ಶಿವಸೇನಾಯಿಂದ ಡ್ಯಾನ್ಸ್ ಸ್ಪರ್ಧೆ ಆಯೋಜನೆ ಮಾಜಿ ಶಾಸಕ ತೇಲ್ಕೂರ್ ಬಾಗಿ

ಸೇಡಂ, ಸೆ,೩೦: ಪಟ್ಟಣದ ದೊಡ್ಡ ಅಗಸಿ ಮುಖ್ಯ ದ್ವಾರದಲ್ಲಿ ಶಿವಸೇನಾ ದಸರಾ ಉತ್ಸವ ಸಮಿತಿ ವತಿಯಿಂದ ೩೧ನೇ ವರ್ಷದ ದಸರಾ ಉತ್ಸವದ ಅಂಗವಾಗಿ ಇಂದು ಸಂಜೆ ವಿವಿಧ ತಂಡಗಳಿAದ ಡ್ಯಾನ್ಸ್ ಸ್ಪರ್ಧೆ ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಪಂಚಾಕ್ಷರಿ ಸ್ವಾಮಿಗಳು ಆಗಮಿಸುವರು ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಜೈ ಭಾರತ ಮಾತಾ ಸೇವಾ ಸಮಿತಿ ತಾಲೂಕಾ ಅಧ್ಯಕ್ಷ ರಾಜಶೇಖರ ರೆಡ್ಡಿ ಹೈಯ್ಯಾಳ,ಪತ್ರಕರ್ತರು ಸಮಾಜ ಸೇವಕರಾದ, ಶಿವಕುಮಾರ ಬಿ. ನಿಡಗುಂದಾ ಭಾಜಪಾ ಪ್ರಧಾನ ಕಾರ್ಯದರ್ಶಿ ಶ್ರೀರಾಘವೇಂದ್ರ ಮೇಕ್ಯಾನಿಕ್,ಭಾಜಪಾ ಯುವ ಮುಖಂಡ ವೆಂಕಟೇಶ ಬಿ.ಪಾಟೀಲ್,ಗೌರವ ಅಧ್ಯಕ್ಷತೆ ಶಿವಸೇನಾ ದಸರಾ ಉತ್ಸವ ಕಾರ್ಯದರ್ಶಿಗಳ ಸಮಿತಿ ರಾಜು ಎಸ್.ಭಾಗೋಡಿ,ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಸೇನಾ ದಸರಾ ಉತ್ಸವ ಸಮಿತಿ,ಕೋಶಾಧ್ಯಕ್ಷ ದೀಪಕ ಭಾಗೋಡಿ ಭಾಗವಹಿಸಲಿದ್ದಾರೆ.