
ಕಾಳಗಿ:ಫೆ.16:ಪ್ರತಿವರ್ಷ ಆಚರಿಸಲ್ಪಡುವ ಮಹಾ ಶಿವರಾತ್ರಿಯೂ ಭಕ್ತಿಯಷ್ಠೇ ಅಲ್ಲ.
ಮನುಷ್ಯನ ಮನಸ್ಸು ಮತ್ತು ಆತ್ಮಶುದ್ಧಿಕರಣಕ್ಕೆ ಸಾಕ್ಷಿಯಾಗಿರುವ ವಿಶೇಷ ದಿನವಾಗಿದೆ ಎಂದು ಭರತನೂರಿನ ಶ್ರೀ ಗುರುನಂಜೇಶ್ವರ ವಿರಕ್ತ ಮಠದ ಪೂಜ್ಯರಾದ ಚಿಕ್ಕಗುರುನಂಜೇಶ್ವರ ಶ್ರೀಗಳು ಸದ್ಭಕ್ತರನ್ನುದ್ದೇಶಿಸಿ ಆಶಿರ್ವಚನ ನೀಡಿದರು.
ಶ್ರೀಮಠದಲ್ಲಿ ರವಿವಾರ ಏರ್ಪಡಿಸಲಾಗಿರುವ ಮಹಾಶಿವರಾತ್ರಿ ನಿಮಿತ್ತ ಇಷ್ಠಲಿಂಗ ಪೂಜೆ ಗೈದು, ಶ್ರೀ ಮಠಕ್ಕೆ ಆಗಮಿಸಿರುವ ಸದ್ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಉಪವಾಸ ಬಿಡಿಸಿ ಪ್ರವಚನ ನೀಡಿದರು.
ಕಾಳಗಿಯ ಹಿರೇಮಠದಲ್ಲಿ ನೀಲಕಂಠ ಮರಿದೇವರು, ಸುಕ್ಷೇತ್ರ ದಕ್ಷಿಣ ಕಾಶಿ ಶ್ರೀ ನೀಲಕಂಠ ಕಾಳೇಶ್ವರ ದೇಗುಲದಲ್ಲಿ ಕಲ್ಯಾಣಭಟ್ಟ ಮಹಾರಾಜ, ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನ, ರೆವಗ್ಗಿ(ರಟಕಲ)ನ ರೇವಣಸಿದ್ದೇಶ್ವರ ದೇವಸ್ಥಾನ, ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಪೂಜ್ಯ ಧನಂಜಯ ಹಿರೇಮಠ, ಸುಗೂರ(ಕೆ) ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಸಂಚಾಲಕ ಕೃಷ್ಣಾದಾಸ ಮಹಾರಾಜ ವಿಶೇಷ ಪೂಜೆ ಸಲ್ಲಿಸಿದರು.
ವಿವಿಧ ಗ್ರಾಮಗಳು ಸೇರಿ ತಾಲೂಕಿನಾಧ್ಯಂತ ಸಡಗರ-ಸಂಭ್ರಮದಿಂದ ಮಹಾ ಶಿವರಾತ್ರಿ ಶ್ರದ್ಧಾ-ಭಕ್ತಿಯಿಂದ ನಡೆಸಲಾಯಿತು.
ಮಹಾ ಶಿವರಾತ್ರಿ ಹಿಂದೂಗಳಿಗೆ ಅತ್ಯಂತ ಪವಿತ್ರ ದಿನವಾಗಿದ್ದು,
ವಿವಿಧ ದೇವಾಲಯಗಳಲ್ಲಿ ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸುತ್ತ, ರಾತ್ರಿ ಜಾಗರಣೆ, ಶಿವಭಜನೆ, ಸ್ತೋತ್ರಾಭ್ಯಾಸ, ರುದ್ರಾಭಿಷೇಕ ಮೊದಲಾದ ಆಚರಣೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಕಂಡುಬಂದವು.






















