
ಯಾದಗಿರಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪ್ರವಾಸೋಧ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ,ತಾಲೂಕ ಪಂಚಾಯತ ಶಹಾಪೂರ, ಗ್ರಾಮ ಪಂಚಾಯತ ಶಿರವಾಳ ಇವರ ಸಹಯೋಗದಲ್ಲಿ
ಪ್ರೇಕ್ಷಣಿಯ ಸ್ಥಳ ನಾದಯ್ಯ ನನ್ನಯ್ಯ ದೇವಸ್ಥಾನ ಹತ್ತಿರ ಶ್ರಮದಾನ ಚಟುವಟಿಕೆಯನ್ನು ಹಮ್ಮಿ ಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ,ಕಾರ್ಯ ನಿರ್ವಾಹಕ ಅಧಿಕಾರಿ, ಯಾದಗಿರಿ, ಶಹಾಪುರ,ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಯಾದಗಿರಿ ಹಾಗೂ ಸಹಾಯಕ ನಿರ್ದೇಶಕರು ನರೇಗಾ , ಅಧ್ಯಕ್ಷರು ಶಿರವಾಳ ಗ್ರಾಮ ಪಂಚಾಯತಿ, Pಆಔ ಶಿರವಾಳ ,ಇನ್ನಿತರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ,ವಿವಿಧ ಸಂಘಟನೆಯ ಮುಖಂಡರು ಹಾಗೂ ಪ್ರವಾಸಿ ಮಿತ್ರರು , ಶಿರವಾಳದ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಸುತ್ತಲೂ ಸ್ವಚ್ಛತೆ ಮಾಡಲಾಯಿತು. ದೇವಸ್ಥಾನದ ಪುಷ್ಕರಣಿ ಸ್ವಚ್ಛತೆ ಮಾಡಲಾಯಿತು. ದೇವಸ್ಥಾನದ ವ್ಯಾಪ್ತಿಯಲ್ಲಿ ಸಸಿ ನೆಡಲಾಯಿತು ಹಾಗೂ ದೇವಸ್ಥಾನದ ಇತಿಹಾಸದ ಕುರಿತು ವಿವರಿಸಲಾಯಿತು.

























