
ಕಾಳಗಿ :ಜ.14: ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶಿವಯೋಗಿ ಸಿದ್ದರಾಮೇಶ್ವರ ಶ್ರಮಿಸಿದ್ದರು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಕಜಾ ಎ ಹೇಳಿದರು.
ಪಟ್ಟಣ ಪಂಚಾಯತನಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಇವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ.12ನೇ ಶತಮಾನದಲ್ಲಿ ಸಿದ್ದರಾಮೇಶ್ವರರು ಜನರನ್ನು ಎಚ್ಚರಿಸುವ ಕೆಲಸ ಮಾಡಿದರು. ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಪಿಡುಗುಗಳನ್ನು ತೊಲಗಿಸಲು ಪ್ರಯತ್ನಿಸಿದರು. 68 ಸಾವಿರಕ್ಕೂ ಹೆಚ್ಚು ವಚನಗಳನ್ನು ಇವರು ರಚನೆ ಮಾಡಿರುವುದಾಗಿ ತಿಳಿದು ಬಂದಿದೆ’ ಎಂದರು.
ಭೋವಿ ಸಮಾಜದ ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಪಂಚ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಪಟ್ಟಣ ಪಂಚಾಯತ ಸದಸ್ಯರಾದ ಶರಣಪ್ಪ ಬೇಲೂರು, ಗುರುರಾಜ ಮದ್ದೂರ, ಬಸವರಾಜ ಮಡಿವಾಳ, ದತ್ತು ಗುತ್ತೇದಾರ, ರಾಜು ಮೇಳಕುಂದಿ, ಬಲರಾಮ ವಲ್ಲ್ಯಾಪುರ, ಸಂತೋಷ ಪತಂಗೆ, ಸುಂದರ ಡಿ ಸಾಗರ, ಸಂತೋಷ ಕಡಬೂರ, ಸುನಿಲ ಭೋವಿ ಸೇರಿದಂತೆ ಭೋವಿ ಸಮಸ್ತ ಕುಲಬಾಂಧವರು ಇತರರು ಇದ್ದರು.






















