Home ಜಿಲ್ಲೆ ಕಲಬುರಗಿ ಶಿವರಾತ್ರಿ: 111 ಮಕ್ಕಳಿಗೆ ಲಿಂಗಧಾರಣೆ

ಶಿವರಾತ್ರಿ: 111 ಮಕ್ಕಳಿಗೆ ಲಿಂಗಧಾರಣೆ

ಕಲಬುರಗಿ: ಮಕ್ಕಳಲ್ಲಿ ಧರ್ಮ ಅಭಿಮಾನ ಹಾಗೂ ಸಂಸ್ಕಾರ ಮೂಡಿಸುವ ನಿಟ್ಟಿನಲ್ಲಿ ಅದರಲ್ಲೂ ಶಿವರಾತ್ರಿ ಪ್ರಯುಕ್ತ ಅಫಜಲಪುರ ತಾಲೂಕಿನ ಭೈರಾಮಡಗಿಯ ಶ್ರೀ ಮಹಾಂತೇಶ್ವರ ವಿರಕ್ತ ಮಠದಲ್ಲಿ ಫೆ. 15ರಂದು ಬೆಳಿಗ್ಗೆ 7.30ಕ್ಕೆ 111 ಮಕ್ಕಳಿಗೆ ಲಿಂಗಧಾರಣೆ ಹಮ್ಮಿಕೊಳ್ಳಲಾಗಿದೆ.
ಭೈರಾಮಡಗಿ ಶ್ರೀ ಮಹಾಂತೇಶ್ವರ ಮಠದ ಪೂಜ್ಯರಾದ ಶ್ರೀ ಷಡಕ್ಷರಿ ದೇವರು ಅವರ ದಿವ್ಯ ಸಾನ್ನಿಧ್ಯದಲ್ಲಿ ಲಿಂಗಧಾರಣೆ ನಡೆಯಲಿದ್ದು, ಈಗಾಗಲೇ ಲಿಂಗಧಾರಣೆ ಮಾಡಿಕೊಳ್ಳುವರು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.
ಮಕ್ಕಳಲ್ಲಿ ಗುರು ಹಿರಿಯರ ಹಾಗೂ ತಂದೆ ತಾಯಿ ಮೇಲಿನ ಪ್ರೀತಿಗೌರವ ಕಡಿಮೆಯಾಗುತ್ತಿರುವ ಜತೆಗೆ ಸಾಮಾಜಿಕವಾಗಿ ಹೊಣೆಗಾರಿಕೆ ಅರಿಯದೇ ತಪ್ಪು ದಾರಿ ತುಳಿಯುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಬೋಧನೆ ಜತೆಗೆ ಸಂಸ್ಕಾರದಲ್ಲಿ ಮುನ್ನೆಡೆಸುವುದು ಇಂದಿನ ಅಗತ್ಯದ ಕಾರ್ಯವಾಗಿದೆ ಎಂಬುದನ್ನು ಮನಗಂಡು ಲಿಂಗಧಾರಣೆ ಜತೆಗೆ ಇತರ ಸಾಮಾಜಿಕ ಸೇವಾ ಕಾರ್ಯಗಳನ್ನು ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಭಕ್ತ ಮಂಡಳಿಯವರು ತಿಳಿಸಿದ್ದಾರೆ.