12 ರಂದು ಶಾಂತಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ,ಸೆ.9: ಲಿಂಗೈಕ್ಯ ಶಾಂತಪ್ಪಾ ಪಾಟೀಲ ನರಿಬೋಳ ಅವರ 12ನೇ ಪೂಣ್ಯಸ್ಮರಣೆ ಅಂಗವಾಗಿ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನ ವತಿಯಿಂದ ನೀಡುವ ಶಾಂತಶ್ರೀ ಪ್ರಶಸ್ತಿಗೆ ಈ ಬಾರಿ ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ,ಕಲಬರುಗಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಡಾ.ಆನಂದ ಕೆಟಗರಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ
ಈ ಬಾರಿ ಪ್ರಶಸ್ತಿ ಪ್ರದಾನ ಜೊತೆಗೆ ಶ್ರೇಷ್ಠ ತನಿಖೆಗಾಗಿ ಕೇಂದ್ರ ಗೃಹ ಮಂತ್ರಾಲಯದ ರಾಷ್ಟ್ರ ಪ್ರಶಸ್ತಿ ಪಡೆದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ರಾಷ್ಟ್ರ ಮಟ್ಟದ ಜ್ಯೋತಿಬಾಫುಲೆ ಪ್ರಶಸ್ತಿ ಪಡೆದ ಮಹಿಳಾ ರಾಷ್ಟ್ರ ರಕ್ಷಣಾ ಪಡೆ ಅದ್ಯಕ್ಷರಾದ ಜಯಂತಿಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ 20 ಸಾಧಕರನ್ನು ಸನ್ಮಾನಿಸಲಾಗುವುದು.ಸೆ. 12 ರಂದು ನಗರದ ಕನ್ನಡಭವನದಲ್ಲಿ ಸಂಜೆ 5.45ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.