Home ಜಿಲ್ಲೆ ಬೆಂಗಳೂರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಪ್ರತಿಷ್ಠಿತ ಪ್ರಶಸ್ತಿಗೆ ಶ್ರೇಯಸ್ ಭಾಜನ

ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಪ್ರತಿಷ್ಠಿತ ಪ್ರಶಸ್ತಿಗೆ ಶ್ರೇಯಸ್ ಭಾಜನ

ಕೋಲಾರ,ಫೆ,೨೫- ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಎಂಬ ಪ್ರತಿಷ್ಠಿತ ಪ್ರಶಸ್ತಿ ಕೋಲಾರದ ಯುವ ಲೇಖಕ ಗೀತ ರಚನೆಕಾರರು, ಮಲ್ಲಿಕಾ ಕ್ಯಾಸೆಟ್ ಸೆಂಟರ್ ಮಾಲೀಕ ಅ.ನಾ.ಪ್ರಕಾಶ್‌ರಾವ್ ಅವರ ಪುತ್ರ ದುಗ್ಗರಾಜ್ ಶ್ರೇಯಸ್ ಎ.ಪಿ ಅವರಿಗೆ ಲಭಿಸಿದೆ.


ಕಳೆದ ೨೦೨೨ರ ಜೂ.೨೧ ರಂದು ‘ಓಂ ನಮೋ ನರಸಿಂಹ’ ಎಂಬ ಗೀತೆಯು ೨ ಮ್ಯೂಸಿಕ್ ಭಕ್ತಿ ಸಾಗರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಪ್ರಪಂಚದಲ್ಲೇ ಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ನರಸಿಂಹಸ್ವಾಮಿಯ ಭಕ್ತಿ ಗೀತೆಯನ್ನು ರಚಿಸಿ,ನೃತ್ಯ ಸಂಯೋಜಿಸಿದ್ದು, ಭಾರತ ದೇಶದಲ್ಲಿ ಸುಮಾರು ೭೦ಕ್ಕೂ ಅಧಿಕ ಪತ್ರಿಕೆಗಳಲ್ಲಿ ಮತ್ತು ಆನ್ಲೈನ್ ಪತ್ರಿಕೆಗಳಲ್ಲಿ ಇದರ ಬಗ್ಗೆ ಲೇಖನಗಳು ಪ್ರಕಟಗೊಂಡಿತ್ತು.


ಈ ಹಿನ್ನಲೆಯಲ್ಲಿ ಇದನ್ನೆಲ್ಲಾ ಗಮನಿಸಿದ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ನೀಡಿದ್ದು, ಇದೇ ವರ್ಷದ ಜ.೩೦ರಂದು ಅವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಪತ್ರ, ಪ್ರಶಸ್ತಿ ತಲುಪಿಸಲಾಗಿದೆ.


ಕೋಲಾರದ ಮಲ್ಲಿಕಾ ಕ್ಯಾಸೆಟ್ ಸೆಂಟರ್ ಮಾಲೀಕರಾದ ಆ.ನಾ.ಪ್ರಕಾಶ್ ರಾವ್ ಅವರ ಪುತ್ರರಾದ ಶ್ರೇಯಸ್, ತನ್ನಿ ಸಾಧನೆಗೆ ತನ್ನೊಂದಿಗೆ ತಂಡದಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಎಲ್ಲಾ ನಟರಿಗೆ ಹಾಗೂ ಮುಖ್ಯವಾಗಿ ಕೆಜಿಎಫ್ ಮೂವಿ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರಾಗಿ ನಟಿಸಿರುವ ಜೀವನ್ ಅವರಿಗೂ ಧನ್ಯವಾದ ಸಲ್ಲಿಸಿದ್ದಾರೆ.


ತನ್ನ ಸಿನಿಮಾ ಜಗತ್ತಿನ ಗುರುಗಳಾದ ಸ್ಯಾನ್ ವಿ ಎಂ ಜೆ ಕೊರಿಯೋಗ್ರಾಫಿ ಜವಾಬ್ದಾರಿಯನ್ನು ಶುಶ್ರುತವಾಗಿ ಹಾಡಿನಲ್ಲಿ ಭರತನಾಟ್ಯ ಮುಖಾಂತರ ನಾಟ್ಯಮ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್(ಕೋಲಾರ) ಶಾಲೆಯಿಂದ ತಮ್ಮ ಶಿಷ್ಯ ವೃಂದದಿಂದ ನಾಟ್ಯವನ್ನು ಸೃಜನಾಶೀಲತೆಯಿಂದ ಮಾಡಿಸಿದ್ದಾರೆ ಹಾಗೂ ಕ್ಯಾಮೆರಾ ಮ್ಯಾನ್ ಎಡಿಟರ್ ಸುನಿಲ್ ರವರು ವಹಿಸಿದ್ದಾರೆ. ಪ್ರದೀಪ, ಸರಿಗಮಪ ಸೀಸನ್ ೨೦ ವಿಜೇತರಾದ ದರ್ಶನ್ ನಾರಾಯಣ್ ಪ್ರತಿಷ್ಠಿತ ಗಾಯಕರು ಈ ಹಾಡನ್ನು ಹಾಡಿದ್ದಾರೆ.


ಸ್ವಸ್ತಿಕ್ ಕರೆಕಡ್ ರವರು ಹಾಡಿಗೆ ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ ಬಂದಿರುವ ಪ್ರಶಸ್ತಿ ಎಲ್ಲಾ ತಂಡ ವರ್ಗದವರಿಗೆ ಸೇರಿರುತ್ತದೆ ಎಂದು ದುಗರಾಜ್ ಶ್ರೇಯಸ್ ಎ ಪಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.