Home ಜಿಲ್ಲೆ ಕಲಬುರಗಿ ಶೀಗಿ ಹುಣ್ಣಿಮೆ:ಭೂಮಾತೆಗೆ ಪೂಜೆ

ಶೀಗಿ ಹುಣ್ಣಿಮೆ:ಭೂಮಾತೆಗೆ ಪೂಜೆ

ಕಲಬುರಗಿ:ದೈನಂದಿನ ಜೀವನದ ಜೊತೆಗೆ ಬಂದು ಹೋಗುವ ಬಂಧುಗಳAತೆ ಅನೇಕ ಹಬ್ಬಗಳ ಯಾದಿಯೇ ಇದೆ ಪ್ರತಿ ಹಬ್ಬಕ್ಕೂ ತನ್ನದೇ ಆದ ಆಚರಣೆ, ಸಂಪ್ರದಾಯ, ಆಹಾರ ಶೈಲಿ, ನಿಯಮ ನೀತಿಗಳಿವೆ ,ಅಂತಹದೇ ದಿನ ಇಂದು ಶೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಆಚರಣೆ.
ಭೂಮಿ ತಾಯಿಯನ್ನು ನಂಬಿ ವರ್ಷವಿಡಿ ದುಡಿಯುವ ರೈತ, ತನ್ನ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡೆಂದು ಭೂಮಾತೆಯನ್ನು ಪೂಜಿಸಿ ಬೇಡುವ ಪವಿತ್ರ ಆಚರಣೆಯೇ ಶೀಗಿ ಹುಣ್ಣಿಮೆ ಹಬ್ಬ.
ಉತ್ತರ ಕರ್ನಾಟಕದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸೀಗಿ ಹುಣ್ಣಿಮೆಯನ್ನು ಶ್ರದ್ದಾ ಭಕ್ತಿಯೊಂದಿಗೆ ಸಾಂಪ್ರದಾಯಕವಾಗಿ ನಮ್ಮ ಜನಪದರು ಹಾಕಿ ಕೊಟ್ಟ ಮಾರ್ಗದಲ್ಲಿ ಆಚರಿಸುತ್ತ ಬಂದಿರುವರು.
ಭೂದೇವಿಯ ಆರಾಧನೆಯಲ್ಲಿ ನಿರತವಾಗುವುದನ್ನು ಈ ದಿನ ವಿಶೇಷವಾಗಿ ಗಮನ ಸೆಳೆಯುವುದು ಕಾಣಬಹುದು.
ಭೂತಾಯಿ ಹಸಿರು ಸೀರೆಯುಟ್ಟು ಹುಲುಸಾಗಿ ಫಸಲು ತುಂಬಿಕೊAಡು ಕಂಗೊಳಿಸುತ್ತಿರುವಾಗ ಆ ಫಸಲಿಗೆ ಸೀರೆಯುಡಿಸಿ ಉಡಿ ತುಂಬಿ ಪೂಜಿಸಿ ಆರಾಧಿಸುವರು. ಪಂಚ ಪಾಂಡವರ ದ್ಯೂತಕವಾಗಿ ಹೊಲದಲ್ಲಿ ಐದು ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ ಇದನ್ನೇ ಭೂಮಿ ಪೂಜೆ ಸೀಗಿ ಹುಣ್ಣಿಮೆ ಎಂದು ಸಂಭ್ರ‍್ರಮಿಸುವರು.
ಈ ಹುಣ್ಣಿಮೆ ಸಡಗರಕ್ಕಾಗಿ ಹತ್ತಾರು ಬಗೆ ಬಗೆಯ ಹಬ್ಬದ ಅಡುಗೆ ಕಡಬು, ಖರ್ಚಿಕಾಯಿ ಹೋಳಿಗೆ ಬಗೆ ಬಗೆಯ ಪಲ್ಯೆ ಮಾಡಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಸಹ ಭೊಜನ ಮಾಡಿ ಸೀಗೆ ಹುಣ್ಣಿಮೆ ಅರ್ಥಪೂರ್ಣವಾಗಿ ಆಚರಿಸುವರು.ಕೆಲವರು ಮನೆಯ ದೇವರ ಜಗುಲಿಯಲ್ಲಿ ಶೀಗಮ್ಮನನ್ನು ಪ್ರತಿಷ್ಠಾಪಿಸಿ ಪೂಜಿಸಿ ನಮಿಸುವರು. ಶೀಗಿಗೌರಮ್ಮನ ಹಾಡುಗಳನ್ನು ಹಾಡುವರು.ಇದು ನಮ್ಮ ಸಂಪ್ರದಾಯ ಮಾತ್ರವಲ್ಲ ನಮ್ಮ ಹಿರಿಮೆ ಗರಿಮೆ ಎಲ್ಲ ಇದು ರೈತರ ಹಬ್ಬ ಮಾತ್ರವಲ್ಲ ಅನ್ನ ಉಣ್ಣುವ
ವ ಪ್ರತಿಯೊಬ್ಬರ ಹಬ್ಬ.
-ಗುರು ಪಟ್ಟಣಶೆಟ್ಟಿ