
ಕಲಬುರಗಿ :ಮಾ.10: ಉನ್ನತ ಶಿಕ್ಷಣ ಸಂಸ್ಥೆ ಮತ್ತು ಕಾಲೇಜು ಅಧ್ಯಾಪಕರು ನಾವೀನ್ಯ ಬೋಧನಾ ತಂತ್ರಗಳ ಅಳವಡಿಕೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ವಿಷಯದ ಅರಿವು, ಆಸಕ್ತಿ, ಸಕ್ರಿಯ ಕಲಿಕಾ ಮತ್ತು ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹಿಸಬೇಕು ಎಂದು ಕಲಬುರಗಿ ವಿಟಿಯು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಪೆÇ್ರ. ಶುಭಾಂಗಿ ಡಿ.ಸಿ. ಸಲಹೆ ನೀಡಿದರು
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೂಸಾ/ಪಿಎಂ-ಉμÁ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ ಫ್ಯಾಕಲ್ಟಿ ಡೆವಲಪ್‍ಮೆಂಟ್ ಪೆÇ್ರೀಗ್ರಾಂ (ಎಫ್‍ಡಿಪಿ) “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ ಬೋಧನಾ ತಂತ್ರಗಳು ಮತ್ತು ಪಠ್ಯಕ್ರಮ ಚೌಕಟ್ಟು” ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಬದಲಾಗುತ್ತಿರುವ ಶೈಕ್ಷಣಿಕ ಕ್ಷೇತ್ರಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆ, ಪಠ್ಯಕ್ರಮ ಚೌಕಟ್ಟು, ಬೋಧನಾ ವಿಧಾನ, ತಂತ್ರಜ್ಞಾನ ಬಳಕೆ, ವಿಷಯದ ಗ್ರಹಿಕೆಯೊಂದಿಗೆ ಎಐ, ರೋಬೋಟ್ ತಾಂತ್ರಿಕ ಅರಿವು ಮೂಡಿಸಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂದರು.
ಮ್ಯಾಜಿಕ್ ಬಸ್ ಇಂಡಿಯಾ ತರಬೇತಿ ಅಧಿಕಾರಿ ಜೋಶುವಾ ಡೇನಿಯಲ್ ಮಾತನಾಡಿ ವಿವಿಧ ವೃತ್ತಿಪರ ಸಂಸ್ಥೆಗಳ ಅಗತ್ಯ ಕೌಶಲ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕಲಿಕೆ ವಿಧಾನ ನಡುವಿನ ಅಂತರ ಕಡಿಮೆಗೊಳಿಸಲು ಶಿಕ್ಷಣದ ಜೊತೆಗೆ ಅಗತ್ಯ ವೃತ್ತಿ ಕೌಶಲ್ಯ, ವೃತ್ತಿ ಜ್ಞಾನ ಮತ್ತು ವೃತ್ತಿ ಅನುಭವ ಬೋಧಿಸಬೇಕು. ಉದ್ಯಮ ಜಗತ್ತಿಗೆ ವಿದ್ಯಾರ್ಥಿಗಳು ಮುಕ್ತವಾಗಿ ತೆರೆದುಕೊಳ್ಳಲು ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನದ ಕಲಿಕೆಗೂ ಪ್ರೋತ್ಸಾಹಿಸಬೇಕು ಎಂದರು.
ಜೆಕಾರ್ತಿಕೇಯ ತರಬೇತಿ ಸಲಹಾ ಸಂಸ್ಥೆಯ ಸಿಇಓ ಡಾ. ಅಭಯ್ ಸರ್ದೇಶ್‍ಪಾಂಡೆ ಮಾತನಾಡಿ ಇಂದಿನ ಗುಣಮಟ್ಟ ಶಿಕ್ಷಣದೊಂದಿಗೆ ಮಾನವನ ನಡವಳಿಕೆ ಬದಲಾವಣೆಗೊಳ್ಳಬೇಕು. ಹಾಗೆಯೇ ಶಿಕ್ಷಕರು ಮತ್ತು ಶೈಕ್ಷಣಿಕ ಸುಧಾರಣೆಗೆ ಈ ತರಬೇತಿಯಿಂದ ವರ್ಡ್ ಟು ವಲ್ರ್ಡ್ ಲರ್ನಿಂಗ್ ಸಾಧವಾಗಲಿದೆ. ಶಿಕ್ಷಕರು ಪ್ರಾಯೋಗಿಕ ಮತ್ತು ಸಂವಾದಾತ್ಮಕ ಬೋಧನೆಗೆ ಒತ್ತು ನೀಡಬೇಕು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್ ಉಡಿಕೇರಿ ಅಧ್ಯಕ್ಷತೆವಹಿಸಿ ಮಾತನಾಡಿ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬೋಧನೆ ಶಿಕ್ಷಕರ ವೃತ್ತಿ ಜೀವನದ ಅವಿಭಾಜ್ಯ ಅಂಗ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಮಾನ್ಯತೆ ಮತ್ತು ಉನ್ನತ ಶಿಕ್ಷಣದಲ್ಲಿ ಉತ್ಕøಷ್ಟತೆ ಸಾಧಿಸಲು ಪ್ಯಾಕಲ್ಟಿ ಡೆವಲಪಮೆಂಟ್ ಕಾರ್ಯಕ್ರಮ ಬಹಳ ಮುಖ್ಯ. ಶಿಕ್ಷಕರು ತರಬೇತಿ ಮತ್ತು ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮಾಹಿತಿ ತಂತ್ರಜ್ಞಾನದಿಂದ ಶಿಕ್ಷಣ, ಸಂಶೋಧನೆ, ಅಗತ್ಯ ಸಂಪನ್ಮೂಲಗಳ ಲಬ್ಯತೆ, ಕೌಶಲ್ಯ ಸಾಧ್ಯವಾಗುತ್ತಿದೆ. ಮಾನವನ ವಿನೂತನ ಆಲೋಚನೆಗೆ ಎಐ ಸಾಧನಗಳು ನೆರವಾಗುತ್ತಿವೆ. ಆದರಿಂದ ಶಿಕ್ಷಕರು ಬೋಧನಾ ತಂತ್ರದೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಶ್ರಮಿಸಬೇಕು ಎಂದರು.
ವಿದ್ಯಾ ವಿಷಯಕ ಪರಿಷತ್ ಸದಸ್ಯ ಪೆÇ್ರ. ಹೂವಿನಭಾವಿ ಬಾಬಣ್ಣ, ಮೌಲ್ಯಮಾಪನ ಕುಲಸಚಿವ ಪೆÇ್ರ. ಎನ್.ಜಿ. ಕಣ್ಣೂರು, ಹಣಕಾಸು ಅಧಿಕಾರಿ ಶ್ರೀಮತಿ. ಜಯಾಂಬಿಕಾ ಉಪಸ್ಥಿತಿರಿದ್ದರು. ಅನ್ವಯಿಕ ವಿದ್ಯುನ್ಮಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಆರ್. ಎಲ್ ರಾಯಭಾಗಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪೆÇ್ರ. ರಮೇಶ್ ಲಂಡನ್ಕರ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಪ್ರೊ. ಮಲಶೆಟ್ಟಿ, ಡಾ. ಸುರೇಶ್ ಜಂಗೆ ಹಾಗೂ ಡಾ. ಟಿ. ನಿಂಗಣ್ಣ ಅತಿಥಿಗಳನ್ನು ಪರಿಚಯಿಸಿದರು. ಸಂಗೀತಾ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸ್ನಾಕತೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಮಹಾವಿದ್ಯಾಲಯಗಳ ಅಧ್ಯಾಪಕರು ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಸದಸ್ಯರಾದ ರೇಖಾ ಕುಮಾರಿ, ಜಾಬೆಜ್, ಪೌಜಿತ ಭಾಗವಹಿಸಿದ್ದರು.
ಹೊಸದನ್ನು ಕಲಿಯುವ ಜೊತೆಗೆ ವಿದ್ಯಾರ್ಥಿಗಳನ್ನು ಕೌಶಲ ಕಲಿಕೆಯ ಕಡೆಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ. ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ತರಬೇತಿಯಿಂದ ಬೋಧನೆ ಮತ್ತು ಸಂಶೋಧನೆಯಲ್ಲಿ ನಿರಂತರತೆ ಕಾಯ್ದುಕೊಂಡರೆ ಸಾಧನೆ ಮಾಡಬಹುದು. ಯಾವುದೇ ಸಂಶೋಧನೆ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು. ಯಾವುದೇ ಸಂಶೋಧಕ ಪರಿಶ್ರಮಪಟ್ಟರೆ ಪ್ರತಿಷ್ಠಿತ ಜರ್ನಲ್‍ಗಳಲ್ಲಿ ಲೇಖನ ಪ್ರಕಟಗೊಂಡು ಪೇಟೆಂಟ್ ಪಡೆಯಬಹುದು.
- ಪೆÇ್ರ. ಶುಭಾಂಗಿ ಡಿ.ಸಿ
ಪ್ರಾದೇಶಿಕ ನಿರ್ದೇಶಕರು
ವಿಟಿಯು ಪ್ರಾದೇಶಿಕ ಕೇಂದ್ರ. ಕಲಬುರಗಿ


















