
ಕೋಲಾರ, ಜ,೨೩- ಇಂದಿನ ಅಧುನಿಕತೆಯ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜದ ಪಸರಿಸಲು ಶರಣ ಸಾಹಿತ್ಯ ಪರಿಷತ್ ಅಸ್ಥಿತಕ್ಕೆ ತರಲಾಗಿದೆ. ಕಳೆದ ೧೨ನೇಯ ಶತಮಾನದಲ್ಲಿ ಸಮಾಜಿಕ , ಧಾರ್ಮಿಕ, ಸಂಸ್ಕೃತಿ ಸಾಮರಸ್ಯಗಳನ್ನು ಮುಂದಿನ ಪೀಳಿಗೆಗಳಿಗೆ ಸಂದೇಶ ಸಾರಲು ಶರಣ ಸಾಹಿತ್ಯ ವಚನಗಳು ಹಾಗೂ ಜಾನಪದ ಕ್ರಾಂತಿಕಾರಿ ಸಂದೇಶಗಳು ಪೂರಕವಾಗಿದೆ. ಇವುಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿ ಕೊಂಡಾಗ ಮಾತ್ರ ಸಾರ್ಥಕತೆಯ ಬದುಕು ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿಗಳು ,ಅ.ಭಾ.ಶ.ಸಾ.ಪ. ಗೌರವ ಸಲಹೆಗಾರರಾದ ಗೊ.ರು.ಚನ್ನಬಸಪ್ಪ ಅಭಿಪ್ರಾಯ ಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಮೈಸೂರಿನ ಅ.ಭಾ.ಶ.ಸಾ.ಪ.ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಲಾz ಹಿರಿಯ ವಿದ್ಯಾಂಸರಾದ ಕೆ.ಆರ್.ಲಿಂಗಪ್ಪ ಜಾನಪದದ ದತ್ತಿ ಪ್ರಶಸ್ತಿ -೨೦೨೪ ಪ್ರಧಾನ ಮಾಡಿ ಅವರು ಮಾತನಾಡಿದರು.
ಇಂದಿನ ಯುವಕರು ಸಿನಿಮ.ಮೊಬೈಲ್. ವಾಟ್ಸ್‌ಅಪ್, ಇತ್ಯಾದಿಗಳಲ್ಲಿ ಮೊರೆ ಹೋಗಿದ್ದು ಸಾಹಿತ್ಯ, ಕಲೆ, ಸಂಗೀತ, ಜಾನಪದ ಮುಂತಾದ ಸಾಂಸ್ಕೃತಿಕ ಹವ್ಯಾಸಗಳ ಕೊರತೆಯಿದೆ ಎಂದ ಅವರು ಜಗನಾಥ್ ಸಿಂಗ್ ಎಂಬ ಜಾನಪದ ಕಲಾವಿದನ ಕಾರ್ಯಕ್ರಮ ಪ್ರದರ್ಶನದಲ್ಲಿ ಯುವಕರ ಗುಂಪೊಂದು ಸಿನಿಮ ಹಾಡಿಗೆ ಒತ್ತಾಯಿಸಿ ಹತ್ಯೆ ಮಾಡಿರುವಂತ ಪ್ರಕರಣವನ್ನು ಉದಾಹರಿಸಿದ ಅವರು ಯುವಕರು ವಿಕೃತಿಯ ಅನುಕರಣಿಯ ಬೆಳವಣಿಗೆಗಳನ್ನು ತುಂಬಿ ಕೊಂಡಿರುವುದ ವಿಷಾಧನೀಯ ಸಂಗತಿಯಾಗಿದೆ ಎಂದರು.
ಇಂಘಹ ಕಾಲಘಟ್ಟದಲ್ಲಿ ಕೋಲಾರದ ಚಿನ್ನದ ನಾಡಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಾನಪದ ಕಲಾವಿಧರನ್ನು ಗುರುತಿಸಿ ಅವರಿಗೆ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ ಪ್ರಧಾನದ ಕಾರ್ಯಕ್ರಮ ಹಮ್ಮಿ ಕೊಂಡಿರುವುದು ಅಭಿನಂದನೆಯ ಸಂಗತಿಯಾಗಿದೆ ಎಂದ ಅವರು ಆಡಳಿತ ಸರ್ಕಾರಗಳು ಜನಸಂಸ್ಕೃತಿಗಳ ಉಳಿವಿಗಾಗಿ ಬಜೆಟ್‌ಗಳಲ್ಲಿ ಜಾನಪದ ಅಕಾಡೆಮಿಗೆ ಅನುದಾನವನ್ನು ಬಿಡುಗಡೆ ಮಾಡುವಂತಾಗ ಬೇಕು.ಜಾನಪದ ಕಲಾವಿದರಿಗೂ ವಿಶ್ರಾಂತಿ ವೇತನಗಳನ್ನು ಮಂಜೂರು ಮಾಡುವಂತಾಗ ಬೇಕು ಎಂದು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ಜಾನಪದ ಸಾಹಿತ್ಯಗಳಿಗೆ ಹಿರಿಯ ಸಾಹಿತಿಗಳಾದ ಗೊ,ರು,.ಚೆನ್ನಪ್ಪ ಅವರು ಹೊಸ ಮುನ್ನುಡಿ ಬರೆದಿದ್ದಾರೆ. ೧೨ನೇ ಶತಮಾನದ ಬಸವಣ್ಣನವರು ಸಮಾನತೆ,ಜಾತ್ಯಾತೀತತೆಯ ಸಂದೇಶಗಳ ಜೂತೆಗೆ ಸತ್ಯದ ಸಂದೇಶದ ಚಳುವಳಿಯ ಕ್ರಾಂತಿಕಾರಿ ಚಳುವಳಿಯನ್ನು ಮಾಡಿದರು. ತಾವು ರಚಿಸಿದ ವಚನಗಳು. ತತ್ವದ ಆಚಾರ ವಿಚಾರಗಳನ್ನು ವಚನದ ಮೂಲಕ ಸಮಾಜದಲ್ಲಿ ಜ್ಞಾನ ವಿಕಾಸವನ್ನು ಪಸರಿಸಿದರು. ಶಿಕ್ಷಣ, ಸಮಾನತೆ, ಸಾರ್ವಜನಿಕರ ಸ್ವತ್ತು ಎಂಬುವುದನ್ನು ಪ್ರತಿಪಾದಿಸುವ ಮೂಲಕ ರಾಜ್ಯದ ನಾಡಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ ಸರ್ವರಿಗೂ ಉಣಬಡಿಸುವ ಮೂಲಕ ಜ್ಞಾನಾಭಿವೃದ್ದಿ ಪಡೆಸಿದರು ಎಂದರು
ಬುದ್ದ,ಬಸವ,ಅಂಬೇಡ್ಕರ್ ಇವರುಗಳ ಸಮಾಜದಲ್ಲಿ ಮಾನವೀಯತೆಗೆ ಮುನ್ನುಡಿ ಬರೆದ ಸಮ ಸಮಾಜದ ಅಭಿವೃದ್ದಿ ಹರಿಕಾರರು ಸಮಾಜದಲ್ಲಿ ಬಹುತೇಕರು ಬದುಕಿಯೂ ಸತ್ತಂತೆ ಇರುವರು. ಇನ್ನು ಕೆಲವರು ಸತ್ತರೂ ಬದುಕಿದಂತೆ ಇರುವರು ಇವರ ಸಾಲಿನಲ್ಲಿ ಬರುವಂತ ಈ ತ್ರಿಮೂರ್ತಿಗಳ ತತ್ವ ಆದರ್ಶಗಳನ್ನು ಪಾಲಿಸುವಂತಾದರೆ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅ.ಭಾ.ಶ.ಸಾ.ಪ. ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಮಾತನಾಡಿ ಶರಣ ಸಾಹಿತ್ಯ ಪರಿಷತ್ ಅಭಿವೃದ್ದಿಗೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಕನಿಷ್ಠ ಶೇ ೧ ರಷ್ಟು ಅನುದಾನ ಬಿಡುಗಡೆ ಮಾಡ ಬೇಕೆಂದು ಮನವಿ ಮಾಡಿದರು.
ಪ್ರಶಸ್ತಿ ಪುರಸ್ಕೃತರಾದ ಜನಪದ ಗಾಯಕ ಎನ್.ಮೋಹನ್ ಅವರು ಮಾತನಾಡಿ ನೆಲ ಸಂಸ್ಕೃತಿಯನ್ನು ಉಳಿಸುವ ದೆಸೆಯಲ್ಲಿ ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಲಾಗಿದೆ. ಇಂದು ವಚನಗಳು. ಜಾನಪದ. ಸಾಹಿತ್ಯ ತತ್ವ ಪದ, ಸಂಸ್ಕೃತಿಗಳು ಇಂದು ಮರೆಯಾಗುತ್ತಿದ್ದು ಮೊಬೈಲ್ ಸಂಸ್ಕೃತಿಯಾಗಿ ಪರಿವರ್ತನೆಯಾಗಿರುವುದು ಎಂದು ವಿಷಾದಿಸಿದರು.
ಸಂಗೀತಾ. ಜಾನಪದ ಗೀತೆಗಳಿಗೆ ಅಂದು ಮಳೆ ರಾಯನನ್ನು ಕರೆಸುವಂತ ತಾಕತ್ತು ಸಂಗೀತಾದಲ್ಲಿ ಅಡಕವಾಗಿದ್ದವು, ಇಂಥಹ ಮಹಾನ್ ಶಕ್ತಿಯನ್ನು ಹೊಂದಿರುವ ಜಾಪದಗಳಲ್ಲಿ ಹಲವಾರು ಪ್ರಕಾರಗಳಿವೆ. ಇವುಗಳನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ಉಳಿಸ ಬೇಕಾಗಿದೆ. ಇಂಥಹ ಕಾರ್ಯಕ್ರಮಗಳ ಮೂಲಕ ಹಾಗೂ ಪ್ರಶಸ್ತಿ ಪ್ರಧಾನ ಗೌರವಿಸುವುದು ಪ್ರೇರಣೆಯ ಜೂತೆಗೆ ಹೆಚ್ಚಿನ ಜವಾಬ್ದಾರಿಯಾಗಿದೆ. ಎಂದರು.
ಈ ಸಂದರ್ಭದಲ್ಲಿ ಹಲವಾರು ಪ್ರಕಾರದ ಜಾನಪದ ಗೀತೆಗಳನ್ನು ಹಾಡುವ ಮೂಲಕ ಸಭಿಕರನ್ನು ಮುಗ್ದಗೊಳಿಸಿ ಮನ ರಂಜಿಸಿದರು. ಇದಕ್ಕೂ ಮುನ್ನ ಕೆಂಪಮ್ಮ ಅವರು ಸಹ ಸೋಬಾನೆ ಹಾಡನ್ನು ಹಾಡುವ ಮೂಲಕ ತಮ್ಮಲ್ಲಿನ ಪ್ರತಿಭೆಯನ್ನು ಹೊರ ಹೊಮ್ಮಿದರು.
ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಎಂ.ಚೆನ್ನಪ್ಪನವರು ಮಾತನಾಡಿ ಮಾನವನ ಜೀವನದ ಸಾರ್ಥಕತೆಗೆ ವಚನಗಳು ಆದರ್ಶವಾಗಿದೆ. ಪೂಜೆ ಪುನಸ್ಕಾರಗಳ ಡಂಭಚಾರUಳಿಗಿಂತ ಕಾಯಕವೇ ಕೈಲಾಸವೆಂದು ಶ್ರಮಿಸುವುದೇ ಅರ್ಥಪೂರ್ಣವಾದದ್ದು ನಾವು ಪ್ರಮಾಣಿಕರಾಗಿದ್ದು ನಾವು ಹೋಗುವ ದಾರಿ ಸತ್ಯ, ಧರ್ಮಗಳಿಂದ ಕೊಡಿರುವಂತಾಗ ಬೇಕು. ವಚನ ಸಾಹಿತ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತಾಗ ಬೇಕೆಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ ಶರಣ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಜಾನಪದ ಪ್ರತಿಭಾವಂತರನ್ನು ಗುರುತಿಸಿ ದತ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಅರ್ಥಪೂರ್ಣ ವಾಗಿದೆ. ಜಾನಪದ ಪ್ರಶಸ್ತಿ ಪುರಸ್ಕೃತ ಎನ್. ಮೋಹನ್ ಕುಮಾರ್ ಅವರು ಅತ್ಯಂತ ಅದ್ಬೂತವಾದ ಗೀತೆಗಳ ಮೂಲಕ ಮಂತ್ರ ಮುಗ್ದರನ್ನಾಗಿಸಿದ್ದಾರೆ ಎಂದು ಶ್ಲಾಘಿಸಿದ ಅವರು ಜಾನಪದ ತರಭೇತಿ ನೀಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹಂಚಿಕೆ ಮಾಡುವಂತಾಗ ಬೇಕೆಂದು ಅಭಿಪ್ರಾಯಪಟ್ಟರು
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಸುರೇಶ್ ಪ್ರಸ್ತಾವಿಕ ನುಡಿಗಳಾಡಿ ಶರಣ ಸಾಹಿತ್ಯ ಪರಿಷತ್ ಸೂತ್ತೂರು ಶ್ರೀಗಳು ಸ್ಥಾಪಿಸಿದರು. ಶರಣರ ವಚನಗಳು, ದಾಸರ ಪದಗಳು ಜನರಿಗೆ ತಲುಪಿಸುವ ದೆಸೆಯಲ್ಲಿ ಸ್ಥಾಪಿಸಿದ ಈ ಪರಿಷತ್ ಸಮಾನ್ಯ ಜನರಿಗೆ ಜ್ಞಾನದ ಸಂಪತ್ತು ತಲುಪಿಸುವಂತ ಕಾಯಕದಲ್ಲಿ ತೊಡಗಿಸಿ ಕೊಂಡಿದೆ.ಫ.ಗು. ಹಳಘಟ್ಟಿ ಅವರು ವಚನಗಳ ಸಂಶೋಧನೆ ಮತ್ತು ಸಂಗ್ರಹಗಳ ಮೂಲಕ ವಚನಗಳನ್ನು ಪ್ರಚಾರ ಮಾಡಿದ ಹಿನ್ನಲೆಯಲ್ಲಿ ವಚನ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
ಈ ಹಿಂದಿನ ಅಧ್ಯಕ್ಷರಾದ ಜ್ಞಾನಮೂರ್ತಿ ಅವರ ಪುತ್ರರಾದ ಪ್ರಸನ್ನ ಅವರು ತಮ್ಮ ತಂದೆಯ ನೆನಪಿನಾರ್ಥವಾಗಿ ೨೫ ಸಾವಿರ ರೂಗಳನ್ನು ಪತ್ರಿಷ್ಠಾನದ ದತ್ತಿ ನಿಧಿಗೆ ನೀಡಿದ್ದಾರೆ. ದತ್ತಿ ಹಣದ ಬಡ್ಡಿ ಹಣದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಪ್ರತಿಭಾವಂತರಿಗೆ ಅವರ ಪ್ರಶಸ್ತಿಗಳನ್ನು ನೀಡಿ ಪುರಸ್ಕಾರಿಸಲಾಗುವುದು. ಇದರ ಜೂತೆಗೆ ವಚನ ಸಾಹತ್ಯದ ಜ್ಞಾನದ ಸಂಪತ್ತನ್ನು ಪಸರಿಸಲು ಪೂರಕವಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಚ್ಚಳಿಯವರಿಂದ ಭಿನ್ನ ಭೇದವ ಮಾಡದಿರಣ್ಣ ಎಂಬ ಜಾನಪದ ಗೀತೆಯನ್ನು ಹಾಡುವ ಮೂಲಕ ಮನರಂಚಿಸಿದರು.
ವೇದಿಕೆಯಲ್ಲಿ ಕೆ.ಆರ್. ಲಿಂಗಪ್ಪ ಅವರ ಪುತ್ರ ಡಾ. ಪಂಚಾಕ್ಷರಿ ಅವರು ಉಪಸ್ಥಿತರಿದ್ದರು. ಅಕ್ಕನ ಬಳಗದವರಿಂದ ವಚನಗಳಾದವು. ಚಿನ್ಮಯ ಶಾಲೆಯ ಆರ್.ಸಿ, ಮಂಜುನಾಥ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಬೆಮಲ್ ಶೇಖರಪ್ಪ ಸ್ವಾಗತಿಸಿದರು.




























