
ಇಂಡಿ:ನ.21: 12ನೇ ಶತಮಾನದಲ್ಲಿ ಬಸವಣ್ಣವರ ಕಾಲದಲ್ಲಿ ಸುಮಾರು 778 ಜನ ಶಿವಶರಣರು 36ಜನ ಶಿವಶರಣೆಯ ಇದ್ದರು. ಅಣ್ಣ ಬಸವಣ್ಣವರು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತೊಡೆದು ಅಸ್ಪರ್ಷತೆ ಜಾತಿಯತೆ, ಸ್ತ್ರೀ ಅಸಮಾನತೆ ಹೊಗಲಾಡಿಸುವ ಮುಖ್ಯ ಉದ್ದೇಶ ಅವರದಾಗಿತ್ತು ಎಂದು ಮಹಿಳಾ ಸಾಹಿತಿ ಗಂಗಾ ಗಲಗಲಿ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹಿಳಾ ಕದಳಿ ವೇದಿಕೆ ಇಂಡಿ, ಶರಣ ಸಾಹಿತ್ಯ ಪರಿಷತ್ತು ಮತ್ತು ಯುವ ಘಟಕ ಮನ ಮನೆಗಳಲ್ಲಿ ಶರಣ ಸಂದೇಶ 52ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆಗಾಗಿ ಅಣ್ಣಬಸವಣ್ಣನವರು ದೊಡ್ಡ ಕ್ರಾಂತಿಯನ್ನೆ ಮಾಡಿದರು. ಆಗ ಅನುಭವ ಮಂಟಪ ಅಧ್ಯಕ್ಷರಾದ ಅಲ್ಲಮಪ್ರಭುಗಳು ಸ್ತ್ರೀಯರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಸ್ತ್ರೀಯರು ಎಂದರೆ ಅಸಾಧಾರಣ ವ್ಯಕ್ತಿತ್ವ ಅವರಲ್ಲಿದ್ದು ಅಗಾದವಾದ ಶಕ್ತಿ ಅಡಗಿದೆ ಎಂದು ಗುಣಗಾನ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರುಗಳು ಎಂ.ಎಂ.ಪತಂಗೆ, ಭವಾನಿ ಗುಳೆದಗುಡ್ಡ ಮಾತನಾಡಿದರು.ಎಸ್.ಡಿ ಎಮ್. ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ, ವಿ.ವಾಯ. ಪತ್ತಾರ, ಸುದರ್ಶನ ಬೇನೂರ, ಬಿ.ಎಸ್.ಪಾಟೀಲ, ರೇಣುಕಾ ಸಂಖ, ಶಶಿಕಲಾ ಬೆಟಗೇರಿ.ಸೇರಿದಂತೆ ಶಿಕ್ಷಕ,ಶಿಕ್ಷಕಿಯರು,ಮಕ್ಕಳು, ಗ್ರಾಮಸ್ಥರು ಇದ್ದರು.

























