ಜೇವರಗಿ,ಜು.5: ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಪಟ್ಟಣದ ಬೇಕರಿಯೊಂದಕ್ಕೆ ಬೆಂಕಿ ತಗುಲಿ ಸುಮಾರು 75 ಲಕ್ಷ ರೂ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಇಂದು ಬೆಳಗಿನ ಜಾವ 4.30ಕ್ಕೆ ಸಂಭವಿಸಿದೆ
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ಮಲ್ಲಿನಾಥ ನೇಂಗ ಕೊಳಕೂರು ಮತ್ತು ಭಗವಂತರಾಯ ನೆಂಗ ಕೋಳಕೂರು ಇವರಿಗೆ ಸೇರಿದ ಓಂ ಬೇಕರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಯಂತ್ರಗಳು, ಅಂಗಡಿ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕÀಲಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.ಸುತ್ತಮುತ್ತಲು ಅಂಗಡಿಗಳಿಗೆ ವ್ಯಾಪಿಸಿದ ಬೆಂಕಿ ಕೆನ್ನಾಲಿಗೆಯಿಂದ ಇತರ ಅಂಗಡಿಗಳ ವಸ್ತುಗಳು ಸಹ ಸುಟ್ಟು ಹೋಗಿವೆ. ಸಿಪಿಐ ರಾಜಸಾಬ್ ನದಾಫ್, ಪಿಎಸ್ ಐ ಗಜಾನನ ಬಿರಾದಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.ಈ ಸಂಬಂಧ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ