Home ಜಿಲ್ಲೆ ಶಿವಾಜಿ ಮಹಾರಾಜರು ದಕ್ಷ ಆಡಳಿತಗಾರರು:ಕಾಂತುಗೌಡ

ಶಿವಾಜಿ ಮಹಾರಾಜರು ದಕ್ಷ ಆಡಳಿತಗಾರರು:ಕಾಂತುಗೌಡ

ಚಡಚಣ:ಫೆ.20:ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಮಹಾನ್ ದೇಶಭಕ್ತರು,ಧೈರ್ಯಶಾಲಿಗಳಿಗಷ್ಟೇ ಅಲ್ಲದೆ ದಕ್ಷ ಆಡಳಿತಗಾರರೂ ಆಗಿದ್ದರು ಎಂದು ಚಡಚಣ ಬಿಜೆಪಿ ಘಟಕದ ಅಧ್ಯಕ್ಷ ಕಾಂತುಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಶಿವಾಜಿ ವೃತ್‍ದಲ್ಲಿ ಗುರುವಾರ ಆಯೋಜಿಸಲಾದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದಲ್ಲಿ ಅವರು ಮಾತನಾಡಿದರು.
ಮುಖಂಡ ಸೋಮಶೇಖರ ಬಡಿಗೇರ ಮಾತನಾಡಿ,ನ್ಯಾಯ ಸಮ್ಮತ ಆಡಳಿತ ಹಾಗೂ ಧಾರ್ಮಿಕ ಸಹಿಷ್ಣುತೆಗೆ ಹೆಸರುವಾಸಿಯಾದ ಶ್ರೀ ಶಿವಾಜಿ ಮಹಾರಾಜರ ಶೌರ್ಯ,ನಾಯಕತ್ವ ಹಾಗೂ ದೇಶ ಭಕ್ತಿ ನಮ್ಮೆಲ್ಲರಿಗೆ ಪ್ರೇರಣೆಯಾಗಿದ ಎಂದರು
ಪಿಎಸ್‍ಐ ಸೋಮೇಶ ಗೆಜ್ಜಿ ಮಾತನಾಡಿ,ಸ್ವತಂತ್ರ ಮರಾಠಾ ಸಾಮ್ರಾಜ್ಯ ಸ್ಥಾಪಿಸಿ,ಗೋರಿಲ್ಲ ಮಾದರಿ ಯುದ್ಧ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಶಿವಾಜಿ ಮಹಾರಾಜರು,ದಕ್ಷಿಣ ಭಾರತದ ಸುಮಾರು 250 ಕ್ಕೂ ಹೆಚ್ಚು ಕೋಟೆಗಳನ್ನು ವಶಪಡಿಸಿಕೊಂಡಿದ್ದರು ಎಂದರು.
ಮುಖಂಡ ಮಹಾದೇವ ಹಿರೇಕುರಬರ,ಮಹಾದೇವ ಬನಸೋಡೆ ಶ್ರೀ ಶಿವಾಜಿ ಮಹಾರಾಜರ ಶೌರ್ಯ ಸಾಹಸ ಸಾಧನೆಗಳನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜು ಧೋತ್ರೆ, ಕ್ಷತ್ರಿಯ ಮರಾಠಾ ಸಮಾಜದ ಮುಖಂಡರಾದ ಚಿದಾನಂದ ಶಿಂಧೆ, ಸಮಾಜದ ಅಧ್ಯಕ್ಷರಾದ ದತ್ತು ಶಿಂಧೆ, ಪತ್ರಕರ್ತರಾದ ಲಕ್ಷ್ಮಣ ಶಿಂಧೆ ಭಿಮಾಶಂಕರ ಶಿಂಧೆ,ರವಿ ಶಿಂಧೆ,ಹಣಮಂತ ಕ್ಷತ್ರೀಯ ,ಮಹಾದೇವ ಶಿಂಧೆ,ಚಂದು ಕ್ಷತ್ರಿಯ, ದೇವಪ್ಪಗೌಡ ಪಾಟೀಲ,ಅರ್ಜುನ್ ಕ್ಷತ್ರಿ,ದಿಗಂಬರ ಶಿಂಧೆ,ತಮ್ಮಣ್ಣ ಶಿಂಧೆ,ಶೈದು ಕೊಡಹೊನ್ನ,ಗುರು ಸಜ್ಜನ ಇದ್ದರು