ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವೆಂಬ ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ತನ್ನ ಕಿರೀಟದಲ್ಲಿ ಮತ್ತೊಂದು ಗರಿ ಸೇರಿಸಿಕೊಂಡ ಶರಣಬಸವ ವಿಶ್ವವಿದ್ಯಾಲಯ

ಕಲಬುರಗಿ;ಸೆ.28: 2025ರ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಕ್ಕಾಗಿ ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (ಯುಪಿಎಸ್‍ಸಿ) ಅಧ್ಯಕ್ಷ ಡಾ. ಅಜಯ್ ಕುಮಾರ್ ಅವರು ಶರಣಬಸವ ವಿಶ್ವವಿದ್ಯಾಲಯಕ್ಕೆ ನೀಡುವ ಪ್ರತಿಷ್ಠಿತ ಐಇಟಿಇ-ಶ್ರೀ ಪಿ ಪಿ ಮಲ್ಹೋತ್ರ ಸ್ಮಾರಕ ಪ್ರಶಸ್ತಿಯನ್ನು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮತ್ತು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲ್‍ಕುಮಾರ್ ಬಿಡವೆ ಅವರಿಗೆ ಪ್ರದಾನ ಮಾಡಿದರು.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿ ಎಲ್ಲಾ ವಿಭಾಗಗಳಲ್ಲಿ ಸಂಶೋಧನೆಯಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಯ ಸಂಸ್ಕøತಿಯನ್ನು ಬೆಳೆಸಿದ್ದಕ್ಕಾಗಿ ಶರಣಬಸವ ವಿಶ್ವವಿದ್ಯಾಲಯಕ್ಕೆ ಶನಿವಾರ ಚಂಡೀಗಢದ ಸಿಎಸ್‍ಐಆರ್-ಸಿಎಸ್‍ಐಒ ಕ್ಯಾಂಪಸ್‍ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಸಂಸ್ಥೆಯ 68ನೇ ವಾರ್ಷಿಕ ಐಇಟಿಇ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯು ಪದಕ, ಫಲಕ ಮತ್ತು ನಗದು ಬಹುಮಾನವನ್ನು ಒಳಗೊಂಡಿತ್ತು. ಈ ಸಂಧರ್ಭದಲ್ಲಿ ಐಇಟಿಇ ಅಧ್ಯಕ್ಷ ಪೆÇ್ರ. ಸುನೀಲ ಉಪಸ್ಥಿತರಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅತ್ಯುನ್ನತ ಸಂಸ್ಥೆಯಾದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರ್‍ಗಳ ಸಂಸ್ಥೆ (ಐಇಟಿಇ) ಪ್ರತಿ ವರ್ಷ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅತ್ಯುತ್ತಮ ಶಿಕ್ಷಣ ಕೇಂದ್ರಗಳನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡುತ್ತದೆ.
2017ರಲ್ಲಿ ಸ್ಥಾಪನೆಯಾದ ಅತ್ಯಂತ ಕಿರಿಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶರಣಬಸವ ವಿಶ್ವವಿದ್ಯಾಲಯವು, ನವೀನ ವಿಧಾನದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಮತ್ತು ಪದವಿಪೂರ್ವ ಹಂತದಿಂದಲೇ ಸಂಶೋಧನಾ ಚಟುವಟಿಕೆಗಳಿಗೆ ಒತ್ತು ನೀಡುವಲ್ಲಿ, ತ್ವರಿತ ಪ್ರಗತಿಯೊಂದಿಗೆ ಶೈಕ್ಷಣಿಕ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಪದವಿಪೂರ್ವ ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ಮೊದಲ ಸೆಮಿಸ್ಟರ್‍ನಿಂದ ಸಂಶೋಧನಾ ಭಾಗವನ್ನು ಪರಿಚಯಿಸಿದ ಮತ್ತು ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‍ನಲ್ಲಿ ಕನಿಷ್ಠ ಒಂದು ಸಂಶೋಧನಾ ಯೋಜನೆಯನ್ನು ಪ್ರಸ್ತುತಪಡಿಸುವುದನ್ನು ಕಡ್ಡಾಯಗೊಳಿಸಿದ ಮೊದಲ ವಿಶ್ವವಿದ್ಯಾಲಯವೆಂದರೆ ಅದು ಕಲಬುರಗಿಯಲ್ಲಿರುವ ಶರಣಬಸವ ವಿಶ್ವವಿದ್ಯಾಲಯ
ಶರಣಬಸವ ವಿಶ್ವವಿದ್ಯಾಲಯವು 2017ರಲ್ಲಿ ಸ್ಥಾಪನೆಯಾದರೂ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜಿನಿಯರಿಂಗ್ ಶಿಕ್ಷಣದ ನಿಜವಾದ ಪ್ರಯಾಣವು 2002ರಲ್ಲಿ ಅಪ್ಪಾ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯನ್ನು ಸ್ಥಾಪಿಸುವುದರೊಂದಿಗೆ ಪ್ರಾರಂಭವಾಯಿತು. ಇದು ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮತ್ತು ಇನ್ಫಾರ್‍ಮೇಷನ್ ಸೈನ್ಸ್ ಇಂಜಿನಿಯರಿಂಗ್‍ನಲ್ಲಿ, ಪದವಿಪೂರ್ವ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ನೀಡಿತು, ನಂತರ 2017ರಲ್ಲಿ ಶರಣಬಸವ ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಂಡಿತು.
ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿ ನಂತರ ಅದನ್ನು ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸುವುದು ಶರಣಬಸವ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಕನಸಿನ ಕೂಸಾಗಿತ್ತು. ಅಪ್ಪಾ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯ ಮೂರು ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೇವಲ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೂಲಕ 2002ರಲ್ಲಿ ಪ್ರಾರಂಭವಾದ ಈ ಉಪಕ್ರಮವು ಇಂದು ಶರಣಬಸವ ವಿಶ್ವವಿದ್ಯಾಲಯವು ನೀಡುವ ವಿವಿಧ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಅನುಸರಿಸುವ ಒಟ್ಟು 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಲಿಂಗೈಕ್ಯ ಪೂಜ್ಯ ಡಾ. ಅಪ್ಪಾಜಿಯವರ ದೃಷ್ಟಿಕೋನದಿಂದ ವಿಶ್ವವಿದ್ಯಾಲಯವು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲು ಕಾರಣವಾಗಿದೆ. (ಮೊದಲು ಐಎಸ್‍ಟಿಇ ಯಿಂದ ಮಹಿಳೆಯರಿಗೆ ಪ್ರತ್ಯೇಕವಾಗಿ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವಿಭಾಗಕ್ಕೆ ಅತ್ಯುತ್ತಮ ಮಹಿಳೆಯರ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ ಮತ್ತು ಈಗ ಐಇಟಿಇ ಯಿಂದ ಶರಣಬಸವ ವಿಶ್ವವಿದ್ಯಾಲಯಕ್ಕೆ ಎರಡನೇ ರಾಷ್ಟ್ರೀಯ ಪ್ರಶಸ್ತಿ)ಗಳು ಲಭಿಸಿವೆ. ಈ ರಾಷ್ಟ್ರೀಯ ಪ್ರಶಸ್ತಿಯನ್ನು ಶರಣಬಸವ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ಅರ್ಪಿಸುತ್ತೇವೆ ಎಂದು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮತ್ತು ವಿವಿಯ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಈ ರಾಷ್ಟ್ರೀಯ ಮನ್ನಣೆಗಾಗಿ ಉಪಕುಲಪತಿ ಮತ್ತು ಇತರ ಪದಾಧಿಕಾರಿಗಳು ಮತ್ತು ಬೋಧನಾ ಸಿಬ್ಬಂದಿಯನ್ನು ಅಭಿನಂದಿಸಿ ಆಶೀರ್ವಾದಿಸಿದ್ದಾರೆ. ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ನಿರ್ದೇಶಕ ಪೆÇ್ರ. ವಿ. ಡಿ. ಮೈತ್ರಿ ಸೇರಿದಂತೆ ಇತರರು ಈ ಸಾಧನೆಗಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಬೋಧನಾ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.