
ಕಲ್ಬುರ್ಗಿ: ಫೆ.೨೫:ಗುಲ್ಬರ್ಗ ವಿಶ್ವವಿದ್ಯಾಲಯದ ೩೪ನೇ ಘಟಿಕೋತ್ಸವದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶಿವಶರಣಪ್ಪ ಚೆನ್ನೂರ್ ಅವರು ಹೈದರಾಬಾದ್ ಕರ್ನಾಟಕ ಸ್ವಾತಂತ್ರ‍್ಯ ಚಳುವಳಿಯಲ್ಲಿ ವಿದ್ಯಾಧರ ಗುರೂಜಿ ಅವರ ಒಂದು ಐತಿಹಾಸಿಕ ಅಧ್ಯಯನ ಎಂಬ
ಪ್ರಬAಧ ಮಂಡಿಸಿದ ಹಿನ್ನೆಲೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಡಾ. ಇಂದುಮತಿ ಅವರು ಮಾರ್ಗದರ್ಶನ ನೀಡಿದ್ದಾರೆ. ಘಟಿಕೋತ್ಸವದಲ್ಲಿ ರಾಜ್ಯಪಾಲ |ಥಾವರ್ ಚಂದ ಗೆಹ್ಲೋಟ್ , ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್. ಸಿ. ಸುಧಾಕರ್, ಕುಲಪತಿಗಳು, ಕುಲಸಚಿವರು, ಡಾ. ಶರಣಪ್ಪ ಗುಂಡಗುರ್ತಿ, ಮಲ್ಲಿಕಾರ್ಜುನ ಎಸ್ ಚನ್ನೂರು, ಸೇರಿ ವಿದ್ಯಾರ್ಥಿಗಳು, ಪಾಲಕರು ಪೋಷಕರು ಹಾಜರಿದ್ದರು.
























