
ಬೀದರ್: ಮೆಥೋಡಿಸ್ಟ್ ಚರ್ಚ್ಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ನಿಯಮ ಬಾಹಿರವಾಗಿ ಗುತ್ತಿಗೆಗೆ ನೀಡಲಾಗಿದೆ ಹಾಗೂ ಮಾರಾಟ ಮಾಡಲಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಆಸ್ತಿಗಳನ್ನು ಸಂರಕ್ಷಿಸಬೇಕು ಎಂದು ಕ್ರೆöÊಸ್ತ ಧರ್ಮದ ಮುಖಂಡರಾದ ವಿಜಯಕುಮಾರ ಶೇರಿಕಾರ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಚರ್ಚ್ನ ಆಡಳಿತ ವ್ಯವಸ್ಥೆಯಲ್ಲಿರುವ ಕೆಲವರು ಅಧಿಕಾರ ದುರುಪಯೋಗಪಡಿಸಿಕೊಂಡು ಆಸ್ತಿ ವ್ಯವಹಾರಗಳಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ಬರೇಲಿ, ಮುಂಬೈ ಹಾಗೂ ಬೆಂಗಳೂರು ಪ್ರಾದೇಶಿಕ ಸಮ್ಮೇಳನಗಳ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಆಸ್ತಿ ವ್ಯವಹಾರಗಳ ಕುರಿತು ಮಾತನಾಡಿರುವ ಶೇರಿಕಾರ, ಬರೇಲಿ ಸಿಟಿ ಮಾಲ್ಗೆ ಸಂಬAಧಿಸಿದAತೆ ಸುಮಾರು ?೭,೦೦೦ ಕೋಟಿ ಮೌಲ್ಯದ ವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಚರ್ಚ್ಗೆ ಸೇರಿದ ಜಮೀನನ್ನು ಪೆಟ್ರೋಲ್ ಬಂಕ್ಗಾಗಿ ೨೯ ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ಆಸ್ತಿ ಮೌಲ್ಯವನ್ನು ಕಡಿಮೆ ತೋರಿಸಿ ವ್ಯವಹಾರ ನಡೆಸಲಾಗಿದೆ ಎಂದು ದೂರಿದರು.
ಮುಂಬೈ ಬಿಷಪ್ ಬಂಗಲೆಗೆ ಸಂಬAಧಿಸಿದ ಜಂಟಿ ಉದ್ಯಮದಲ್ಲಿ ಸುಮಾರು ?೧೦,೦೦೦ ಕೋಟಿ ಮೌಲ್ಯದ ಆಸ್ತಿ ಪಾಲುದಾರಿಕೆ ಒಪ್ಪಂದವಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಹೈದರಾಬಾದ್ ಹಾಗೂ ಬೆಳಗಾವಿಯ ಆಸ್ತಿ ವ್ಯವಹಾರಗಳ ಬಗ್ಗೆಯೂ ತನಿಖೆ ಅಗತ್ಯವಿದೆ ಎಂದ ಅವರು, ಬೆಳಗಾವಿಯಲ್ಲಿ ಸುಮಾರು ?೫೦೦ ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ ?೧೮ ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
ಕಾನ್ವೆಂಟ್ ರಸ್ತೆಯ ಆಸ್ತಿ ದುರಸ್ತಿ ಹಾಗೂ ಪುನರ್ನಿರ್ಮಾಣ ಕಾಮಗಾರಿಯನ್ನು ಎರಡು ಬಾರಿ ಕೈಗೆತ್ತಿಕೊಂಡು ?೧ ಕೋಟಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ಬೆಂಗಳೂರು, ಮುಂಬೈ ಮತ್ತು ಬರೇಲಿ ಸಮ್ಮೇಳನಗಳಲ್ಲಿ ವಿವಿಧ ಮಾರಾಟಗಾರರಿಂದ ಕಮಿಷನ್ ಪಡೆಯಲಾಗಿದೆ ಎಂಬ ಆರೋಪವೂ ಇದೆ ಎಂದು ಅವರು ತಿಳಿಸಿದರು.
ಮೆಥೋಡಿಸ್ಟ್ ಚರ್ಚ್ ಪ್ರಮುಖರಾದ ಜೋಸೆಫ್ ಕೊಡ್ಡಿಕರ್ ಮಾತನಾಡಿ, ಸಾತಾಲ್ ಆಶ್ರಮದ ಆಡಳಿತಕ್ಕೆ ಸಂಬAಧಿಸಿದAತೆ, ೨೦೧೧-೧೨ರಿಂದ ಅಧ್ಯಕ್ಷರಾಗಿ ಮುಂದುವರಿದಿರುವವರು ಆಡಳಿತ ಮಂಡಳಿ ಸಭೆ ನಡೆಸದೆ ಹಾಗೂ ಲೆಕ್ಕಪತ್ರಗಳನ್ನು ಮಂಡಿಸದೆ ಸಾವಿರಾರು ಎಕರೆ ಆಸ್ತಿಯನ್ನು ತಮಗೆ ಬೇಕಾದವರಿಗೆ ಪರಭಾರೆ ಮಾಡಿದ್ದಾರೆ. ನಿಯಮಾನುಸಾರ ಬರೇಲಿ ಬಿಷಪ್ ಅವರೇ ಸಾತಾಲ್ ಆಶ್ರಮದ ಅಧ್ಯಕ್ಷರಾಗಬೇಕಾದರೆ, ಬಿಷಪ್ ಹಾಗೂ ಬಿ.ಆರ್.ಸಿ. ಹುದ್ದೆಗಳನ್ನು ಏಕಕಾಲದಲ್ಲಿ ಹೊಂದಿರುವ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಬರೇಲಿಯಲ್ಲಿ ಚಾರಿಟಿ ಕಮಿಷನರ್ನ ಪೂರ್ವಾನುಮತಿ ಪಡೆಯದೆ ಚರ್ಚ್ ಆಸ್ತಿಗಳನ್ನು ಪೆಟ್ರೋಲ್ ಬಂಕ್, ಆಸ್ಪತ್ರೆ ಹಾಗೂ ಶಾಪಿಂಗ್ ಮಾಲ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆಗೆ ನೀಡಲಾದ ಆಸ್ತಿಗಳ ದಾಖಲೆಗಳು ಮತ್ತು ಹಣಕಾಸಿನ ಲೆಕ್ಕಪತ್ರಗಳನ್ನು ಆಡಳಿತ ಮಂಡಳಿಗೆ ಹಾಗೂ ಬೋರ್ಡ್ ಆಫ್ ಅಕೌಂಟ್ಸ್ಗೆ ಸಲ್ಲಿಸಿಲ್ಲ ಎಂದು ದೂರಿದರು.
ಬೀದರ್ನ ಮೆಥೋಡಿಸ್ಟ್ ಆಸ್ಪತ್ರೆ ಟ್ರಸ್ಟ್ ಸ್ಥಾಪಿಸುವ ಯೋಜನೆಯಲ್ಲಿಯೂ ಪಾರದರ್ಶಕತೆ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು. ಆಸ್ಪತ್ರೆ ಮತ್ತು ಸಂಬAಧಿತ ಕಾಮಗಾರಿಗಳಿಗೆ ಬಂದ ಅನುದಾನದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಕಮಿಷನ್ ಪಡೆಯಲಾಗಿದೆ ಹಾಗೂ ನಕಲಿ ದಾಖಲೆಗಳ ಮೂಲಕ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಮಾಡಿದರು.
ಆಡಳಿತದ ವಿರುದ್ಧ ಪ್ರಶ್ನೆ ಮಾಡಿದ ನೌಕರರನ್ನು ಅಮಾನತುಗೊಳಿಸಿ, ಅವರಿಗೆ ಜೀವನ ನಿರ್ವಹಣಾ ಭತ್ಯೆಯನ್ನೂ ನೀಡದೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಚರ್ಚ್ನ ಹಿರಿಯ ಅಧಿಕಾರಿಗಳು ಹಾಗೂ ಕೆಲ ಮಧ್ಯವರ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಅಕ್ರಮವಾಗಿ ಪರಭಾರೆ ಅಥವಾ ಗುತ್ತಿಗೆ ನೀಡಿರುವ ಆಸ್ತಿಗಳನ್ನು ಮರಳಿ ಸಂರಕ್ಷಿಸಬೇಕು. ಹಣಕಾಸು ವ್ಯವಹಾರಗಳ ಸಂಪೂರ್ಣ ಲೆಕ್ಕಪರಿಶೋಧನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಡ್ಡಿಕರ್ ಆಗ್ರಹಿಸಿದರು.
ಮುಖಂಡರಾದ ಜೋಸೇಫ್ ಅಡೆಪ್ಪ, ಶಾಂತಕುಮಾರ ಗುಮ್ಮಾ, ಶಾಮಸನ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.























