ಯಡ್ರಾಮಿ:ಸೆ.೨೭:ಮಳೆ ಲೆಕ್ಕಿಸದೆ ಶಿವಸೇನೆ ಹಾಗೂ ಬಿಜೆಪಿ ವತಿಯಿಂದ ಸತತ ಮಳೆಯ ಮದ್ಯದಲ್ಲಿ ಬೇಳೆ ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ ಕೈಗೊಂಡರು
ಅತಿಯಾದ ಮಳೆಯಿಂದ ಯಡ್ರಾಮಿ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗಳು ಹಾಳಾಗಿದ್ದು ವಾಣಿಜ್ಯ ಬೆಳೆಗಳಿಗೆ ಎಕರೆಗೆ ೨೫,೦೦೦ ಹಾಗೂ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ೫೦,೦೦೦ ಪರಿಹಾರ ನೀಡಬೇಕು,
ರೈತರ ಸಾಲ ಮನ್ನಾ ಮಾಡಬೇಕು,ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಅವುಗಳನ್ನು ಕೂಡಲೇ ದುರಸ್ತಿಗೊಳಿಸಬೇಕು, ಜನರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು,
ಅದೇ ರೀತಿಯಾಗಿ ಈ ಹಿಂದೆ ಕೆಲೂರು ಗ್ರಾಮದಲ್ಲಿ ಅಗಸ್ಟ ತಿಂಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಆ ಪ್ರತಿಭಟನೆಯಲ್ಲಿ ರೈತರಿಗೆ ಒಂದೇ ವಾರದಲ್ಲಿ ಬೆಳೆ ಪರಿಹಾರ ನೀಡುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ ಹೇಳಿದರು,
ನಿರಂತರ ಮಳೆಯಿಂದಾಗಿ ಮನೆಗಳು ಬಿದ್ದಿವೆ ಅಂತ ಕುಟುಂಬಗಳಿಗೆ ಸರ್ಕಾರ ವತಿಯಿಂದ ಪರಿಹಾರ ನೀಡಬೇಕು ಮತ್ತು ಸೆಪ್ಟೆಂಬರ್ ನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಸಂಪೂರ್ಣ ೧೦೦ % ಬೆಳೆ ನಾಶವಾಗಿದೆ,
ಕೂಡಲೇ ಇನ್ಶೂರೆನ್ಸ್ ಕಂಪನಿಯವರು ಇನ್ಸೂರೆನ್ಸ್ ಮೊತ್ತ ಜಮಾ ಮಾಡಬೇಕು, ಇಲ್ಲಿವರೆಗೂ ಕೂಡ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ನಿಧಿ ಯಾಕೆ ಜಿಲ್ಲಾ ಆಡಳಿತ ಬಳಸುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇಸದಿದ್ದರೆ ಮುಂಬರುವ ದಿನಗಳಲ್ಲಿ ಯಡ್ರಾಮಿ ಬಂದು ನೀಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶುಕ್ರವಾರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಶಿವ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಆಂದೋಲ ಎಚ್ಚರಿಕೆ ನೀಡಿದ್ದಾರೆ.
ಅದೇ ರೀತಿಯಾಗಿ ತಾಲೂಕಿನ ಪ್ರತಿಯೊಂದು ಅಭಿವೃದ್ಧಿ ಕೆಲಸಕ್ಕೆ ಹಾಗೂ ಜನರ ಕಷ್ಟಕ್ಕೆ ಸದಾ ನಾವು ನಿಮ್ಮ ಸೇವೆಗೆ ಶಿವಸೇನೆ ಹಾಗೂ ಬಿಜೆಪಿ ಪಕ್ಷ ನಿಮ್ಮೊಂದಿಗೆ ಇದೆ ಎಂದು ರೈತರಿಗೆ ಹೇಳಿದರು.
ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ ರದ್ದೇವಾಡಿ ಮಾತನಾಡಿ ಈ ವರ್ಷ ಅತಿಯಾದ ಮಳೆಯಿಂದಾಗಿ ರೈತರ ಸಂಕಷ್ಟದಲ್ಲಿದ್ದರೆ ಸರ್ಕಾರ ರೈತರ ಜೊತೆಗೆ ಚೆಲ್ಲಾಟವಾಡುತ್ತಿದೆ.
ನಮ್ಮ ಬಿಜೆಪಿ ಬೊಮ್ಮಾಯಿ ಸರ್ಕಾರದಲ್ಲಿ ರೈತರಿಗೆ ಒಂದು ವರ್ಷ ೧೫,೦೦೦ ಮತ್ತು ಇನ್ನೊಂದು ವರ್ಷ ೧೮,೦೦೦ ಪರಿಹಾರವಾಗಿ ನೀಡಿತ್ತು ಈಗಿನ ಕಾಂಗ್ರೆಸ್ ಸರ್ಕಾರ ೨೫೦೦೦ ಅನ್ನು ಪರಿಹಾರವಾಗಿ ಎಕರೆಗೆ ನೀಡಬೇಕು.
ಇಲ್ಲಿನ ಶಾಸಕರು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಅವರು ಸಚಿವ ಸ್ಥಾನದ ಆಕಾಂಕ್ಷೆಯಲ್ಲಿ, ದೆಹಲಿಯಲ್ಲಿ ಟಿಕ್ಕಾಣಿ ಹೂಡಿದ್ದಾರೆ, ಮುಂಬರುವ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು.
ತಾಲೂಕಿನಲ್ಲಿ ಅಧಿಕೃತವಾದ ವಿರುದ್ಧ ಪಕ್ಷದವರು ಶಾಸಕರ ಕೈಗೊಂಬೆಯಾಗಿದ್ದಾರೆ, ಯಾವುದೇ ಒಂದು ವಿಷಯ ಕೂಡ ಶಾಸಕರು ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದರು.
ಸತತವಾಗಿ ಸುರಿದಂತ ಮಳೆಯಿಂದಾಗಿ ಮೃತಪಟ್ಟ ಅಲ್ಪಸಂಖ್ಯಾತ ಮಹಿಳೆಯ ಸರ್ಕಾರ ವತಿಯಿಂದ ಸಿಗುವಂತ ಸೌಲಭ್ಯಗಳನ್ನು ಒದಗಿಸಬೇಕು, ಎಂದು ತಶಿಲ್ದಾರ್ ಅವರಿಗೆ ಪೂಜ್ಯರು ಮನವಿ ಮಾಡಿಕೊಂಡರು.
ಆ ಮೃತಪಟ್ಟ ಬಾಲಕಿಯ ಕುಟುಂಬದ ಜೊತೆ ನಾವಿರುತ್ತೇವೆ ಎಂದು ಪೂಜ್ಯರ ನೇತೃತ್ವದ ತಂಡ ಮನೆಗೆ ಭೇಟಿ ಆ ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ದೇವೇಂದ್ರ ಮುತ್ತಗೋಡ, ಸಿದ್ದರಾಮ ಹಿರೇಮಠ, ಪ್ರವೀಣ್ ಕುಮಾರ್ ಕುಂಟೋಜಿಮಠ, ಮಡಿವಾಳಪ್ಪ ಅಮರಾವತಿ, ಸಾಹೇಬ್ ಗೌಡ ದೇಸಾಯಿ, ಭಾಗ್ಯವಂತ ಪವಾರ, ಮಲ್ಲು ಕುಸ್ತಿ, ಶಂಕರಗೌಡ ಸುಂಬಡ, ದೇವೇಂದ್ರಪ್ಪ ಗೌಡ ಸೋಮನಾಥಳ್ಳಿ, ದೇವಿಂದ್ರ ದನ್ನೂರ್, ಪ್ರಭುಗೌಡ ಸುಂಬಡ, ಮುತ್ತಪ ಪೂಜಾರಿ , ಸಿದ್ದು ಹಂಗರಗಿ, ಬಸವರಾಜ ಚಿಗರಿ, ಗಣೇಶ್ ದೇವರಮನಿ, ಹಾಗೂ ಅನೇಕ ಶಿವಸೇನ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು
ಯಡ್ರಾಮಿ ತಾಲೂಕಿನ ರೈತರ ಬೆಳೆ ಪರಿಹಾರ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಶಿವಸೇನೆ ಹಾಗೂ ಬಿಜೆಪಿ ವತಿಯಿಂದ ಬೃಹತ್ ಪತ್ರಿಭಟನೆ ನಡೆಸಿ ತಹಶೀಲ್ದಾರ್ ಎಲ್ಲಪ್ಪ ಸುಬೇದಾರ್ ಅವರಿಗೆ ಮನವಿ ಸಲ್ಲಿಸಲಾಯಿತು
ಯಡ್ರಾಮಿ ಪಟ್ಟಣದಲ್ಲಿ ಗೋಡೆ ಕುಸಿದು ಮೃತಪಟ್ಟ ಅಲ್ಪಸಂಖ್ಯಾತರ ಮಹಿಳೆಯ ಮನೆಗೆ ಶಿವಸೇನೆ ರಾಜ್ಯಧ್ಯಕ್ಷರಾದ ಪೂಜ್ಯರಾದ ಆಂದೋಲ ಶ್ರೀಗಳು ಹಾಗೂ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ ಅವರು ಭೇಟಿ ನೀಡಿದರು.

























