
ಕಲಬುರ್ಗಿ:ಮಾ.13:ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗುತ್ತಿದೆ ಇದು ನಿಜವೇ? ಒಂದು ವೇಳೆ ಇಷ್ಟು ದೊಡ್ಡ ಪ್ರಮಾಣದ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕ ಸೇವೆಗಳನ್ನು ನೀಡುವಲ್ಲಿ ಸರ್ಕಾರ ಎದುರಿಸುತ್ತಿರುವ ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಯಾವುವು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಇಂದು ನಡೆದ ವಿಧಾನ ಪರಿಷತ್ ಅಧೀವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರಶ್ನಸಿದರು
ಇದಕ್ಕೆ ಉತ್ತರಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ 7,76,414 ಹುದ್ದೆಗಳು ಮಂಜೂರಾಗಿದ್ದು, 4,91,533 ಹುದ್ದೆಗಳನ್ನು ತುಂಬಲಾಗಿದೆ. ಅಲ್ಲದೇ, ಗ್ರೂಪ್-ಸಿ ಹಾಗೂ ಗ್ರೂಪ್-ಡಿ ವೃಂದದ ಹುದ್ದೆಗಳಾದ ದತ್ತಾಂಶ ನಮೂದು ಸಹಾಯಕರು ಹಾಗೂ ವಾಹನ ಚಾಲಕರ 96,844 ಹುದ್ದೆಗಳನ್ನು ಗುತ್ತಿಗೆ , ಹೊರಗುತ್ತಿಗೆ ಅಧಾರದ ಮೇಲೆ ಈಗಾಗಲೇ ಭರ್ತಿ ಮಾಡಲಾಗಿದೆ ಎಲ್ಲಾ ಸೇರಿ 2 5,88,377 ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ, ಕೇವಲ 1,88,037 ಹುದ್ದೆಗಳು ಖಾಲಿ ಇವೆ.ಕಳೆದ 3 ವರ್ಷಗಳಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ ಇಲಾಖೆಗಳಲ್ಲಿ ಖಾಲಿ ಇರುವ 8157 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಮುಂದುವರೆದು 3081 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ. ಅಲ್ಲದೇ, 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು 30 ದಿವಸಗಳಲ್ಲಿ ಪ್ರಾರಂಭಿಸುವಂತೆ ಸರ್ಕಾರದ ಆದೇಶ ಸಂಖ್ಯೆ ಸಿಆಟಸುಇ 1 ಸೇಹಿಮ 2026, ದಿನಾಂಕ:27-2-2026 ರಲ್ಲಿ ಎಲ್ಲಾ ಇಲಾಖೆಗಳಿಗೆ ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಂತರ ಪ್ರಶ್ನಿಸಿದ ನಮೋಶಿಯವರು ಖಾಲಿ ಇರುವ ಹುದ್ದೆಗಳಿಂದಾಗಿ ಸಾರ್ವಜನಿಕ ಸೇವೆಗಳು ನೀಡುವಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಾಗದಂತೆ ಸರ್ಕಾರ ಕೈಗೊಂಡ ಕ್ರಮಗಳೇನು?
ಮಾನ್ಯ ಹೈಕೋರ್ಟ್ ಮೌಖಿಕ ಆದೇಶದಂತೆ ಹಾಲಿ ಚಾಲ್ತಿಯಲ್ಲಿರುವ 56% ಮೀಸಲಾತಿ ಪ್ರಕರಣವು ಇತ್ಯರ್ಥವಾಗುವವರೆಗೆ ಹಳೆಯ 50% ನ ನೇಮಕಾತಿಯನ್ನು ಮೀಸಲಾತಿ ಮತ್ತು ರೋಸ್ಟರ್ ಅಡಿಯಲ್ಲೇ ಮಾಡಿಕೊಳ್ಳಬಹುದಲ್ಲವೇ; ಈ ಕುರಿತು ಸರ್ಕಾರದ ನಿಲುವೇನು ಎಂದು ಕೇಳಿದರು ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ
ಆದೇಶದಿಂದಾಗಿ ಹಲವಾರು ಇಲಾಖೆಗಳಲ್ಲಿನ ಖಾಲಿ
ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಸ್ಥಗಿತಗೊಂಡಿರುತ್ತದೆ.
ಆದರೆ, ನಿರುದ್ಯೋಗಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಮನಗಂಡು ಸರ್ಕಾರದ ಆದೇಶ ಸಂಖ್ಯೆ ಸಿಅಸುಇ 1 ಸೇಹಿಮ 2026, ದಿನಾಂಕ:27-2-2026 ಅನ್ನು ಹೊರಡಿಸಲಾಗಿದೆ.
ಸದರಿ ಆದೇಶದಲ್ಲಿ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 8 ಸೇಹಿಮ 1995, ದಿನಾಂಕ 20-6-1995 ರನ್ನಯ ಮೀಸಲಾತಿ ಪ್ರಮಾಣ ಬಿಂದುಗಳಂತೆ (.50) ಹಾಗೂ ಜeಡಿoಖಾಲಿಯಿರುವ ನೇರ ನೇಮಕಾತಿ ತುಂಬುವ ಹುದ್ದೆಗಳಲ್ಲಿ 56,432 ಹುದ್ದೆಗಳನ್ನು ಪ್ರಕ್ರಿಯೆಯನ್ನು ಮುಂದಿನ 30 ದಿನಗಳಲ್ಲಿ ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ / ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.
ಇದೇ ಆದೇಶದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ “ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಗಳು / ನೇಮಕಾತಿ ಪ್ರಾಧಿಕಾರಿಗಳು ಮುಂದಿನ ನೇಮಕಾತಿ ಮಾಡುವ ಹುದ್ದೆಗಳಲ್ಲಿ ಶೇ. 6 ರಷ್ಟು (ಪರಿಶಿಷ, ಜಾತಿಗೆ ಶೇ. 2 ಮತ್ತು ಪರಿಶಿಷ್ಠ ಪಂಗಡಕ್ಕೆ ಈ. 4) ಹುದ್ದೆಗಳನ್ನು ಕಾಯ್ದಿರಿಸತಕ್ಕದ್ದೆಂದು ತಿಳಿಸಲಾಗಿದೆ ಎಂದು ಹೇಳಿದರು. ಇದಕ್ಕೆ ತೃಪ್ತರಾಗದ ನಮೋಶಿಯವರು ನೇಮಕಾತಿಯಲ್ಲಿ ವಿಳಂಬವಾಗಿದೆ ಎಂದು 5 ವರ್ಷ ವಯೋಮಿತಿ ಸಡಿಲಿಕೆ ಮಾಡಿದ್ದು ಯಾವುದೇ ನೇಮಕಾತಿಯನ್ನು ಮಾಡದೇ ಇದ್ದರೇ ವಯೋಮಿತಿ ಸಡಿಲಿಕೆ ಮಾಡಿರುವ ಪ್ರಯೋಜನವೇನು ಮುಂಬರುವ ನೇಮಕಾತಿ ಅಧಿಸೂಚನೆ ಆಗುವವರೆಗೂ ಮತ್ತೊಮ್ಮೆ ವಯೋಮಿತಿ ಸಡಿಲಿಕೆಯನ್ನು 5 ವರ್ಷಗಳ ಕಾಲ ವಿಸ್ತರಣೆ ಮಾಡಲಾಗುತ್ತದೆ ಎಂದು ಕೇಳಿದರು ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು
ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೇನನಿ – 2025, ದಿನಾಂಕ:29.01.2026ರಲ್ಲಿ ಈ ಆದೇಶ ಹೊರಡಿಸಲಾದೆ. ನಂತರ ಮುಂದಿನ ದಿನಾಂಕ: 31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ 8 ಅಧಿಸೂಚನೆಗಳನ್ನಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ -ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾ : ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ” ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿದೆ. ಇದರಿಂದ ಎಲ್ಲಾ ಆ ಕಾಂಕ್ಷಿಗಳಿಗೆ ಸರ್ಕಾರಿ ನೌಕರರು ಸೇರಲು ಪ್ರಯೋಜನವಾಗುತ್ತದೆ.






















