ಶ್ರೀ ರಾಮ ಶೋಭಾ ಯಾತ್ರೆಗೆ ಚಾಲನೆ

ಶಿಡ್ಲಘಟ್ಟ:ಮೇ,೨೬- ವಿಶ್ವ ಹಿಂದೂ ಪರಿಷದ್ ಅಖಂಡ ಮತ್ತು ಭಜರಂಗದಳದ ವತಿಯಿಂದ ೩ ನೇ ವರ್ಷದ ಶ್ರೀ ರಾಮ ಶೋಭಾಯಾತ್ರೆಯನ್ನು ಶಿಡ್ಲಘಟ್ಟ ಹೊರವಲಯದ ಹನುಮಂತಪುರ ಗೇಟ್ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುನಿಸ್ವಾಮಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡರು, ರಾಜ್ಯ ರೈತ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಚಾಲನೆ ನೀಡಿದರು.


ಬಿಗಿ ಪೊಲೀಸ್ ಬಂದೋಬಸ್ತಿನ ನಡುವೆ ಗರ್ವದಿಂದ ಹೇಳಿ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ವಾಕ್ಯದಲ್ಲಿ ಜಾನಪದ ಕಲಾತಂಡಗಳೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹೊರಟು ಬಸ್ ನಿಲ್ದಾಣದಲ್ಲಿ ಸೂಲಿಬೆಲೆ ಚಕ್ರವರ್ತಿ ಯವರಿಂದ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


ಹಿಂದೂ ಐಕ್ಯತೆಗಾಗಿ ನಡೆಸಿದ ಮೆರವಣಿಗೆಯಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಬಂಟಿಂಗ್ಸ್, ಬಾವುಟಗಳು ರಾರಾಜಿಸುತ್ತಿದ್ದವು, ವಾದ್ಯಗಳ ಸದ್ದಿಗೆ ನೃತ್ಯಮಾಡಿದ ಯುವಕರು, ಮತ್ತು ಧಾರ್ಮಿಕ ವೇಷಭೂಷಣದಲ್ಲಿ ಭಾಗವಹಿಸಿದ ಹಿರಿಯರು ಹಾಗೂ ಹನುಮಂತನ ವೇಶದಾರಿ ಎಲ್ಲರ ಗಮನ ಸೆಳೆಯುವಂತಾಗಿತ್ತು.


ಪೊಲೀಸರು ಬಂದೋಬಸ್ತು ಒದಗಿಸಿ ಯಾವುದೇ ಅಶಾಂತಿ ಸಂಭವಿಸದಂತೆ ಎಚ್ಚರಿಕೆ ವಹಿಸಿದರು. ಸಮಾರಂಭದ ಆಯೋಜಕರು ಈ ಮೆರವಣಿಗೆ ಯಾವುದೇ ರಾಜಕೀಯ ಅಲ್ಲದೆ ಶುದ್ಧವಾಗಿ ಧಾರ್ಮಿಕ ಸಂಸ್ಕೃತಿ ಮತ್ತು ಐಕ್ಯತೆಗೆ ಮೀಸಲಾದದ್ದೆಂದು ಸ್ಪಷ್ಟಪಡಿಸುವುದರ ಮೂಲಕ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಸಂದೇಶದೊಂದಿಗೆ ಜಾನಪದ ಕಲಾವಿದರ ತಂಡಗಳು, ಭಜನೆ ಕೀರ್ತನೆಗಳ ಮೂಲಕ ಶಾಂತಿಯುತವಾಗಿ ಸಾಗಿದ ಯಾತ್ರೆ ಹಿಂದೂ ಐಕ್ಯತೆ ಮತ್ತು ಧಾರ್ಮಿಕ ಗೌರವವನ್ನು ಪ್ರಚಾರಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಭಾವೈಕ್ಯತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂಬ ಆಶಯವನ್ನು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡರು ವ್ಯಕ್ತಪಡಿಸಿ ಯಾವುದೇ ಹಿಂಜರಿಕೆ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ರೈತ ಸಂಘಟನೆ, ಕನ್ನಡಪರ ಸಂಘಟನೆ, ಪತಂಜಲಿ ಯೋಗ ಸಮಿತಿ, ಮಹಿಳಾ ಸಂಘಟನೆಗಳು, ವರ್ತಕರ ಸಂಘ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರ ಬೆಂಬಲ ವ್ಯಕ್ತಿಪಡಿಸಿದವರುವುದು ನಮಗೆ ಸಂತಸ ತಂದಿದೆ ಎಂದರು.