ಮಕ್ಕಳಿಗೆ ತಾಯಿಯಂತೆ ಪ್ರೀತಿ, ವಾತ್ಸಲ್ಯ ನೀಡುತ್ತಿರುವ ಶೋಭಾರಾಣಿ ಡಿ. ಅಗರವಾಲ ಅವರಿಗೆ “ಆದರ್ಶ ಪ್ರಶಸ್ತಿ”

ಕಲಬುರಗಿ ;ಡಿ.28: ಹೈದರಾಬಾದ್ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷರಾದ ಶ್ರೀ ಮತಿ ಶೋಭಾರಾಣಿ ಡಿ. ಅಗರವಾಲ ಅವರು ಸತತ 20 ವರ್ಷಗಳ ಕಾಲ ತಮ್ಮ ಮಕ್ಕಳ ಹಾಗೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಅಂಧ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡುತ್ತಿರುವುದು ಗಮನಿಸಿದ ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಶ್ರೀ ಮಾತೋಶ್ರೀ ಮಾಹೀ ಸಾಹೇಬ್ ಮೆಮೊರಿಯಲ್ ಟ್ರಸ್ಟ್ ಸದಸ್ಯರಾದ ಶ್ರೀ ಮತಿ ಆರತಿ ವಿ. ಪಾರ್ಕೆ ಮತ್ತು ವಿನಾಯಕ ಪಾರ್ಕೆ ಅವರು “ಆದರ್ಶ ಮಾತಾ ಪ್ರಶಸ್ತಿ” ನೀಡಿ ಗೌರವಿಸಿ ಸತ್ಕರಿಸಲಾಯಿತು.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶ್ರೀ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ದತ್ತು ಅಗರವಾಲ ಅದ್ಯಕ್ಷತೆ ವಹಿಸಿದರು. ಸಂಘದ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಮಹಾದೇವಿ ಗರೂರ, ಸದಸ್ಯರಾದ ಶ್ರೀ ಲಕ್ಷ್ಮಣ್ ಮೆಂಗಜಿ, ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಗೀತಾ ಡಿ. ಠಾಕೂರ್, ಶಿಕ್ಷಕಿಯರಾದ ಶ್ರೀಮತಿ ಕನ್ಯಾರಾಣಿ, ಶ್ರೀಮತಿ ಉಷಾರಾಣಿ, ಶ್ರೀಮತಿ ಭಾರತಿ ದಾಸನಕೊಪ್ಪ, ಶ್ರೀಮತಿ ವಿದ್ಯಾವತಿ, ಸಂಗೀತ ಶಿಕ್ಷಕರಾದ ಮಹೇಶ ಕಲಾಲ, ವೈಜನಾಥ ನೀಲಿ, ಗೃಹ ಪಾಲಕಿಯರಾದ ಶ್ರೀಮತಿ ಶಾಂಭವಿ, ಶ್ರೀಮತಿ ಶರಣಮ್ಮ, ಶ್ರೀಮತಿ ಅನ್ನಪೂರ್ಣ, ಕು. ಜೀವಿಕಾ, ದ್ವಿತೀಯ ದರ್ಜೆ ಸಹಾಯಕಿ ಶ್ರೀಮತಿ ವಿಜಯಾ, ಪ್ರಸಾದ್,ಸಿದ್ದು, ಯಳಸಂಗಿ, ಪರಮಾನಂದ, ಅಡುಗೆ ಸಹಾಯಕರಾದ ಅಂಬಿಕಾ, ಸವಿತಾ, ಸುಮಿತ್ರಾ, ಕಾಳಮ್ಮ, ಸುಮಿತ್ರಾ ಪಿ., ಸವಿತಾ, ಜಗದೇವಿ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು