
ನವದೆಹಲಿ, ಜ.೨೩- ಲೋಕಸಭೆ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಕೊಚ್ಚಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮಗೆ ಸೂಕ್ತ ಗೌರವ ಸಿಗದ ಕಾರಣ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಹಲವು ತಿಂಗಳುಗಳಿಂದ ಪಕ್ಷ ಮತ್ತು ನಾಯಕತ್ವದ ವಿರುದ್ಧ ಅತೃಪ್ತಿ ಅಸಮಾಧಾನಗೊಂಡು ಅಂತರ ಕಾಪಾಡಿಕೊಂಡಿರುವ ಶಶಿ ತರೂರ್ , ಬಿಜೆಪಿ ಜೊತೆ ಸಂಪರ್ಕ ಬೆಳಸಿಕೊಂಡಿದ್ದಾರೆ. ಈ ನಡುವೆ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ನಡುವೆಯೇ ಮಧ್ಯಾಹ್ನ ಕಾಂಗ್ರೆಸ್ ಪಕ್ಷದ ಸಭೆಗೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಕೇರಳ ಘಟಕದ ಹಿರಿಯ ಸದಸ್ಯರು ಮಧ್ಯಾಹ್ನ ೨.೩೦ ಕ್ಕೆ ಸಭೆ ಸೇರಲಿದ್ದು ಈ ಸಭೆಗೆ ಶಶಿ ತರೂರ್ ಗೈರು ಹಾಜರಾಗಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ರಾಜಧಾನಿ ತಿರುವನಂತಪುರಂನಿಂದ ನಾಲ್ಕು ಬಾರಿ ಸಂಸದರಾಗಿರುವ ತರೂರ್ ಗೈರು ಹಾಜರಾಗಲಿರುವುದು ಕುತೂಹಲ ಕೆರಳಿಸಿದೆ.
ಕೇರಳ ಮತ್ತು ಕೇಂದ್ರ ಕಾಂಗ್ರೆಸ್ ನಾಯಕರ ಜೊತೆ ಶಶಿ ತರೂರ್ ಅತೃಪ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ಕರೆದಿರುವ ಸಭೆಗೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ.
ರಾಜತಾಂತ್ರಿಕರಾಗಿರುವ ಶಶಿ ತರೂರ್, ಪ್ರಧಾನಿ ಮತ್ತು ಆಡಳಿತಾರೂಢ ಬಿಜೆಪಿಯನ್ನು ಹೊಗಳಿದಂತೆ ಕಾಣುವ ಕಾಮೆಂಟ್‌ಗಳ ನಂತರ ಕಾಂಗ್ರೆಸ್‌ನ ಕೇಂದ್ರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನುವುದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಏಪ್ರಿಲ್ ೨೨ ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನದ ಮೇಲಿನ ಮಿಲಿಟರಿ ದಾಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿ ಪಕ್ಷದ ನಾಯಕತ್ವದ ಕೆಂಗಣ್ಣಿಗೆ ಗುರಿಯಾಗಿದ್ದರು.
ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವಿನ ಉದ್ವಿಗ್ನತೆ ಭುಗಿಲೆದ್ದಿದ್ದು, ಭಾರತೀಯ ಜನತಾ ಪಕ್ಷವು ತನ್ನ ಬದ್ಧ ವೈರಿಯನ್ನು ಅಣಕಿಸಲು ಆಗಾಗ್ಗೆ ಇದರ ಮೇಲೆ ದಾಳಿ ಮಾಡುತ್ತಿದೆ.
ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ಮತ್ತು ಪ್ರಸ್ತುತ ಭಾರತ ಪುರುಷರ ಕ್ರಿಕೆಟ್ ತಂಡದ ತರಬೇತುದಾರ ಗೌತಮ್ ಗಂಭೀರ್ ಅವರೊಂದಿಗೆ ಸೆಲ್ಫಿ ಪೋಸ್ಟ್ ಮಾಡಿದ್ದಾರೆ, “ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿಸಿದ್ದಾರೆ.
- ರಾಹುಲ್ ಗಾಂಧಿ ಕೊಚ್ಚಿ ಭೇಟಿ ವೇಳೆ ಅವಮಾನ
- ಶಶಿ ತರೂರ್ ಕಾಂಗ್ರೆಸ್ ನಿಂದ ಅಂತರ
- ಮಹತ್ವದ ಸಭೆಗೆ ಗೈರು ಹಾಜರಾಗಲಿರುವ ಶಶಿ ತರೂರ್
- ಪ್ರಧಾನಿ ಹಾಡಿ ಹೊಗಳಿದ ಶಶಿ ತರೂರ್
- ಕೇರಳ ವಿಧಾನಸಭೆ ಚುನಾವಣೆ
- ಮಹತ್ವದ ಸಭೆಗೆ ಗೈರು ಹಾಜರಿ ಕುತೂಹಲ ಕ್ಕೆ ಎಡೆ




























