ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ-ಖಂಡನೆ

ಚಿಕ್ಕಬಳ್ಳಾಪುರ,ಅ.೯– ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತದ ಯತ್ನ ನಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರಾ ಖಂಡನೀಯ
ವಾದದು ಎಂದು ನಗರದ ಯುವ ವಕೀಲರು ಹಾಗೂ ಕೆಪಿಸಿಸಿ ರಾಜ್ಯ ಕಾನೂನು ಮಾಹಿತಿ ಹಕ್ಕು ಕಾನೂನು ಹಕ್ಕು ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸಂದೀಪ್ ಚಕ್ರವರ್ತಿ ವಿಷಾದಿಸಿದರು.


ಸದರಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು ವಕೀಲರೊಬ್ಬರು ಈ ರೀತಿ ವರ್ತಿಸಿರುವುದು ಸಮಾಜ ಯಾವ ದಿಕ್ಕಿನತ್ತ ಪ್ರಯಾಣಿಸುತ್ತಿದೆ ಎಂದು ಮನಸ್ಸಿಗೆ ತೀವ್ರ ನೋವಾಗುತ್ತಿದೆ ಎಂದರು.


ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಿ.ಜೆ. ಐ. ಗವಾಯಿ ರವರ ಮೇಲೆ ವಕೀಲ ರಾಕೇಶ್ ಕಿಶೋರ್ ರವರು ತಮ್ಮ ಸಂಕುಚಿತ ಮನಸ್ಥಿತಿಯಿಂದ ಶೂ ಎಸೆಯುವ ಯತ್ನಾ ನಡೆಸಬಾರದಾಗಿತ್ತು


ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಸದಾಶಯಗಳಿಗೆ ದೇಶದಲ್ಲಿ ಇಂತಹ ಪ್ರಕರಣಗಳಿಂದ ಕುತ್ತು ಉಂಟಾಗುತ್ತದೆ. ಇದು ವಕೀಲರೊಬ್ಬರ ಮನಸ್ಥಿತಿ ಹೀಗೂ ಇರುತ್ತದೆಯೇ ಎಂದು ಮನಸ್ಸಿಗೆ ನೋವಾಗುತ್ತಿದೆ ಎಂದು ವಕೀಲ ಎಂ.ಎಸ್. ಸಂದೀಪ್ ಚಕ್ರವರ್ತಿ ವಿಷದಿಸಿದರು.


ಸಂವಿಧಾನಿಕ ಸಂಸ್ಥೆಗಳಲ್ಲಿ ಇಂತಹ ಪ್ರಕರಣಗಳು ಮುಂದೆ ನಡೆಯಬಾರದು ಎಂದು ವಕೀಲ ಸಂದೀಪ್ ಚಕ್ರವರ್ತಿ ಅಭಿಪ್ರಾಯಪಟ್ಟರು .