
ಕಲಬುರಗಿ:ಜು.೬: ಲಿಂಗಾಯತ ಪ್ರಗತಿಶೀಲ ಸಂಘ, ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ್ ನಲ್ಲಿ ಜುಲೈ ೭ರಂದು ಸೋಮವಾರ ಸಂಜೆ ೭:೩೦ ಗಂಟೆಗೆ ಮಾನ್ಯ ಶ್ರೀ ಬಸವರಾಜ್ ಹೊರಟ್ಟಿಯವರು ವಿಧಾನಪರಿಷತ್ ಪ್ರವೇಶಿಸಿ ೪೫ ವರ್ಷ ಪೂರೈಸಿದ ಪ್ರಯುಕ್ತ ಅವರ ಬದುಕು, ಸಂಘಟನೆ, ಹೋರಾಟ ಕುರಿತು ವಿಶೇಷ ಉಪನ್ಯಾಸವನ್ನು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊಫೆಸರ್ ಶಿವಾನಂದ್ ಎಸ್ ಪಟ್ಟಣ ಶೆಟ್ಟರ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ, ಘನ ಉಪಸ್ಥಿತಿಯನ್ನು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ವಹಿಸಲಿದ್ದಾರೆ. ವಚನ ಸಾಹಿತ್ಯ ಪಿತಾಮಹ ಡಾ. ಪ.ಗು. ಹಳಕಟ್ಟಿ ಹಾಗೂ ಪೂಜ್ಯ ಶ್ರೀ ಲಿಂಗಾನAದ ಮಹಾಸ್ವಾಮಿಗಳು ಕುರಿತು ಉಪನ್ಯಾಸವನ್ನು ಮುಳಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ರಮೇಶ್ ಕಲ್ಲನಗೌಡ್ರ ನೀಡಲಿದ್ದಾರೆ. ಮುಖ್ಯ ಅತಿಥಿಗಳು ಡಾ. ಬಸವರಾಜ ಧಾರವಾಡ, ಸಂಚಾಲಕರು ಅವ್ವ ಸೇವಾ ಟ್ರಸ್ಟ್ ಗದಗ, ವಚನ ಸಂಗೀತ ಮೃತ್ಯಂಜಯ ಹಿರೇಮಠ ಹಾಗೂ ಗುರುನಾಥ ಸುತಾರ,ಧರ್ಮಗ್ರಂಥ ಪಠಣ ಕುಮಾರಿ ಅಪೇಕ್ಷಾ ಎಸ್ ಹೊನಗಣ್ಣನವರ್, ವಚನ ಚಿಂತನ ಕುಮಾರಿ ಸೃಷ್ಟಿ ವಿ ಪೂಜಾರ, ದಾಸೋಹ ಸೇವೆಯನ್ನು ಶರಣ ಮಹಾಂತೇಶ ಗಂಗಾಧರ ಹೂಗಾರ ನಿವೃತ್ತ ಶಿಕ್ಷಕರು ಹಾಗೂ ಕುಟುಂಬ ವರ್ಗದವರು ಮಾಡಲಿದ್ದಾರೆ.