ಹುಬ್ಬಳ್ಳಿ,ನ.೫: ಎಸ್. ಎಸ್. ಕೆ . ಪಂಚ ಟ್ರಸ್ಟ್ ,ಶ್ರೀ ದುರ್ಗಾದೇವಿ ದೇವಸ್ಥಾನ , ದಾಜಿಬಾನ ಪೇಟ್, ದುರ್ಗಾದೇವಿ ದೇವಸ್ಥಾನದ ಪಂಚವಟಿಯಲ್ಲಿರುವ ಶ್ರೀ ತುಳಸಿ ಮಾತೆಗೆ,ಶಾಸ್ತೊçÃಕ್ತವಾಗಿ ಶ್ರೀ ತುಳಸಿ ಲಗ್ನವನ್ನು ಆಚರಿಸಲಾಯಿತು. ಪೂಜೆಯಲ್ಲಿ ರಘುನಾಥ ರಾಮಚಂದ್ರ ಪೂಜಾರಿ ದಂಪತಿಗ ಪಾಲ್ಗೊಂಡಿದ್ದರು.
ಪೌರೋಹಿತ್ವವನ್ನು ವಿಕಾಸ ಆಚಾರ್ಯ ಕೃಷ್ಣಾಚಾರ್ಯ ಮಾಡ್ಯಾಳ್ಕರ ರವರು ವಹಿಸಿದ್ದರು .
ಈ ಸಂದರ್ಭದಲ್ಲಿ ಸಂಸ್ಥೆಯ ಚೀಫ್ ಟ್ರಸ್ಟಿ, ತಾರಾಸಾ ಎನ್ . ದೊಂಗಡಿ , ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ ಕೋಶಾಧಿಕಾರಿ ಅಶೋಕ ಕೆ . ಕಲಬುರ್ಗಿ, ಟ್ರಸ್ಟಿಗಳಾದ ಎನ್. ಆರ್ .ಹಬೀಬ, ಎ ಪಿ. ಪವಾರ ಹಾಗೂ ವಿಷ್ಣುಸಾ ಎಲ್. ಪೂಜಾರಿ , ಘಟಕದ ಹಿರಿಯರಾದ ಆರ್.ಡಿ .ರತನ , ಪಾಂಡುರAಗಸಾ ಎಲ್. ಪೂಜಾರಿ ಇವರು ಸೇರಿದಂತೆ ದೇವಸ್ಥಾನದ ಪೂಜಾರಿ ಮನೆತನದ ಪ್ರಮುಖರು , ಮಹಿಳಾ ಮಂಡಳ ಹಾಗೂ ಯುವಕ ಮಂಡಳಗಳ ಪ್ರಮುಖರುಗಳು ಉಪಸ್ಥಿತರಿದ್ದರು.





















