ಸೋಲಾಪೂರದ ಶೋಭಾ ನರ್ಸಿಂಗ್ ಹೋಮ್: ಪ್ರಖ್ಯಾತ ಟೆಸ್ಟ್ ಟ್ಯೂಬ್ ಬೇಬಿ ಕೇಂದ್ರ

ಕಲಬುರಗಿ,ನ.29: ಸೋಲಾಪೂರದ ಶೋಭಾ ನರ್ಸಿಂಗ್ ಹೋಮ್ ಮತ್ತು ಪೋಸ್ಟ್ ಗ್ರ್ಯಾಜ್ಯುಎಟ್ ಇನ್ಸ್ಟಿಟ್ಯೂಟ್‍ನಲ್ಲಿ ಕಳೆದ 14 ವರ್ಷಗಳ ಅವಧಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ 5 ಸಾವಿರಕ್ಕಿಂತ ಹೆಚ್ಚು ಟೆಸ್ಟ್ ಟ್ಯೂಬ್ ಮಕ್ಕಳು ಜನ್ಮ ಪಡೆದಿವೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಮಿಲಿಂದ ಪಾಟೀಲ ಅವರು ತಿಳಿಸಿದ್ದಾರೆ.
ಕೇವಲ ಭಾರತವಲ್ಲ, ಅಮೇರಿಕಾ, ಇಂಗ್ಲೆಂಡ್, ಜರ್ಮನ್, ಸಿಂಗಾಪೂರ, ಅಸ್ಟ್ರೇಲಿಯಾ, ಇಸ್ರೈಲ್, ದುಬೈ, ದಕ್ಷಿಣ ಆಫ್ರಿಕಾ ಮತ್ತು ಇತರೆ ದೇಶಗಳಿಂದಲೂ ಸಂತಾನಹೀನ ದಂಪಗಳು ಸೋಲಾಪೂರದ ಈ ಚಿಕಿತ್ಸಾ ಕೇಂದ್ರದತ್ತ ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಕರಾಗುತ್ತಿದ್ದಾರೆ. ಸರ್ವಾಧುನಿಕ ತಂತ್ರಜ್ಞಾನ ಉತ್ತಮ ಉಪಕರಣಗಳ ಬಳಕೆ ಪರಿಣಿತ ತಜ್ಞ ವೈದ್ಯರ ನಿರಂತರ ಸೇವಾಭಾವ ಮತ್ತು ಪರಿಶ್ರಮದಿಂದ ಇಂದು ವಿಶ್ವದ ಪ್ರಸಿದ್ಧ ಚಿಕಿತ್ಸೆ ಕೇಂದ್ರಗಳಲ್ಲಿ ಸ್ಥಾನ ಪಡೆದಿದೆ. ಇದು ಸಾವಿರಾರು ಕುಟುಂಬಗಳ ಕನಸುಗಳನ್ನು ನಿಜಗೊಳಿಸಿರುವ ಜಾಗತಿಕ ಮಟ್ಟದ ಐವಿಎಫ್ ಕೇಂದ್ರವಾಗಿದೆ.
ಟೆಸ್ಟ್ ಟ್ಯೂಬ್ ಬೇಬಿ ಪ್ರಕ್ರಿಯೆಯಿಂದ ಗರ್ಭಧಾರಣೆಯಾಗದ ಸಂಧರ್ಭಗಳಲ್ಲಿ ಅಂತಹ ಮಹಿಳೆಯರಿಗೆ ಹೊಸ ತಂತ್ರಜ್ಞಾನಗಳನ್ನು ಬಳಸಿ ಬೇರೆ ಬೇರೆ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಈ ಕೇಂದ್ರದಲ್ಲಿ ಡಾ. ಮಿಲಿಂದ ಪಾಟೀಲ, ಡಾ. ಶೈಲೇಶ ಪಾಟಿಲ, ಡಾ. ಪ್ರತಿಭಾ ಪಾಟೀಲ, ಡಾ. ಮನೀಷಾ ಪಾಟೀಲ, ಡಾ. ಗಾಯತ್ರಿ, ಡಾ. ಶುಭಾಂಗಿ, ಡಾ. ಜ್ಯೋತಿ, ಡಾ. ಶೃತಿ ಮತ್ತು ಅಂಜಲಿಯವರ ಸಕ್ರಿಯ ಸಹಭಾಗಿತ್ವ ಇರುತ್ತದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಮಿಲಿಂದ ಪಾಟೀಲ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.