
ಕಮಲನಗರ:ಫೆ.20: ಛತ್ರಪತಿ ಶಿವಾಜಿ ಮಹಾರಾಜರು ಜನರಲ್ಲಿ ಸಂಸ್ಕøತಿ ಬೆಳೆಸುವುದರ ಜೊತೆಗೆ ಭರತ ಖಂಡದಲ್ಲಿ ಅನೇಕ ಯುದ್ಧ ಮಾಡಿ ಬಲಿಷ್ಟ, ಸ್ವತಂತ್ರ ಹಿಂದೂ ಸಾಮ್ರಾಜ್ಯ ಕಟ್ಟಲು ನಿರಂರ ಹೋರಟ ಮಾಡಿದವರು ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.
ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆ ವತಿಯಿಂದ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಶಿವಾಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
17ನೇ ಶತಮಾನದಲ್ಲಿ ಉತ್ತರ ಭಾರತದ ಬಲಾಢ್ಯ ಸಾಮ್ರಾಜ್ಯವಾದ ಮೊಘಲರು, ದಕ್ಷಿಣದಲ್ಲಿ ಬಹಮನಿ ಸಾಮ್ರಾಜ್ಯ, ಪೂರ್ವದಲ್ಲಿ ನಿಜಾಮಶಾಹಿಗಳು ಹಾಗೂ ಪಶ್ಚಿಮದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಲು ಫ್ರೆಂಚರು, ಡಚ್ಚರು ಪ್ರಯತ್ನಿಸುತ್ತಿದ್ದರು. ಇಂತಹ ಸಮಯದಲ್ಲಿ ಸ್ವರಾಜ್ಯ ಸ್ಥಾಪನೆಯ ಜೊತೆಗೆ ಹಿಂದೂ ಸಾಮ್ರಜ್ಯ ಪ್ರತಿಷ್ಠಾಪಿಸಿ ಅಖಂಡ ಭಾರತ ನಿರ್ಮಿಸುವ ಪರಿಕಲ್ಪನೆ ಶಿವಾಜಿ ಮಹಾರಾಜರದಾಗಿತ್ತು. ಅಷ್ಟೇ ಅಲ್ಲದೆ ಮಹಿಳೆಯರ ಬಗ್ಗೆ ಅತೀವ ಗೌರವ ಮತ್ತು ಆದರ್ಶ ವ್ಯಕ್ತಿತ್ವ ಹೊಂದಿದ್ದ ಶಿವಾಜಿ ಮಹಾರಾಜರು, ಅಪ್ಪಟ್ಟ ದೇಶ ಭಕ್ತರು. ಎಲ್ಲರೂ ಸಹಬಾಳ್ವೆಯಿಂದ ಬಾಳಬೇಕೆಂಬ ಉನ್ನತ ಧ್ಯೇಯ ಹೊಂದಿದ್ದರು. ಶಿವಾಜಿ ಮಹಾರಾಜರ ಜಯಂತೋತ್ಸವ ಪ್ರತಿ ಶಾಲಾ ಕಾಲೇಜುಗಳಲ್ಲಿ ಆಚರಿಸುವ ಮೂಲಕ ಶಿವಾಜಿ ಅವರ ವ್ಯಕ್ತಿತ್ವ ಮತ್ತು ಜೀವನಾದರ್ಶಗಳು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಅರವಿಂದ ಚ್ಯಾಂಡೇಶ್ವರೆ, ಅಂಬಿಕಾ ಗಾಯಕವಾಡ, ರಾಣಿ ಡೋಣಗಾಪುರೆ, ವಾಣಿಶ್ರೀ ರತ್ನಪಾಲ ಸಿಂಧೆ, ಅರ್ಪಿತಾ ಜನಾಬಾಯಿ, ಪಂಚಫುಲಾ ಚವಾಣ್, ನಾಗೇಶ ಮಾಳಿವಾಡೆ ಹಾಗೂ ಮಕ್ಕಳು ಇದ್ದರು



























