
ಕಲಬುರಗಿ;ಮೇ.24: ಶರಣಬಸವ ವಿಶ್ವವಿದ್ಯಾಲಯವು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಉದ್ಯೋಗ ಆಧಾರಿತ ಪದವಿಪೂರ್ವ ಕೋರ್ಸ್‍ನ ಮತ್ತೊಂದು ಹೊಸ ಮಾರ್ಗವನ್ನು ತೆರೆದಿದ್ದು, ಇಂಜಿನಿಯರಿಂಗ್‍ನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ 2025-26 ಶೈಕ್ಷಣಿಕ ವರ್ಷದಿಂದ ಹೊಸ ಪದವಿಪೂರ್ವ ಮೂರು ವರ್ಷದ ವಿಜ್ಞಾನ ಪದವಿ (ಬಿ.ಎಸ್ಸಿ) ಮತ್ತು ನಾಲ್ಕು ವರ್ಷದ ಬಿ.ಎಸ್ಸಿ (ಊoಟಿoಡಿs) ಪದವಿಯಲ್ಲಿ ವಿಶೇಷತೆಯಾಗಿ ತಮ್ಮ ಕನಸಿನ ಕೋರ್ಸ್ ಮುಂದುವರಿಸಲು ಎರಡನೇ ಅವಕಾಶವನ್ನು ಒದಗಿಸುತ್ತದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ 120 ವಿದ್ಯಾರ್ಥಿಗಳ ನೋಂದಣಿಯೊಂದಿಗೆ ಹೊಸ ಕೋರ್ಸ್ ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಮತ್ತು ವಿಜ್ಞಾನ ವಿಭಾಗದ ಡೀನ್ ಪೆÇ್ರ. ತ್ರಂಬಕ್ ಬಿರಾದಾರ್ ಶನಿವಾರ ಕಲಬುರಗಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶರಣಬಸವ ವಿಶ್ವ ವಿದ್ಯಾಲಯವು ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಡೇಟಾ ಸೈನ್ಸ್, ಮಲ್ಟಿಮೀಡಿಯಾ ಮತ್ತು ಆನಿಮೇಷನ್ ಟೆಕ್ನಾಲಜಿ, ಫೆÇೀರೆನ್ಸಿಕ್ ಸೈನ್ಸಸ್, ಜಿಯಾಲಜಿ ಮತ್ತು ರಿಮೋಟ್ ಸೆನ್ಸಿಂಗ್ ಮುಂತಾದ ಉದಯೋನ್ಮುಖ ಕ್ಷೇತ್ರಗಳಲ್ಲಿ ವಿಶೇಷತೆಯೊಂದಿಗೆ ಬಿಎಸ್ಸಿ ಮತ್ತು ಬಿ. ಎಸ್ಸಿ (ಊoಟಿoಡಿs) ಕೋಸ್ರ್ಗಳನ್ನು ನೀಡುವ ಪ್ರದೇಶದ ಮೊದಲ ಸಾಂಪ್ರದಾಯಿಕ ವಿಶ್ವವಿದ್ಯಾಲಯವಾಗಿದೆ.
ಹೊಸ ಕೋರ್ಸ್‍ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಸೇರಿದಂತೆ ಬಿ.ಎಸ್ಸಿಯ ಪ್ರಧಾನ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದು ಪೆÇ್ರ. ಬಿಡವೆ ಮತ್ತು ಪೆÇ್ರ. ಬಿರಾದಾರ್ ತಿಳಿಸಿದ್ದಾರೆ. ಬಿ.ಎಸ್ಸಿ (ಊoಟಿoಡಿs) ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಲು ತಮ್ಮ ಕೊನೆಯ ವರ್ಷದ ಅಧ್ಯಯನದಲ್ಲಿ, ತಮ್ಮ ಆಯ್ಕೆಯ ವಿಶೇಷ ಕ್ಷೇತ್ರದಲ್ಲಿ, ಸಂಶೋಧನಾ ಕಾರ್ಯವನ್ನು ಕೈಗೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಬಿ.ಎಸ್ಸಿ (ಊoಟಿoಡಿs) ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಎಂ.ಎಸ್ಸಿ ಸ್ನಾತಕೋತ್ತರ ಕೋರ್ಸ್‍ನಲ್ಲಿ ಎರಡು ವರ್ಷಗಳ ಬದಲು ಒಂದು ವರ್ಷದಲ್ಲಿ ತಮ್ಮ ಆಯ್ಕೆಯ ವಿಶೇಷ ಕ್ಷೇತ್ರದಲ್ಲಿ ಸ್ನಾತಕೋತ್ತರ ಕೋರ್ಸ್ ಮುಗಿಸುವ ಪ್ರಯೋಜನವನ್ನು ಹೊಂದಿರುತ್ತಾರೆ.
ವಿಶ್ವವಿದ್ಯಾಲಯದಲ್ಲಿ, ಹಲವಾರು ಕಾರಣಗಳಿಂದ ಮತ್ತು ಸೀಟುಗಳ ಕೊರತೆಯಿಂದಾಗಿ ಇಂಜಿನಿಯರಿಂಗ್‍ನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಈ ಹೊಸ ಕೋರ್ಸ್‍ಗಳು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಸ್ಟ್ರೀಮ್‍ನಲ್ಲಿ ನೀಡಲಾಗುವ ಕೋರ್ಸ್‍ಗಳಲ್ಲಿ ತಮ್ಮ ಆಯ್ಕೆಯ ವಿಶೇಷತೆಯನ್ನು ಅಧ್ಯಯನ ಮಾಡುವ ಉತ್ಸಾಹವನ್ನು ಮುಂದುವರಿಸಬಹುದು. ಇದರ ಹೊರತಾಗಿ ಬಿ.ಎಸ್ಸಿ ಮತ್ತು ಬಿ.ಎಸ್ಸಿ (ಊoಟಿoಡಿs)ಗೆ ನಿಗದಿಪಡಿಸಿದ ಶುಲ್ಕಗಳು ಇಂಜಿನಿಯರಿಂಗ್ ಕೋರ್ಸ್‍ಗೆ ನಿಗದಿಪಡಿಸಿದ ಶುಲ್ಕಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಹೊಸ ಕೋರ್ಸ್‍ಗೆ ಸೇರುವ ವಿದ್ಯಾರ್ಥಿಗಳು ಆಯಾ ಇಂಜಿನಿಯರಿಂಗ್ ವಿಭಾಗಗಳಲ್ಲಿ ತಮ್ಮ ವಿಶೇಷತೆಯ ವಿಷಯದ ತರಗತಿಗಳಿಗೆ ಹಾಜರಾಗುತ್ತಾರೆ ಮತ್ತು ಆಯಾ ಇಂಜಿನಿಯರಿಂಗ್ ವಿಭಾಗಗಳಲ್ಲಿ ಅವರ ವಿಶೇಷತೆಗೆ ಸಂಬಂಧಿಸಿದ ಪ್ರಯೋಗಾಲಯ ಕಾರ್ಯಗಳಲ್ಲಿ ಹಾಜರಾಗುತ್ತಾರೆ.
ಕೋರ್ಸ್‍ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಭಾಗವಾಗಿ ಈ ಕೇಂದ್ರಗಳಲ್ಲಿನ ಪ್ರಯೋಗಾಲಯಗಳು ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಪ್ರತಿಷ್ಠಿತ ವಿಧಿವಿಜ್ಞಾನ ಪ್ರಯೋಗಾಲಯಗಳು, ವಿಧಿವಿಜ್ಞಾನ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರಗಳೊಂದಿಗೆ ತಿಳುವಳಿಕೆ ಪತ್ರವನ್ನು ಮಾಡಿಕೊಳ್ಳಲು ವಿಶ್ವವಿದ್ಯಾಲಯವು ಪ್ರಸ್ತಾಪಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ, ಕುಲಸಚಿವ ಡಾ ಎಸ್ ಜಿ ಡೊಳ್ಳೇಗೌಡರ್, ಡೀನ್ ಡಾ ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪೆÇ್ರ. ಕಿರಣ್ ಮಾಕಾ, ವಿಜ್ಞಾನ ವಿಭಾಗದ ಡೀನ್ ಪೆÇ್ರ. ತ್ರಂಬಕ ಬಿರಾದಾರ್, ಚೇರ್‍ಪರ್ಸನ್ ಡಾ. ನಾಗಬಸವಣ್ಣ ಗುರಗೋಳ್ ಮತ್ತಿತರರು ಸೇರಿಕೊಂಡು, ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರನ್ನು ಸನ್ಮಾನಿಸಿದರು. ಪೂಜ್ಯ ಅಪ್ಪಾಜಿ ಮತ್ತು ಮಾತೋಶ್ರೀ ಡಾ ಅವ್ವಾಜಿ ಅವರು ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಎರಡು ಹೊಸ ಉದ್ಯೋಗ ಆಧಾರಿತ ಕೋರ್ಸ್‍ಗಳ ಸೇರ್ಪಡೆಗಾಗಿ ಮತ್ತು ಈ ಹೊಸ ಕೋರ್ಸ್‍ಗಳನ್ನು ಸೇರಿಸಲು ಶ್ರಮಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಆಶೀರ್ವದಿಸಿ ಅಭಿನಂದಿಸಿದರು.