪ್ಪ, ಕೆ.ಎನ್.ವೆಂಕಟೇಶ್, ಕೆ.ಎಂ.ಮಂಜು, ರಮೇಶ್, ಶಬರಿ, ಪ್ರಭಾಕರ್, ಲಕ್ಷ್ಮಣ್ ಸೇರಿದಂತೆ ಕಿಲಾರಿಪೇಟೆಯ ಪ್ರಮುಖರು ಪಾಲ್ಗೊಂಡಿದ್ದರು.




























