
ಮಾಲೂರು.ಫೆ೧೬- ಹಿಂದೂ ಸಂಪ್ರದಾಯದಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ಇತಿಹಾಸವಿದೆ ಶಿವರಾತ್ರಿ ಮಹೋತ್ಸವ ರಾಜಕೀಯ ಕಾರ್ಯಕ್ರಮ ಅಲ್ಲ ಇದೊಂದು ಹಿಂದೂ ಸಂಪ್ರದಾಯದ ಹಬ್ಬ ಶಿವ ಸ್ಮರಣೆ ಮಾಡುವ ಶಿವ ರಾತ್ರಿಯಾಗಿದೆ ತಾಲೂಕಿನ ಜನತೆಗೆ ಶಿವನ ಅನುಗ್ರಹ ಸಿಗಲಿ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು
ನಗರದ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಹಾಶಿವರಾತ್ರೋತ್ಸವ ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳು ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು
ಹಿಂದೂ ಸಂಪ್ರದಾಯದಲ್ಲಿ ಮಹಾಶಿವರಾತ್ರಿಯ ಹಬ್ಬಕ್ಕೆ ಸಾಂಪ್ರದಾಯಿಕವಾದ ಇತಿಹಾಸವಿದೆ ಶಿವ ರಾತ್ರಿ ಹಬ್ಬದಂದು ಉಪವಾಸ ಇರುವ ಮೂಲಕ ಶಿವನ ಸ್ಮರಣೆ ಮಾಡಿ ಶಿವನನ್ನು ಆರಾಧಿಸಿ ಪೂಜಿಸುತ್ತೇವೆ ಇದೇ ಮೊದಲ ಬಾರಿಗೆ ಶಿವರಾತ್ರಿ ಮಹೋತ್ಸವವನ್ನು ಮಾಲೂರು ನಗರದ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಯುವಕರು ಸುನಿಲ್ ನಂಜೆ ಗೌಡ ನೇತೃತ್ವದಲ್ಲಿ ಆಯೋಜಿಸಿರುವುದು ಶ್ಲಾಘನೀಯವಾದದ್ದು ಯುವಕರನ್ನು ಅಭಿನಂದಿಸುವುದಾಗಿ ಹೇಳಿದ ಅವರು ನಾವೆಲ್ಲರೂ ಸೇರಿ ಜಾಗರಣೆ ಮೂಲಕ ಶಿವ ಸ್ಮರಣೆ ಮಾಡೋಣ ನಗರ ಸೇರಿದಂತೆ ತಾಲೂಕಿನ ಜನತೆಗಾಗಿ ಶಿವ ರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಇದು ರಾಜಕೀಯ ಕಾರ್ಯಕ್ರಮವಲ್ಲ ಸ್ಥಳೀಯವನಾದ ನನ್ನನ್ನು ತಾಲೂಕಿನ ಜನತೆ ನಮ್ಮ ನಂಜೇಗೌಡ ಸ್ಥಳೀಯವಾಗಿ ನಮಗೆ ಸಿಗುತ್ತಾರೆ ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ ಎಂದು ಎರಡು ಬಾರಿ ಅಲ್ಲಾ ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಇದೊಂದು ಇತಿಹಾಸ ಪುಟಗಳಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಿರುವುದು ದಾಖಲಾಗಿದೆ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎರಡುವರೆ ವರ್ಷಗಳ ಅವಧಿಯಲ್ಲಿ ಬಸ್ ನಿಲ್ದಾಣ ಮೇಲ್ ಸೇತುವೆ ಆಸ್ಪತ್ರೆ ದೊಡ್ಡ ಕೆರೆ ಅಭಿವೃದ್ಧಿ ರಸ್ತೆಗಳ ಅಭಿವೃದ್ಧಿ ಪಡಿಸುವ ಮೂಲಕ ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ

ಖ್ಯಾತ ಗಾಯಕಿ ಅನನ್ಯ ಭಟ್ ಭಕ್ತಿ ಗೀತೆಗಳು ಗಾಯನ ಮಾಡಿದರೆ ಖ್ಯಾತ ಹಾಡುಗಾರ ರಾಜೇಶ್ ಕೃಷ್ಣನ್ ಅವರು ಭಕ್ತಿ ಗೀತೆಗಳ ಹಾಗೂ ಹಳೆಯ ಚಿತ್ರಗಳ ಗೀತೆಗಳನ್ನು ಆಡುವುದರ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದ ಜನರನ್ನು ಮೂಕ ಪ್ರೇಕ್ಷಕರನ್ನಾಗಿ ಮಾಡಿದರು
ಗಿಚ್ಚಿ ಗಿಲಿ ಗಿಲಿ ತಂಡದ ವಿನೋದ್ ಗೊಬ್ಬರಗಾಲ ಚಂದ್ರಪ್ರಭ ಬಸವರಾಜ್ ಇನ್ನಿತರ ಕಲಾವಿದರು ಹಾಸ್ಯ ಪ್ರದರ್ಶನ ಮಾಡಿದರು
ಕ್ರೀಡಾಂಗಣದಲ್ಲಿ ಅದ್ದೂರಿ ಸೆಟ್ ನಿರ್ಮಿಸಿ ಶಿವ ಮಂದಿರವು ಸಹ ನಿರ್ಮಿಸಲಾಗಿತ್ತು ಶಿವನ ಭಕ್ತರು ಶಿವ ದರ್ಶನ ಪಡೆದು ಶಿವ ರಾತ್ರಿ ಮಹೋತ್ಸವ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮಕ್ಕೆ ಆಗಮಿಸಿದ ಶಿವ ಭಕ್ತರಿಗೆ ಉಚಿತ ಸಿಹಿ ಹಾಗೂ ಟೀ ಸ್ಥಾಲ್ ಗಳನ್ನು ತೆರೆದು ಟಿ ವಿತರಿಸಸಲಾಯಿತು ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಶಿವ ಭಕ್ತರು ಆಗಮಿಸಿ ಬೆಳಗಿನ ಜಾವದವರೆಗೆ ಜಾಗರಣೆ ಮಾಡಿದರು
ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮುಖ್ಯಮಂತ್ರಿಗಳ ಸಿ ಎಲ್ ಪಿ ಕಾರ್ಯದರ್ಶಿ ನಝೀರ್ ಅಹ್ಮದ್ ವಿಧಾನ ಪರಿಷತ್ ಸದಸ್ಯ ಎಂಎಲ್ ಅನಿಲ್ ಕುಮಾರ್ ಜಿ ಪಂ ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ ಯೋಜನಾ ಪ್ರಾಧಿಕಾರ ಅಧ್ಯಕ್ಷ ನರಸಿಂಹ ನಗರಸಭೆ ಮಾಜಿ ಅಧ್ಯಕ್ಷ ವಿಜಯಲಕ್ಷ್ಮಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ ಲಕ್ಷ್ಮಿ ನಾರಾಯಣ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಕೃಷ್ಣಪ್ಪ ಎಸ್ ಜೆ ರಾಮಮೂರ್ತಿ ಕೆಪಿಸಿಸಿ ಸದಸ್ಯ ಸೋಮಶೇಖರ್ ಮುಖಂಡ ಹರೀಶ್ ನಂಜೇಗೌಡ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ನಹಿಮ್ ಕಾಂಗ್ರೆಸ್ ಯುವ ಘಟಕದ ಜಾಕಿ ಮಂಜು ನವೀನ್ ಶಬ್ಬೀರ್ ತನ್ವೀರ್ ಅಹ್ಮದ್ ನಗರಸಭೆಯ ಮಾಜಿ ಸದಸ್ಯರು ಹಾಜರಿದ್ದರು



























